ಉಡುಪಿ: ನಾಗರ ಪಂಚಮಿ (Nagara Panchami) ಹಬ್ಬದ ಹಿನ್ನೆಲೆ ಉಡುಪಿ (Udupi) ಜಿಲ್ಲೆಯ ಶಾಲಾ-ಕಾಲೇಜು ಹಾಗೂ ಸರ್ಕಾರಿ ಕಚೇರಿಗಳಿಗೆ ಆಗಸ್ಟ್ 17ರ ಸೋಮವಾರದಂದು ಸಾರ್ವತ್ರಿಕ ರಜೆ (Holiday) ಘೋಷಿಸಲಾಗಿದೆ.

ಶಾಲಾ-ಕಾಲೇಜು ಸೇರಿದಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಹಾಗೂ ಸರ್ಕಾರಿ ಕಚೇರಿಗಳಿಗೆ ಸೋಮವಾರ ರಜೆ ಘೋಷಿಸಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಲಾಲ್‌ಬಾಗ್ ಫ್ಲವರ್ ಶೋಗೆ ಭರ್ಜರಿ ರೆಸ್ಪಾನ್ಸ್ – ಒಂದೇ ದಿನ 1.46 ಲಕ್ಷ ಮಂದಿ ಭೇಟಿ, 70 ಲಕ್ಷ ರೂ. ಆದಾಯ
ನಾಗರ ಪಂಚಮಿ ಹಬ್ಬವು ನಾಗ ದೇವತೆಗಳ ಅಥವಾ ಸರ್ಪ ದೇವತೆಗಳ ಆರಾಧನೆಗೆ ಮೀಸಲಾಗಿರುವ ಪ್ರಮುಖ ಹಿಂದೂ ಹಬ್ಬವಾಗಿದೆ. ಶ್ರಾವಣ ಪವಿತ್ರ ತಿಂಗಳಲ್ಲಿ ಆಚರಿಸಲಾಗುವ ಈ ಹಬ್ಬವು ಭಕ್ತಿ, ರಕ್ಷಣೆ, ಪ್ರಕೃತಿಯ ಬಗ್ಗೆ ಗೌರವ ಮತ್ತು ವನ್ಯಜೀವಿಗಳೊಂದಿಗೆ ಶಾಂತಿಯುತ ಸಹಬಾಳ್ವೆಯನ್ನು ನಡೆಸಬೇಕೆಂಬುದನ್ನು ಪ್ರತಿನಿಧಿಸುತ್ತದೆ. ಇದನ್ನೂ ಓದಿ: UGC-NET ಪ್ರಶ್ನೆಪತ್ರಿಕೆಯಲ್ಲಿ ಲೋಪ: 3 ಪತ್ರಿಕೆಗಳಿಗೆ ಮರು ಪರೀಕ್ಷೆ – ಎನ್‌ಟಿಎ ಘೋಷಣೆ
ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ತುಳು ಭಾಗದಲ್ಲಿ ನಾಗರ ಪಂಚಮಿ ಅತ್ಯಂತ ಪವಿತ್ರ ಹಾಗೂ ವಿಶೇಷ ಸ್ಥಾನವಿದೆ. ಪರಶುರಾಮ ಸೃಷ್ಟಿಯ ನಾಡು ಎಂದೇ ಗುರುತಿಸಿಕೊಂಡಿರುವ ಈ ಭಾಗದಲ್ಲಿ ನಾಗಾರಾಧನೆಗೆ ಪ್ರಮುಖ ಸ್ಥಾನವಿದೆ. ಪ್ರಕೃತಿ ಹಾಗೂ ದೈವಿಕ ಶಕ್ತಿಯ ಸಂಕಲ್ಪವಾಗಿ ನಾಗರಪಂಚಮಿಯನ್ನು ತುಳುನಾಡಿನಲ್ಲಿ ಆಚರಿಸಲಾಗುತ್ತಿದೆ. ಪ್ರಮುಖ ಆಚರಣೆಯಾಗಿರುವ ಕಾರಣ ನಾಳೆ (ಆ.17) ಸಾರ್ವತ್ರಿಕ ರಜೆ ಘೋಷಣೆ ಮಾಡಲಾಗಿದೆ. ಇದನ್ನೂ ಓದಿ: ಭೀಮಾ ತೀರದಲ್ಲಿ ಮತ್ತೆ ಹರಿದ ನೆತ್ತರು – ನಿವೃತ್ತ ಶಿಕ್ಷಕನ ಬರ್ಬರ ಹತ್ಯೆ
ನಾಗರಪಂಚಮಿಯಂದು ನಾಗ ದೇವನಿಗೆ ಪೂಜೆ ಸಲ್ಲಿಸುವುದು ಸರ್ಪದೋಷ, ಆರೋಗ್ಯ ವೃದ್ಧಿ, ಸಂಕಷ್ಟಗಳ ಪರಿಹಾರ, ಸಂತಾನ ಭಾಗ್ಯ ಸೇರಿದಂತೆ ನೆಮ್ಮದಿಯ ಜೀವನ ಸಿಗಲಿದೆ ಎಂಬ ನಂಬಿಕೆ ಈ ಭಾಗದಲ್ಲಿದೆ. ಹೀಗಾಗಿ ತುಳು ಭಾಗದಲ್ಲಿರುವ ನಾಗಬನಗಳು, ನಾಗ ಮೂಲ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಯಲಿದೆ . ಹಾಲು, ಏಳನೀರು, ತುಪ್ಪ, ಗಂಧ, ಹೂವುಗಳ ಅಭಿಷೇಕ ಮಾಡಲಾಗುತ್ತದೆ. ಇದನ್ನೂ ಓದಿ: ನಾಗರ ಪಂಚಮಿ: ದ.ಕನ್ನಡ ಜಿಲ್ಲೆಯ ಶಾಲಾ-ಕಾಲೇಜು, ಸರ್ಕಾರಿ ಕಚೇರಿಗಳಿಗೆ ನಾಳೆ ರಜೆ
