ಬೆಂಗಳೂರು: ಕಾಂಬೋಡಿಯಾದಿಂದ (Cambodia) ಸಿಲಿಕಾನ್ ಸಿಟಿಗೆ (Silicon City) ಸಪ್ಲೈ ಆಗ್ತಿದ್ದ 12 ಲಕ್ಷ ರೂ. ಮೌಲ್ಯದ ನಕಲಿ ಸಿಗರೇಟ್ ಅನ್ನು ಏರ್ಪೋರ್ಟ್ ಪೊಲೀಸರಿಂದ (Airport Police) ಸೀಜ್ ಮಾಡಿದ್ದಾರೆ.
ವಿಮಾನದ ಮೂಲಕ ಹೈದರ್ ಎಂಬ ವ್ಯಕ್ತಿ ಸುಮಾರು ಐದು ಕಾರ್ಟನ್ ಬ್ಲಾಕ್ಸ್ಗಳಲ್ಲಿ ನಕಲಿ ಸಿಗರೇಟ್ಗಳನ್ನು ಸಾಗಾಟ ಮಾಡುತ್ತಿದ್ದ. ಈ ಬಗ್ಗೆ ಐಟಿಸಿ ಕಂಪನಿಯ ಪ್ರತಿನಿಧಿ ನೀಡಿದ ಮಾಹಿತಿಯ ಮೇರೆಗೆ ಏರ್ಪೋರ್ಟ್ ಪೊಲೀಸರು ಈ ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಸೇರಿದ ಯುಜುವೇಂದ್ರ ಚಾಹಲ್
ದಾಳಿಯ ವೇಳೆ ನಕಲಿ ಸಿಗರೇಟ್ ಹಾಗೂ ವಿದೇಶಿ ಸಿಗರೇಟ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದರಲ್ಲಿ 10 ಸಾವಿರ ಮತ್ತು 40 ಸಾವಿರ ಬೇರೆ ರೀತಿಯ ಸಿಗರೇಟ್ಗಳು ಸೇರಿವೆ. ಸದ್ಯ ಏರ್ಪೋರ್ಟ್ ಪೊಲೀಸರು ಆರೋಪಿ ಹೈದರ್ನನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ.
