LatestLeading NewsMain PostNational

2047ರ ಮೊದಲು ನವ ಭಾರತವನ್ನು ನಿರ್ಮಿಸುವ ಗುರಿ ಹೊಂದಿದ್ದೇವೆ: ಮೋದಿ

- ಇಂಡಿಯಾ ಗೇಟ್‍ನಲ್ಲಿ ನೇತಾಜಿಯವರ ಹೊಲೋಗ್ರಾಮ್ ಪ್ರತಿಮೆ ಉದ್ಘಾಟನೆ

ನವದೆಹಲಿ: ನೇತಾಜಿ ಸುಭಾಷ್ ಚಂದ್ರ ಬೋಸ್ ಕನಸಿನಂತೆ ಸ್ವಾತಂತ್ರ್ಯದ 100ನೇ ವರ್ಷ 2047ರ ಮೊದಲು ನವ ಭಾರತವನ್ನು ನಿರ್ಮಿಸುವ ಗುರಿಯನ್ನು ನಾವು ಹೊಂದಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.

ನೇತಾಜಿ ಸುಭಾಷ್ ಚಂದ್ರ ಬೋಸ್ 125ನೇ ಜಯಂತಿ ಪ್ರಯುಕ್ತ ಇಂದು ದೇಶಾದ್ಯಂತ ಪರಾಕ್ರಮ ದಿವಸ್ ಆಚರಿಸಲಾಗಿದೆ. ಮಹಾನ್ ಸ್ವಾತಂತ್ರ್ಯ ಸೇನಾನಿಗೆ ಕೇಂದ್ರ ಸರ್ಕಾರ ಇಂದು ವಿಶೇಷ ಗೌರವ ನೀಡಿದೆ. ಇಂಡಿಯಾ ಗೇಟ್‍ನಲ್ಲಿ ನೇತಾಜಿಯವರ ಹೊಲೋಗ್ರಾಮ್ ಪ್ರತಿಮೆಯನ್ನು ಪ್ರಧಾನಿ ಮೋದಿ ಉದ್ಘಾಟಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ 50,210 ಕೇಸ್ – ಪಾಸಿಟಿವಿಟಿ ರೇಟ್ 22.77%ಕ್ಕೆ ಏರಿಕೆ

ಬಳಿಕ ಮಾತನಾಡಿದ ಅವರು, ನೇತಾಜಿ ಅವರ ಭವ್ಯ ಪ್ರತಿಮೆಯನ್ನು ಇಂಡಿಯಾ ಗೇಟ್‍ನಲ್ಲಿ ಸ್ಥಾಪಿಸುತ್ತಿರುವುದು ನನಗೆ ತುಂಬಾ ಸಂತೋಷವಿದೆ. ಅವರಿಗೆ ಭಾರತ ಯಾವತ್ತು ಋಣಿಯಾಗಿರುತ್ತದೆ. ನೇತಾಜಿ ಹೇಳಿದಂತೆ ಸ್ವತಂತ್ರ ಭಾರತದ ಕನಸಿನಲ್ಲಿ ಎಂದಿಗೂ ನಂಬಿಕೆ ಕಳೆದುಕೊಳ್ಳಬೇಡಿ, ಭಾರತವನ್ನು ಅಲುಗಾಡಿಸುವ ಶಕ್ತಿ ಜಗತ್ತಿನಲ್ಲಿ ಇಲ್ಲ. ನೇತಾಜಿ ಅವರ ಪ್ರತಿಮೆಯು ಪ್ರಜಾಪ್ರಭುತ್ವದ ಮೌಲ್ಯವನ್ನು ಹೆಚ್ಚಿಸುತ್ತದೆ ಮತ್ತು ಮುಂದಿನ ಪೀಳಿಗೆಗಳಿಗೆ ಸ್ಫೂರ್ತಿ, ನಾವು ಸುಧಾರಣೆಯ ಜೊತೆಗೆ ಪರಿಹಾರ ರಕ್ಷಣೆ ಪುನರ್ವಸತಿ ಕಡೆಗೆ ಒತ್ತು ನೀಡುತ್ತಿದ್ದೇವೆ ಎಂದರು.

ನಾವು ಎನ್‍ಡಿಆರ್‌ಎಫ್‌ನ್ನು ಆಧುನೀಕರಿಸಿದ್ದೇವೆ. ದೇಶದ ಬೆಳವಣಿಗಾಗಿ ಹೊಸ ಕ್ರಾಂತಿಕಾರಿ ಬದಲಾವಣೆಗಳನ್ನು ಮಾಡುತ್ತಿದ್ದೇವೆ. ಎಂದು ಅಭಿಪ್ರಾಯಪಟ್ಟಿದ್ದಾರೆ. ಇದೇ ಸಂದರ್ಭದಲ್ಲಿ ಮೋದಿ, 2019, 2020, 2021, 2022ರ ಸುಭಾಷ್ ಚಂದ್ರ ಬೋಸ್ ಆಪ್ತ ಪ್ರಬಂಧನ್ ಪುರಸ್ಕಾರಗಳನ್ನು ಪ್ರದಾನ ಮಾಡಿದರು. 28 ಅಡಿ ಎತ್ತರ, 6 ಅಡಿ ಅಗಲದ ಭವ್ಯ ಗ್ರಾನೈಟ್ ಪ್ರತಿಮೆ ನಿರ್ಮಾಣ ಆಗುವವರೆಗೂ ಅದರ ಸ್ಥಾನದಲ್ಲಿ ಹೊಲೋಗ್ರಾಮ್ ಪ್ರತಿಮೆ ರಾರಾಜಿಸಲಿದೆ ಎಂದರು. ಇದನ್ನೂ ಓದಿ: ಬೋಸ್‍ರ ಆಜಾದ್ ಹಿಂದ್ ಫೌಜ್‍ನಿಂದ ಸ್ವಾತಂತ್ರ್ಯ: ಅರ್ಧೇಂದು ಬೋಸ್

ಪ್ರತಿಮೆಯ ವಿಶೇಷತೆ ಏನು?:
1968ರಲ್ಲಿ ಕಿಂಗ್ ಜಾರ್ಜ್-5 ಪ್ರತಿಮೆ ತೆರವು ಮಾಡಿದ್ದ ಜಾಗದಲ್ಲಿ ನೇತಾಜಿ ಪ್ರತಿಮೆ ಇರಿಸಿರುವುದು ವಿಶೇಷ. ತೆಲಂಗಾಣದಿಂದ ತರಿಸಲಿರುವ ಕಪ್ಪು ಗ್ರಾನೈಟ್‍ನಲ್ಲಿ ರಾಷ್ಟ್ರೀಯ ಮಾಡರ್ನ್ ಆರ್ಟ್ ಗ್ಯಾಲರಿಯ ಮಹಾನಿರ್ದೇಶಕ, ಖ್ಯಾತ ಶಿಲ್ಪಿ ಅದ್ವೈತ ಗಡನಾಯಕ್ ಅವರು ನೇತಾಜಿ ಪ್ರತಿಮೆಯನ್ನು ರೂಪಿಸಲಿದ್ದಾರೆ. ಈಗಾಗಲೇ ವಿನ್ಯಾಸದ ಕಾರ್ಯ ಶುರುವಾಗಿದೆ. ಈಗಿರುವ ಹೊಲೋಗ್ರಾಮ್ ಪ್ರತಿಮೆ 4 ಕೆ ಪ್ರೊಜೆಕ್ಟರ್ ಬಳಸಿಕೊಂಡು 30,000ದಷ್ಟು ಬೆಳಕಿನ ಕಿರಣಗಳನ್ನು ಬಳಸಿಕೊಂಡು ಶೇ.90 ರಷ್ಟು ಪಾರದರ್ಶಕವಾಗಿರುವಂತೆ ಹೊಲೋಗ್ರಾಫಿಕ್ ಸ್ಕ್ರೀನ್ ಮೂಲಕ ಅಳವಡಿಸಲಾಗಿದ್ದು, 3ಡಿ ಚಿತ್ರದ ಮೂಲಕ ವಿನ್ಯಾಸಗೊಳಿಸಿರುವ ಪ್ರತಿಮೆಯು 28 ಅಡಿ ಎತ್ತರ, 6 ಅಡಿ ಅಗಲದಲ್ಲಿ ಕಂಗೊಳಿಸುತ್ತಿದೆ. ಇದನ್ನೂ ಓದಿ: ಸುಭಾಷ್ ಚಂದ್ರ ಬೋಸ್ ದೇಶಕ್ಕೆ ನೀಡಿದ ಕೊಡುಗೆ ಅಪಾರ: ಪ್ರಧಾನಿ ಮೋದಿ

Leave a Reply

Your email address will not be published.

Back to top button