ಮಂಗಳೂರು: ನಾಗರ ಪಂಚಮಿ (Nagara Panchami) ಹಬ್ಬ ಹಿನ್ನೆಲೆಯಲ್ಲಿ ನಾಳೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಗೆ ಸರ್ಕಾರಿ ರಜೆ ಘೋಷಿಸಲಾಗಿದೆ.

ಹಬ್ಬದ ಹಿನ್ನೆಲೆ ಶಾಲಾ-ಕಾಲೇಜುಗಳು, ಸರ್ಕಾರಿ ಕಚೇರಿಗಳಿಗೆ ನಾಳೆಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಶ್ರಾವಣ ಮಾಸದ ಮೊದಲ ಭಕ್ತಿ, ಬಾಂಧವ್ಯದ ಹಬ್ಬ ನಾಗರ ಪಂಚಮಿ
ಜಿಲ್ಲೆಯಲ್ಲಿ ಪ್ರತಿ ಕುಟುಂಬಗಳು ನಾಗರ ಪಂಚಮಿಯನ್ನು ಆಚರಿಸಲಿವೆ. ಕುಟುಂಬದ ಮೂಲಸ್ಥಾನದಲ್ಲಿ ಹಬ್ಬ ಆಚರಣೆಯಾಗಲಿದೆ. ಹೀಗಾಗಿ, ಸರ್ಕಾರಿ ರಜೆ ನೀಡಬೇಕೆಂದು ಶಾಸಕ ವೇದವ್ಯಾಸ ಕಾಮತ್ ಆಗ್ರಹಿಸಿದ್ದರು.
ಹಿಂದೂ(Hindu) ಸಂಸ್ಕೃತಿಯಲ್ಲಿ ಸಾಲು ಸಾಲು ಹಬ್ಬಗಳ ಆಗಮನಕ್ಕೆ ಮಂಗಲಮಯ ಮುನ್ನುಡಿ ಬರೆಯುವ ಮೊದಲ ಪವಿತ್ರ ಪರ್ವವೇ ನಾಗರ ಪಂಚಮಿ. ಪ್ರತಿವರ್ಷ ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿಯಂದು(Nagara Panchami) ಆಚರಿಸಲಾಗುವ ಈ ದಿನ, ನಾಗ ದೇವತೆಯನ್ನು ಅತ್ಯಂತ ಶ್ರದ್ಧೆ, ಭಕ್ತಿ ಮತ್ತು ಕೃತಜ್ಞತೆಯಿಂದ ಪೂಜಿಸುವುದು ಅನಾದಿ ಕಾಲದಿಂದಲೂ ಬಂದ ಶ್ರೇಷ್ಠ ಸಂಪ್ರದಾಯ. ಇದನ್ನೂ ಓದಿ: Nagara Panchami| ಕಾಳಿಂಗನ ಅಹಂಕಾರವನ್ನು ಕೃಷ್ಣ ಮುರಿದಿದ್ದು ಹೇಗೆ?
