ಶಿವಮೊಗ್ಗ: ನಗರ ಹೊರವಲಯದ ತ್ಯಾವರೆಕೊಪ್ಪದಲ್ಲಿನ ಹುಲಿ (Tiger Dashami) ಮತ್ತು ಸಿಂಹಧಾಮದಲ್ಲಿದ್ದ 17 ವರ್ಷದ ಹೆಣ್ಣು ಹುಲಿ ದಶಮಿ ವಯೋಸಹಜ ಕಾಯಿಲೆಯಿಂದ ಮೃಗಾಲಯದಲ್ಲಿಂದು ಮೃತಪಟ್ಟಿದೆ.
ವೃದ್ಧಾಪ್ಯದ ಕಾರಣಕ್ಕೆ ಆರೋಗ್ಯ ಸಮಸ್ಯೆ ಹೊಂದಿದ್ದ ದಶಮಿ ಪಾರ್ಶ್ವವಾಯು ಸಮಸ್ಯೆಯಿಂದ ಬಳಲುತ್ತಿತ್ತು. ಇದಕ್ಕೆ ಕಳೆದ 10 ದಿನಗಳಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಇಂದು ಚಿಕಿತ್ಸೆಗೆ ಸ್ಪಂದಿಸದೇ ದಶಮಿ ಹುಲಿ ಸಾವನ್ನಪ್ಪಿದೆ. ಇದನ್ನೂ ಓದಿ: ತಗಡಿನ ಮನೆಗೆ ಬೆಂಕಿ; ಕ್ಷಣಾರ್ಧದಲ್ಲಿ ಸುಟ್ಟು ಕರಕಲಾದ ಗೃಹೋಪಯೋಗಿ ವಸ್ತುಗಳು
ಹೆಣ್ಣು ಹುಲಿ ದಶಮಿ ಶಿವಮೊಗ್ಗ ಮೃಗಾಲಯದಲ್ಲೇ ಜನಿಸಿತ್ತು. ಕಳೆದ 17 ವರ್ಷದಿಂದ ಮೃಗಾಲಯದ ಭಾಗವಾಗಿದ್ದ ದಶಮಿ ಸಾವನ್ನಪ್ಪಿರುವುದು ಪ್ರವಾಸಿಗರಲ್ಲೂ ನೋವುಂಟು ಮಾಡಿದೆ.
ಸೋಮವಾರ ಪಶು ವೈದ್ಯಕೀಯ ಕಾಲೇಜಿನ ವೈದ್ಯರಿಂದ ದಶಮಿಯ ಮರಣೋತ್ತರ ಪರೀಕ್ಷೆ ನಡೆಯಲಿದೆ ಎಂದು ಮೃಗಾಲಯದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಮರಾಕ್ಷರ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ವಿಟ್ಲಪಿಂಡಿ ಉತ್ಸವ ವೇಳೆ ರಥದಿಂದ ಕೆಳಗೆ ಬಿದ್ದ ಕೃಷ್ಣನ ಮಣ್ಣಿನ ಮೂರ್ತಿ
