ಗಾಲ್: ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಪಂದ್ಯದ 2ನೇ ದಿನದ ಅಂತ್ಯಕ್ಕೆ ಟೀಂ ಇಂಡಿಯಾ 9 ವಿಕೆಟ್ ನಷ್ಟಕ್ಕೆ 460 ರನ್ ಗಳಿಸಿದೆ.

2ನೇ ದಿನದಾಟದಲ್ಲಿ ಉತ್ತಮ ಪ್ರದರ್ಶನ ನೀಡಿದ ಕನ್ನಡಿಗ ದೇವದತ್ತ ಪಡಿಕ್ಕಲ್ 167 ರನ್ ಗಳಿಸಿ ಔಟಾದರು. ಪಡಿಕ್ಕಲ್‌ಗೆ ಸಾಥ್ ನೀಡಿದ್ದ ರಿಷಭ್ ಪಂತ್ 39 ರನ್ ಗಳಿಸಿ ಔಟಾದರು. ನಂತರ ಬಂದ ಧ್ರುವ್ ಜುರೇಲ್ ಉತ್ತಮ ಆಟವಾಡಿ 51 ರನ್ ಕಲೆಹಾಕಿ ಪೆವಿಲಿಯನ್ ಕಡೆ ನಡೆದರು. ಜೈಸ್ವಾಲ್ 32, ಕೆ.ಎಲ್.ರಾಹುಲ್ 82 ರನ್ ಗಳಿಸಿ ನಿನ್ನೆಯ ಆಟದಲ್ಲಿ ಔಟಾಗಿದ್ದರು.
2ನೇ ದಿನದಾಟದ ಅಂತ್ಯಕ್ಕೆ ಭಾರತ 460 ರನ್ ಗಳಿಸಿದೆ. ಪ್ರಸಿದ್ಧ ಕೃಷ್ಣ ಮತ್ತು ಕುಲ್ದೀಪ್ ಯಾದವ್ ಕ್ರೀಸ್‌ನಲ್ಲಿದ್ದಾರೆ.
