-ಆ.17ರಂದು ಫ್ಲವರ್ ಶೋಗೆ ತೆರೆ
ಬೆಂಗಳೂರು: ನಗರದ ಲಾಲ್‌ಬಾಗ್‌ನಲ್ಲಿ ನಡೆಯುತ್ತಿರುವ 220ನೇ ಫಲಪುಷ್ಪ ಪ್ರದರ್ಶನಕ್ಕೆ (Lalbagh Flower Show) ಭರ್ಜರಿ ಜನಸ್ಪಂದನೆ ವ್ಯಕ್ತವಾಗಿದ್ದು, ಒಂದೇ ದಿನ ಬರೋಬ್ಬರಿ 1.46 ಲಕ್ಷ ಮಂದಿ ಪ್ರದರ್ಶನವನ್ನು ವೀಕ್ಷಿಸಿದ್ದಾರೆ.
ಆಗಸ್ಟ್ 6ರಿಂದ 17ರವರೆಗೆ ನಡೆಯುತ್ತಿರುವ ಈ ಬಾರಿಯ ಫಲಪುಷ್ಪ ಪ್ರದರ್ಶನವನ್ನು `ಗಂಗಾ ಸಾಮ್ರಾಜ್ಯ ವೈಭವ’ ಎಂಬ ವಿಶೇಷ ಥೀಮ್‌ನಲ್ಲಿ ಆಯೋಜಿಸಲಾಗಿದೆ. ಪ್ರದರ್ಶನದ ಕೊನೆಯ ದಿನ ಸಮೀಪಿಸುತ್ತಿದ್ದಂತೆ ಲಾಲ್‌ಬಾಗ್‌ಗೆ ಜನಸಾಗರವೇ ಹರಿದುಬರುತ್ತಿದೆ. ಇದನ್ನೂ ಓದಿ: UGC-NET ಪ್ರಶ್ನೆಪತ್ರಿಕೆಯಲ್ಲಿ ಲೋಪ: 3 ಪತ್ರಿಕೆಗಳಿಗೆ ಮರು ಪರೀಕ್ಷೆ – ಎನ್‌ಟಿಎ ಘೋಷಣೆ

ಆಗಸ್ಟ್ 16ರಂದು ಒಟ್ಟು 1,46,000 ಮಂದಿ ಫಲಪುಷ್ಪ ಪ್ರದರ್ಶನಕ್ಕೆ ಭೇಟಿ ನೀಡಿದ್ದಾರೆ. ಈ ಪೈಕಿ 97,950 ಮಂದಿ ವಯಸ್ಕರಾಗಿದ್ದರೆ, 32,400 ಮಕ್ಕಳು ಹಾಗೂ 15,650 ವಿದ್ಯಾರ್ಥಿಗಳು ಪ್ರದರ್ಶನವನ್ನು ಕಣ್ತುಂಬಿಕೊಂಡಿದ್ದಾರೆ. ಇದನ್ನೂ ಓದಿ: ಭೀಮಾ ತೀರದಲ್ಲಿ ಮತ್ತೆ ಹರಿದ ನೆತ್ತರು – ನಿವೃತ್ತ ಶಿಕ್ಷಕನ ಬರ್ಬರ ಹತ್ಯೆ
ಒಂದೇ ದಿನದಲ್ಲಿ ಟಿಕೆಟ್ ಮಾರಾಟದಿಂದ ಸುಮಾರು 70 ಲಕ್ಷ ರೂ. ಆದಾಯ ಸಂಗ್ರಹವಾಗಿದೆ. ವಾರಾಂತ್ಯವಾಗಿದ್ದ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಕುಟುಂಬ ಸಮೇತರಾಗಿ ಲಾಲ್‌ಬಾಗ್‌ಗೆ ಆಗಮಿಸಿದ್ದರು. ಇದನ್ನೂ ಓದಿ: ನಾಗರ ಪಂಚಮಿ: ದ.ಕನ್ನಡ ಜಿಲ್ಲೆಯ ಶಾಲಾ-ಕಾಲೇಜು, ಸರ್ಕಾರಿ ಕಚೇರಿಗಳಿಗೆ ನಾಳೆ ರಜೆ
`ಗಂಗಾ ಸಾಮ್ರಾಜ್ಯ ವೈಭವ’ ಥೀಮ್‌ನಲ್ಲಿ ಮೂಡಿಬಂದಿರುವ ವಿವಿಧ ಪುಷ್ಪ ಕಲಾಕೃತಿಗಳು, ಹೂವಿನ ಅಲಂಕಾರಗಳು ಹಾಗೂ ವಿಶೇಷ ಪ್ರದರ್ಶನಗಳು ಸಾರ್ವಜನಿಕರ ಗಮನ ಸೆಳೆಯುತ್ತಿವೆ. ಮಕ್ಕಳು, ವಿದ್ಯಾರ್ಥಿಗಳು ಸೇರಿದಂತೆ ವಿವಿಧ ವಯೋಮಾನದವರು ಫ್ಲವರ್ ಶೋ ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಇದನ್ನೂ ಓದಿ: ಆಯತಪ್ಪಿ ಕೊಡಚಾದ್ರಿ ಬೆಟ್ಟದಿಂದ ಬಿದ್ದ ಪ್ರವಾಸಿಗ – ಜೀಪ್ ಚಾಲಕರಿಂದ ಉಳಿಯಿತು ಜೀವ

ಆಗಸ್ಟ್ 6ರಂದು ಆರಂಭಗೊಂಡಿರುವ ಈ ವರ್ಷದ ಫಲಪುಷ್ಪ ಪ್ರದರ್ಶನಕ್ಕೆ ಆರಂಭದಿಂದಲೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದೀಗ ಪ್ರದರ್ಶನದ ಅಂತಿಮ ದಿನ ಸಮೀಪಿಸಿರುವುದರಿಂದ ಜನಸಂದಣಿ ಮತ್ತಷ್ಟು ಹೆಚ್ಚಾಗಿದೆ. ಇದನ್ನೂ ಓದಿ: ತ.ನಾಡಿಗೆ ಕಾವೇರಿ ನೀರು ಹರಿಸುವ ವಿಚಾರ; ನಾಳೆ ಸುಪ್ರೀಂನಲ್ಲಿ ಅರ್ಜಿ ವಿಚಾರಣೆ
ನಾಳೆ ಫ್ಲವರ್ ಶೋಗೆ ತೆರೆ:
ಆಗಸ್ಟ್ 17ರಂದು 220ನೇ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನಕ್ಕೆ ತೆರೆ ಬೀಳಲಿದೆ. ಹೀಗಾಗಿ ಕೊನೆಯ ದಿನವೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭೇಟಿ ನೀಡುವ ನಿರೀಕ್ಷೆಯಿದೆ. ಇದನ್ನೂ ಓದಿ: ವೀಕೆಂಡ್ ರಜೆಗೆ ಆದಿಯೋಗಿ ದರ್ಶನಕ್ಕೆ ಬಂದ ಯುವಕ-ಯುವತಿ ಅಪಘಾತಕ್ಕೆ ಬಲಿ

