Bollywood

ಇಂದು ಸನ್ನಿ ಲಿಯೋನ್ ಬರ್ತ್‍ಡೇ: ಸನ್ನಿ ಬಗ್ಗೆ ನಿಮಗೆ ಗೊತ್ತಿರದ 13 ಸಂಗತಿಗಳು ಇಲ್ಲಿವೆ

Published

on

Share this

ಮುಂಬೈ: ಬಾಲಿವುಡ್‍ನ ಲೈಲಾ ಸನ್ನಿ ಲಿಯೋನ್ ಇಂದು ತಮ್ಮ 35ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 2012ರಲ್ಲಿ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟ ಸನ್ನಿ ತಮ್ಮ ಮೋಹಕತೆಯಿಂದ ತಮ್ಮದೇ ಆದ ಅಭಿಮಾನಿ ಬಳಗವನ್ನ ಹೊಂದಿದ್ದಾರೆ.

View this post on Instagram

Morning Lilu love!! @dirrty99

A post shared by Sunny Leone (@sunnyleone) on

ಸನ್ನಿ ಲಿಯೋನ್ ಕೆನಡದ ಒಂಟೋರಿಯಾದಲ್ಲಿ ಸಿಖ್ ಕುಟುಂಬದಲ್ಲಿ ಜನಿಸಿದ್ದು, ಅವರ ಹಿಂದಿನ ಹೆಸರು ಕರಣ್‍ಜಿತ್ ಕೌರ್ ವೋಹ್ರಾ. ಪೂಜಾ ಭಟ್ ನಿರ್ಮಾಣದ `ಜಿಸ್ಮ್-2′ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದರು. ಅದಕ್ಕೂ ಮುಂಚೆ ಸನ್ನಿ ಭಾರತದ ರಿಯಾಲಿಟಿ ಶೋವೊಂದರಲ್ಲಿ ಭಾಗವಹಿಸದಿದ್ರು. ಸನ್ನಿ ಬಗ್ಗೆ ನಿಮಗೆ ಗೊತ್ತಿರದ 13 ವಿಷಯಗಳು ಇಲ್ಲಿವೆ.

1. ಸನ್ನಿ ಲಿಯೋನ್ 2001ರ ಮಾರ್ಚ್‍ನಲ್ಲಿ ಅಮೆರಿಕದ ಪೆಂಟ್‍ಹೌಸ್ ಮ್ಯಾಗಜೀನ್‍ನ ಪೆಂಟ್‍ಹೌಸ್ ಪೆಟ್ ಆಫ್ ದಿ ಮಂತ್ ಆಗಿದ್ರು. 2003ರಲ್ಲಿ ಪೆಂಟ್‍ಹೌಸ್ ಪೆಟ್ ಆಫ್ ದಿ ಇಯರ್ ಆಗಿದ್ರು.

2. ಸನ್ನಿ ಲಿಯೋನ್‍ಗೆ ಊಟವೆಂದ್ರೆ ಬಲು ಇಷ್ಟ. ಹಬೆಯಲ್ಲಿ ಬೇಯಿಸಿದ ಲೈಮ್ ಫಿಶ್ ಸನ್ನಿಯ ಆಲ್ ಟೈಮ್ ಫೇವರೆಟ್ ಫುಡ್. ದೆಹಲಿಯ ಗಲ್ಲಿಗಳಲ್ಲಿ ಮಾರುವ ಕರಿದ ತಿನಿಸು, ಗೋಲ್‍ಗಪ್ಪಾ ಮತ್ತು ದಹಿ ಚಾಟ್ಸ್ , ಪರಾಟಾ ಹಾಗೂ ಚಾಕಲೇಟ್ ಸನ್ನಿಗೆ ಬಲು ಇಷ್ಟವಾದ ತಿನಿಸುಗಳು.

3. ಬಿಬಿಸಿಯ 2016ನೇ ವರ್ಷದ ವಿಶ್ವದ 100 ಪ್ರಭಾವಿ ಮಹಿಳೆಯರಲ್ಲಿ ಸನ್ನಿ ಲಿಯೋನ್ ಕೂಡ ಒಬ್ಬರಾಗಿದ್ರು.

4. ಕ್ಯಾನ್ಸರ್ ರೋಗಿಗಳ ಚಾರಿಟಿಗಳಿಗೆ ಸನ್ನಿ ಧನಸಹಾಯ ಮಾಡ್ತಾರೆ ಹಾಗೂ ಪ್ರಾಣಿ ಹಕ್ಕುಗಳು ಹೋರಾಟಗಾರ್ತಿಯೂ ಆಗಿದ್ದಾರೆ.

View this post on Instagram

Is it too late now to say sorry!! Haha LILU!!!

A post shared by Sunny Leone (@sunnyleone) on

5. ನರ್ಸಿಂಗ್ ಓದುತ್ತಿದ್ದ ಸನ್ನಿ ಪಾರ್ಟ್ ಟೈಮ್‍ನಲ್ಲಿ ಡ್ಯಾನ್ಸರ್ ಆಗಿ ಕೆಲಸ ಮಾಡುತ್ತಿದ್ದರು. ಗೆಳತಿಯ ಸಲಹೆಯ ಮೇರೆಗೆ ಮಾಡೆಲಿಂಗ್ ಮಾಡಲಾರಂಭಿಸಿದ ಸನ್ನಿ ಅದರಲ್ಲೂ ಯಶಸ್ಸು ಗಳಿಸಿದರು. ಮುಂದೆ ಪೆಂಟಾಹೌಸ್ ಮ್ಯಾಗಜಿನ್ ಕಡೆಗೆ ಹೋದ್ರು. ಈ ಮ್ಯಾಗಜೀನ್‍ನ ನಿರ್ಮಾತೃ ಸನ್ನಿಗೆ `ಲಿಯೋನ್’ ಎಂದು ತನ್ನ ಹೆಸರಿನ ಜೊತೆ ಸೇರಿಸಿಕೊಳ್ಳುವಂತೆ ಸಲಹೆ ನೀಡಿದ್ರು.

View this post on Instagram

Fun fun!!

A post shared by Sunny Leone (@sunnyleone) on

6. 2016ರಲ್ಲಿ ಭಾರತದಲ್ಲಿ ಪ್ರಥಮ ಬಾರಿಗೆ ತನ್ನದೇ ಸ್ವಂತ ಆ್ಯಪ್ ಲಾಂಚ್ ಮಾಡಿದ ಮೊದಲ ಸೆಲೆಬ್ರೆಟಿ ಎಂಬ ಹೆಗ್ಗಳಿಕೆ ಸನ್ನಿ ಲಿಯೋನ್‍ಗಿದೆ.

8. ಸನ್ನಿ ತಾನು ತುಂಬಾ ನಾಚಿಕೆ ಸ್ವಭಾವದವಳು ಅಂತಮುರ್ಖಿ ಅನ್ನೋ ಸಂಗತಿಯನ್ನ ಹೇಳಿಕೊಂಡಿದ್ರು. 2016ರಲ್ಲಿ ರಯೀಸ್ ಚಿತ್ರದ ಪ್ರಮೋಶನ್ ವೇಳೆ ಎಲ್ಲರೊಂದಿಗೆ ಸ್ನೇಹದಿಂದ ಮಾತನಾಡೋದನ್ನ ಕಲಿತೆ ಎಂಬುದನ್ನ ಬಹಿರಂಗಪಡಿಸಿದ್ದಾರೆ.

9. ಬಾಲಿವುಡ್‍ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್‍ಖಾನ್ ಅವರೊಂದಿಗೆ ನಟಿಸುವ ಆಸೆಯನ್ನು ಸನ್ನಿ ವ್ಯಕ್ತಪಡಿಸಿದ್ದಾರೆ.

10. 2009ರ ಜನವರಿ 20ರಂದು ಸನ್ನಿ ಫಿಲ್ಮ್ ಮೇಕರ್ ಡೇನಿಯಲ್ ವೇಬರ್ ಅವರೊಂದಿಗೆ ಸಿಖ್ ಸಂಪ್ರದಾಯದಂತೆ ಮದುವೆ ಆಗುವುದರೊಂದಿಗೆ ಸಾಂಸಾರಿಕ ಜೀವನಕ್ಕೆ ಕಾಲಿಟ್ಟರು. ಡೇನಿಯಲ್ ತಮ್ಮ ಪತ್ನಿಯನ್ನು `ಬೇಬಿ’ ಎಂದು, ಸನ್ನಿ ತಮ್ಮ ಪತಿಯನ್ನು `ಡಾಲಿ’ ಎಂದು ಪ್ರೀತಿಯಿಂದ ಕರೆಯುತ್ತಾರಂತೆ.

View this post on Instagram

All thanks to @dirrty99!! ❤️❤️❤️

A post shared by Sunny Leone (@sunnyleone) on

11. ಟೋರೆಂಟೂ ಮೂಲದ ನಿರ್ದೇಶಕ ದಿಲೀಪ್ ಮೆಹ್ತಾ ಸನ್ನಿ ಬಗ್ಗೆ ಸಾಕ್ಷ್ಯಚಿತ್ರವೊಂದನ್ನ ತಯಾರಿಸಿದ್ದು, ಇದು 2016ರಲ್ಲಿ ಟೊರಾಂಟೋ ಇಂಟರ್‍ನ್ಯಾಷನಲ್ ಫಿಲ್ಮ್ ಫೆಸ್ಟಿವಲ್‍ನಲ್ಲಿ ಪ್ರದರ್ಶನಗೊಂಡಿತ್ತು. ಆದರೆ ಇದನ್ನು ಭಾರತದಲ್ಲಿ ರಿಲೀಸ್ ಮಾಡುವುದು ಸನ್ನಿಗೆ ಇಷ್ಟವಿಲ್ಲ.

View this post on Instagram

Love this pic with @dirrty99

A post shared by Sunny Leone (@sunnyleone) on

12. ಸಾಮಾಜಿಕ ಜಾಲತಾಣಗಳಲ್ಲಿ ಸನ್ನಿ ಬಗ್ಗೆ ಪ್ರತಿದಿನ ಸಾಕಷ್ಟು ಟ್ರಾಲ್‍ಗಳು ಹರಿದಾಡುತ್ತವೆ. ಇದರಿಂದ ಮುಕ್ತಿ ಹೊಂದಲು ಸನ್ನಿಯ ಬಳಿ ಒಂದು ಮಂತ್ರವಿದೆ- ಅದೇ ಅವರನ್ನು ಬ್ಲಾಕ್ ಮಾಡುವುದು.

View this post on Instagram

Love my @xtouchdevice phone!! Dubai Launch!

A post shared by Sunny Leone (@sunnyleone) on

13. ಸಾಮಾಜಿಕ ಜಾಲತಾಣಗಳಲ್ಲಿ ಸನ್ನಿ ಲಿಯೋನ್ ಬಾಲಿವುಡ್ ಸ್ಟಾರ್‍ಗಳನ್ನು ಫಾಲೋ ಮಾಡ್ತಾರೆ. ಮಾಧುರಿ ದೀಕ್ಷಿತ್, ಆಮೀರ್ ಖಾನ್, ಸೋನಮ್ ಕಪೂರ್ ಮತ್ತು ರಣ್‍ವೀರ್ ಸಿಂಗ್ ಅಂದ್ರೆ ಸನ್ನಿಗೆ ಇಷ್ಟ.

Click to comment

Leave a Reply

Your email address will not be published. Required fields are marked *

Advertisement
Bengaluru City10 mins ago

ರಾಜ್ಯದಲ್ಲಿ ಇಳಿಕೆ ಕಂಡ ಕೊರೊನಾ ಪ್ರಕರಣ – ಇಂದು 783 ಕೇಸ್

Cinema22 mins ago

ಹೆತ್ತವರ ವಿರುದ್ಧ ದೂರು ದಾಖಲಿಸಿದ ನಟ

Latest1 hour ago

ಲಸಿಕೆ ವಿತರಣೆ ದಾಖಲೆ ಬಗ್ಗೆ ಕೇಂದ್ರ ಸರ್ಕಾರವನ್ನು ಟೀಕಿಸಿದ ರಾಹುಲ್ ಗಾಂಧಿ

Dakshina Kannada2 hours ago

ಸಿಎಂಗೆ ಕೊಲೆ ಬೆದರಿಕೆ ಹಾಕಿದ್ದ ಧರ್ಮೇಂದ್ರ ಬಂಧನ

Cinema2 hours ago

ಮತ್ತೆ ನಾಗವಲ್ಲಿಯಾಗ್ತಾಳಾ ಸ್ವೀಟಿ?

Latest2 hours ago

ಬಾಲಕಿ ಕೆನ್ನೆ ಕಚ್ಚಿದ್ದ ಶಿಕ್ಷಕನಿಗೆ ಪೊಲೀಸರ ಮುಂದೆಯೇ ಥಳಿಸಿದ ಸ್ಥಳೀಯರು

Latest2 hours ago

ಚರಣ್‍ಜಿತ್ ಸಿಂಗ್ ಛನ್ನಿ ಪಂಜಾಬ್‍ನ ನೂತನ ಸಿಎಂ

Districts2 hours ago

ಕಲಬುರಗಿಯಲ್ಲಿ 36ನೇ ಪತ್ರಕರ್ತರ ರಾಜ್ಯ ಸಮ್ಮೇಳನ

Bengaluru City2 hours ago

ಐವರ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ – ಶಂಕರ್, ಇಬ್ಬರು ಅಳಿಯಂದಿರ ವಿರುದ್ಧ ದೂರು ದಾಖಲು

Districts2 hours ago

ಕಾಡಾನೆ ಕಂಡು ಗಾಬರಿಯಾಗಿ ಮರಕ್ಕೆ ಕಾರು ಡಿಕ್ಕಿ ಹೊಡೆದ.!