ರಂಗಭೂಮಿ ದಂತಕಥೆ ಗುಬ್ಬಿ ವೀರಣ್ಣನವರ (Gubbi Veeranna) ಮೊಮ್ಮಗಳು, ಖ್ಯಾತ ನಟಿ ಸುಂದರಶ್ರೀ (Sundarashree) ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಎಡಗೈಗೆ ಸ್ಟ್ರೋಕ್ ಆಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿರಿಯ ನಟಿ ಸುಂದರಶ್ರೀ ಅವರ ವೈದ್ಯಕೀಯ ಖರ್ಚು 26 ಲಕ್ಷ ಮೀರಿದ್ದು, ಇನ್ನೂ ಹೆಚ್ಚಿನ ಹಣದ ಅವಶ್ಯಕತೆ ಇದೆ ಎಂದು ಕುಟುಂಬ ಮೂಲಗಳು ಹೇಳಿವೆ. ಹೀಗಾಗಿ, ಹಣದ ಸಹಾಯಕ್ಕೆ ಹಿರಿಯ ನಟಿ ಅಂಗಲಾಚಿ ವಿಡಿಯೋ ಹರಿ ಬಿಟ್ಟಿದ್ದಾರೆ. ಕನ್ನಡ ಚಿತ್ರರಂಗ ಹಾಗೂ ಚಿತ್ರ ಪ್ರೇಮಿಗಳಲ್ಲಿ ನೆರವಿಗೆ ಮನವಿ ಮಾಡಿಕೊಂಡಿದ್ದಾರೆ. ಹಿರಿಯ ನಟಿಯ ಅಸಹಾಯಕ ಸ್ಥಿತಿಯ ವಿಡಿಯೋ ನೋಡುಗರನ್ನು ವಿಚಲಿತರನ್ನಾಗಿಸಿದೆ. ಇದನ್ನೂ ಓದಿ: ವಿಜಯ್ ಸೇತುಪತಿ ನಟನೆಯ ‘ಸ್ಲಮ್ ಡಾಗ್’ ಚಿತ್ರದ ಎಮೋಷನಲ್ ಗ್ಲಿಂಪ್ಸ್
ಶಂಕರ್ನಾಗ್ ಅವರ `ಮಾಲ್ಗುಡಿ ಡೇಸ್’ ಸೀರಿಯಲ್ ಸೇರಿದಂತೆ ಅನೇಕ ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ಅಭಿನಯಸಿರುವ ಸುಂದರಶ್ರೀಯವರ ಅಭಿನಯವನ್ನು ಗುಪ್ತಗಾಮಿನಿ, ಸೀತೆ, ಜೊತೆ ಜೊತೆಯಲಿ ಹಾಗೂ ಇತ್ತೀಚೆಗೆ ಪುಟ್ಟಕ್ಕನ ಮಕ್ಕಳು ಸೇರಿದಂತೆ ನಟನೆಯಲ್ಲಿ ಸಕ್ರಿಯರಾಗಿದ್ದರು. ಗುಬ್ಬಿ ವೀರಣ್ಣನವರ ಕುಟುಂಬ ಎಂಬ ಹಣೆಪಟ್ಟಿ ಹೊತ್ತು ಅಭಿನಯ ಜಗತ್ತಿಗೆ ಕಾಲಿಟ್ಟಿದ್ದರೂ ತಮ್ಮದೇ ಆದ ಛಾಪು ಮೂಡಿಸಿದ್ದ, ನಟಿ ಇದೀಗ ಅಸಹಾಯಕ ಸ್ಥಿತಿಯನ್ನು ತಲುಪಿರುವುದು ದುರಂತ.

