ಶಿವಮೊಗ್ಗ: ಕೊಡಚಾದ್ರಿ (Kodachadri) ಬೆಟ್ಟದಿಂದ ಆಯತಪ್ಪಿ ಕೆಳಗೆ ಬಿದಿದ್ದ ಪ್ರವಾಸಿಗನನ್ನು (Tourist) ಜೀಪ್ ಚಾಲಕರರು ರಕ್ಷಣೆ ಮಾಡುವಲ್ಲಿ ಯಶಸ್ಸಿಯಾಗಿದ್ದು, ಪ್ರವಾಸಿ ಜೀಪ್ ಚಾಲಕರ ಸಮಯ ಪ್ರಜ್ಞೆಯಿಂದ ಪ್ರವಾಸಿಗನ ಜೀವ ಉಳಿದಿರುವ ಘಟನೆ ಹೊಸನಗರ (Hosanagara) ತಾಲೂಕಿನಲ್ಲಿ ನಡೆದಿದೆ.

ಕುಮುಟಾ ಮೂಲದ ಪ್ರದೀಪ್ ಕೆಳಗೆ ಬಿದ್ದಿರುವ ಪ್ರವಾಸಿಗ. ಹೊಸನಗರ ತಾಲೂಕಿನ ಕೊಡಚಾದ್ರಿ ಬೆಟ್ಟಕ್ಕೆ ಪ್ರವಾಸ ಬಂದಿದ್ದ ಪ್ರದೀಪ್ ಕೊಡಚಾದ್ರಿಯ ಶಂಕರಾಚಾರ್ಯ ಪೀಠದ ಸಮೀಪ ತೆರಳುವಾಗ ತಲೆ ಸುತ್ತಿದ್ದರಿಂದ ಆಯತಪ್ಪಿ 60 ಅಡಿ ಕೆಳಗೆ ಬಿದ್ದಿದ್ದಾನೆ. ಕೂಡಲೇ ಪೊಲೀಸರು ಹಾಗೂ ಅರಣ್ಯಾಧಿಕಾರಿಗಳಿಗೆ ಪ್ರವಾಸಿಗರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ವೀಕೆಂಡ್ ರಜೆಗೆ ಆದಿಯೋಗಿ ದರ್ಶನಕ್ಕೆ ಬಂದ ಯುವಕ-ಯುವತಿ ಅಪಘಾತಕ್ಕೆ ಬಲಿ
ಮಾಹಿತಿ ತಿಳಿಯುತ್ತಿದ್ದಂತೆ ಅಲ್ಲೇ ಇದ್ದ ಕೊಲ್ಲೂರು, ನಿಟ್ಟೂರು, ಸಂಪೆಕಟ್ಟೆ ಭಾಗದ ಜೀಪ್ ಚಾಲಕರು ರಕ್ಷಣೆ ಕಾರ್ಯಾಚರಣೆ ನಡೆಸಿ, ಪ್ರದೀಪ್‌ನನ್ನು ರಕ್ಷಿಸಿದ್ದಾರೆ. ಘಟನೆಯಿಂದ ಪ್ರವಾಸಿಗ ಪ್ರದೀಪ್ ತಲೆ, ಕಾಲು – ಕೈ ಭಾಗದಲ್ಲಿ ಸಣ್ಣಪುಟ್ಟ ಗಾಯಗಳಾಗಿದ್ದು, ನಗರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಧಾರವಾಡ | ಅಪಾರ್ಟ್‌ಮೆಂಟ್ ಮನೆ ಬೀಗ ಮುರಿದು 1.55 ಲಕ್ಷ ಮೌಲ್ಯದ ಲ್ಯಾಪ್‌ಟಾಪ್, ಮೊಬೈಲ್ ಕಳವು
