ಸ್ಯಾಂಡಲ್‌ವುಡ್‌ನಲ್ಲಿ `ನೆಪೋಟಿಸಂ’ ಬಿರುಸಿನ ಚರ್ಚೆಯ ಬಳಿಕ ಇದೀಗ ಬುಧವಾರ ಬೆಳ್ಳಂಬೆಳಗ್ಗೆ ಕಿಚ್ಚ ಸುದೀಪ್ (Kichcha Sudeep) ತಮ್ಮ ಅಭಿಮಾನಿಗಳಿಗೆ ಜಬರ್ದಸ್ತ್ ನ್ಯೂಸ್ ಕೊಟ್ಟಿದ್ದಾರೆ. ನಾಲ್ಕು ಚಿತ್ರಗಳನ್ನ ತಾವು ಈಗಾಗ್ಲೇ ಲಾಕ್ ಮಾಡ್ಕೊಂಡಿರೋ ವಿಚಾರ ಅಧಿಕೃತವಾಗಿ ಘೋಷಿಸಿದ್ದಾರೆ ಕಿಚ್ಚ. ಜೊತೆಗೆ ಅವರ ಬಿಆರ್‌ಬಿ (ಬಿಲ್ಲಾ ರಂಗ ಭಾಷ) ಚಿತ್ರ ಇದೇ ವರ್ಷದಲ್ಲೇ ರಿಲೀಸ್ ಆಗುವ ಅತಿ ರೋಚಕ ಸುದ್ದಿಯನ್ನ ತಮ್ಮ ಎಕ್ಸ್ ಖಾತೆಯಲ್ಲಿ ಘೋಷಣೆ ಮಾಡಿದ್ದಾರೆ.
ಅಭಿಮಾನಿಗಳನ್ನ ಉದ್ದೇಶಿಸಿ ಮಾಹಿತಿ ಹಂಚಿಕೊಂಡ ಕಿಚ್ಚ ಸುದೀಪ್ ‘ಸಿನಿಮಾ ಮಾಡೋದು ಬಿಟ್ಟು ಬೇರೇನೂ ಬೇಕಾಗಿಲ್ಲ. ನೀವು ಕೊಡುವ ಪ್ರೀತಿ ಕಾಳಜಿ ನನ್ನನ್ನು ಸಿನಿಮಾ ಮಾಡುವ ಉತ್ಸಾಹಕ್ಕೆ ಸದಾ ಪ್ರೇರೇಪಿಸುತ್ತಲೇ ಇರುತ್ತೆ. ನೀವು ಕೊಡುವ ಉತ್ತೇಜನವನ್ನ ನಾನು ಲಘುವಾಗಿ ತೆಗೆದುಕೊಂಡಿಲ್ಲ. ಬೇರೆ ವಿಚಾರಗಳ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. 2026ಕ್ಕೆ ಬಿಆರ್‌ಬಿ ಚಿತ್ರದ ಜೊತೆ ನಿಮ್ಮ ಮುಂದೆ ಬರುತ್ತೇನೆ. ಜೊತೆಗೆ 4 ಸ್ಕ್ರಿಪ್ಟ್‌ಗಳನ್ನು ಲಾಕ್ ಮಾಡಿದ್ದು, ಶೀಘ್ರದಲ್ಲೇ ಅದರ ಬಗ್ಗೆ ಮಹಿತಿ ಕೊಡಲಿದ್ದೇನೆ’ ಎಂದಿದ್ದಾರೆ ಸುದೀಪ್. ಇದನ್ನೂ ಓದಿ: ವಿಜಯ್ ಸೇತುಪತಿ ಎದುರು ಅಬ್ಬರಿಸಿದ ದುನಿಯಾ ವಿಜಯ್
I hear you all.
I do.. ♥️
Here is something you all should know.
Keeping myslf busy with other things wasn’t coz I took any bit of your luv, or this blessed career for granted.
There is nothing i luv , more than making a movie, to tell stories, and to entertain.
This “… https://t.co/peX8Pg72sE
— Kichcha Sudeepa (@KicchaSudeep) June 10, 2026
ಅಂದಹಾಗೆ ಒಟ್ಟೊಟ್ಟಿಗೆ ನಾಲ್ಕು ಸಿನಿಮಾಗಳನ್ನ ಕೈಗೆತ್ತಿಕೊಂಡಿರುವ ಕಿಚ್ಚ ಸುದೀಪ್ ಈ ಕುರಿತು ಶೀಘ್ರದಲ್ಲೇ ಮಾಹಿತಿ ನೀಡಲಿದ್ದಾರೆ. ಮುಖ್ಯವಾಗಿ ಇಲ್ಲಿ ಸುದೀಪ್ ನಿರ್ದೇಶನ ಮಾಡ್ತಾರೆ ಅನ್ನೋದೇ ವಿಶೇಷ. ಮಾಣಿಕ್ಯ ಚಿತ್ರದ ಬಳಿಕ ಕಿಚ್ಚ ನಟನೆ ಜೊತೆಗೆ ನಿರ್ದೇಶನ ಮಾಡ್ತಿರೋದು ಫ್ಯಾನ್ಸ್‌ಗೆ ಎಕ್ಸೈಟಿಂಗ್ ನ್ಯೂಸ್ ಆಗಿತ್ತು. ಈ ವದಂತಿ ಸುದ್ದಿಯನ್ನ ಇದೀಗ ಖಚಿತಪಡಿಸಿದ್ದಾರೆ ಕಿಚ್ಚ. ಜೊತೆಗೆ ಬಿಆರ್‌ಬಿ ಚಿತ್ರ ಯಾವಾಗ ಎಂದು ಕಾಯುತ್ತಿದ್ದ ಫ್ಯಾನ್ಸ್‌ಗೆ ಖುಷಿ ಕೊಟ್ಟಿದ್ದಾರೆ ಸುದೀಪ್.
