ಬೆಂಗಳೂರು: ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ (PG Medical Course) ಪ್ರವೇಶಕ್ಕೆ ಎರಡನೇ ಸುತ್ತಿನಲ್ಲಿ ಸೀಟು ಹಂಚಿಕೆ ನಂತರ ರದ್ದುಪಡಿಸಿಕೊಳ್ಳಲು ಇಚ್ಚಿಸುವವರಿಗೆ ಚಾಯ್ಸ್-4 ಹಾಕಿ ಹೊರ ಹೋಗಲು ನ.25ರಂದು ಬೆಳಿಗ್ಗೆ 10 ಗಂಟೆವರೆಗೆ ಅವಕಾಶ ನೀಡಲಾಗಿದೆ ಎಂದು ಕೆಇಎ (KEA) ಕಾರ್ಯನಿರ್ವಾಹಕ ನಿರ್ದೇಶಕ ಪ್ರಸನ್ನ ತಿಳಿಸಿದ್ದಾರೆ.
ರದ್ದುಪಡಿಸಿಕೊಂಡ ಸೀಟುಗಳನ್ನು ಎರಡನೇ ಸುತ್ತಿನ ಕೌನ್ಸೆಲಿಂಗ್ಗೆ ಸೇರಿಸಿಕೊಂಡು ಪುನಃ ಸೀಟು ಹಂಚಿಕೆ ಮಾಡಲು ತೀರ್ಮಾನಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ. ಇದನ್ನೂ ಓದಿ: ಏಕಕಾಲಕ್ಕೆ ಬಾಗಲಕೋಟೆ ಜಿಲ್ಲೆಯ 8 ಉಪನೋಂದಣಾಧಿಕಾರಿ ಕಛೇರಿಗಳ ಮೇಲೆ ಲೋಕಾ ದಾಳಿ
ಎಂಸಿಸಿಯಲ್ಲಿ ಸೀಟು ಹಂಚಿಕೆಯಾದವರಿಗೂ ಕೆಇಎನಲ್ಲೂ ಸೀಟು ಹಂಚಿಕೆಯಾಗಿದ್ದು, ಅಂತಹವರಿಗೆ ಅನುಕೂಲವಾಗಲಿಯೆಂದು ಚಾಯ್ಸ್-4 ಹಾಕಿ ಉಚಿತವಾಗಿ ಹೊರವಹೋಗಲು ಅವಕಾಶ ನೀಡಲಾಗಿದೆ ಎಂದು ಅವರು ವಿವರಿಸಿದ್ದಾರೆ. ಇದನ್ನೂ ಓದಿ: ಸೇನಾ ಸಿಬ್ಬಂದಿಗೆ ಫೇಸ್ಬುಕ್, ಸ್ನ್ಯಾಪ್ಚಾಟ್, ಹಿಂಜ್, PUBG ಸೇರಿ 87 ಆ್ಯಪ್ ಬಳಕೆಗೆ ನಿರ್ಬಂಧ
