LatestMain PostNational

ಬೋಸ್‍ರ ಆಜಾದ್ ಹಿಂದ್ ಫೌಜ್‍ನಿಂದ ಸ್ವಾತಂತ್ರ್ಯ: ಅರ್ಧೇಂದು ಬೋಸ್

ಕೊಲ್ಕತ್ತಾ: ಮಹಾತ್ಮ ಗಾಂಧೀಜಿ ಅವರ ಶಾಂತಿ ಚಳುವಳಿಯೊಂದರಿಂದ ಭಾರತಕ್ಕೆ ಸ್ವಾತಂತ್ರ್ಯ ದೊರೆತಿಲ್ಲ. ಬದಲಾಗಿ ಸುಭಾಷ್ ಚಂದ್ರ ಬೋಸ್‍ರ ಆಜಾದ್ ಹಿಂದ್ ಫೌಜ್ ಪ್ರಮುಖ ಪಾತ್ರವನ್ನು ವಹಿಸಿದೆ ಎಂದು ನೇತಾಜಿಯವರ ಸೋದರಳಿಯ ಅರ್ಧೇಂದು ಬೋಸ್ ತಿಳಿಸಿದರು.

ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮದಿನಾಚರಣೆಯ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಹೆಸರನ್ನು ಬದಿಗಿಟ್ಟಿದ್ದಾರೆ. ಬೋಸ್‍ರ ಕಥೆಯನ್ನು ಇತಿಹಾಸ ಪುಸ್ತಕಗಳಲ್ಲಿ ಪ್ರಕಟವಾಗದಂತೆ ನಿರ್ಬಂಧ ಹೇರಿದ್ದರು ಎಂದು ಆರೋಪಿಸಿದರು.

ನೇತಾಜಿ ಹಾಗೂ ಜವಾಹರಲಾಲ್ ನೆಹರು ಅವರ ನಡುವೆ ಸಾಕಷ್ಟು ಪೈಪೋಟಿ ಇತ್ತು. ಇದರಿಂದಾಗಿ ನೇತಾಜಿಯನ್ನು ಇತಿಹಾಸದ ಪುಟದಿಂದ ತೆಗೆದು ಹಾಕಲು ನಿರ್ಧರಿಸಲಾಯಿತು. ಅದಕ್ಕೆ ಇತಿಹಾಸ ಪುಸ್ತಕಗಳಲ್ಲಿ ಸುಭಾಷ್ ಚಂದ್ರ ಬೋಸ್ ಬಗ್ಗೆ ಹೆಚ್ಚು ಬರೆದಿಲ್ಲ. ಇದರಿಂದಾಗಿ ಯುವಕರಿಗೆ ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಮತ್ತು ಅವರ ಆಜಾದ್ ಹಿಂದ್ ಫೌಜ್ ಬಗ್ಗೆ ಅರಿವಿಲ್ಲ ಎಂದು ವಿಷಾದಿಸಿದರು.

ಜನವರಿ 23, 1897 ರಂದು ಜನಿಸಿದ ನೇತಾಜಿ ಅವರು ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಅವರು ಸ್ವಾತಂತ್ರ್ಯಕ್ಕಾಗಿ ಆಜಾದ್ ಹಿಂದ್ ಫೌಜ್ ಅನ್ನು ಸ್ಥಾಪಿಸಿದ್ದರು. ಇದನ್ನೂ ಓದಿ: ಸುಭಾಷ್ ಚಂದ್ರ ಬೋಸ್ ದೇಶಕ್ಕೆ ನೀಡಿದ ಕೊಡುಗೆ ಅಪಾರ: ಪ್ರಧಾನಿ ಮೋದಿ

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮದಿನದ ಸ್ಮರಣಾರ್ಥವಾಗಿ ಕೇಂದ್ರ ಸರ್ಕಾರ ಜ.23ನ್ನು ಪರಾಕ್ರಮ್ ದಿವಸ್ ಎಂದು ಘೋಷಿಸಿದೆ. ಜೊತೆಗೆ ಈ ವರ್ಷದಿಂದ ಭಾರತ ಸರ್ಕಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದ ನೆನಪಿಗಾಗಿ ಗಣರಾಜ್ಯೋತ್ಸವವನ್ನು ಜ.23ರಿಂದಲೇ ಆಚರಿಸುತ್ತಿದೆ. ಇದನ್ನೂ ಓದಿ: ನೇತಾಜಿ ಜನ್ಮ ದಿನವನ್ನು ರಾಷ್ಟ್ರೀಯ ರಜಾದಿನವಾಗಿ ಘೋಷಿಸಿ: ಮಮತಾ ಬ್ಯಾನರ್ಜಿ

Leave a Reply

Your email address will not be published.

Back to top button