CricketLatestLeading NewsMain PostSports

ಐಪಿಎಲ್ ಹರಾಜಿಗೆ ಆಟಗಾರರ ಪಟ್ಟಿ ಪ್ರಕಟ – ಶಾರೂಕ್ ಖಾನ್, ಅವೇಶ್ ಖಾನ್ ಬೆಲೆ ಕಂಡು ದಂಗಾದ ಕ್ರಿಕೆಟ್‌ ಪ್ರಿಯರು

ಮುಂಬೈ: 2022ರ ಐಪಿಎಲ್ ಹರಾಜಿಗೆ ಹೆಸರು ನೋಂದಾಯಿಸಿಕೊಂಡಿರುವ ಆಟಗಾರರ ಪಟ್ಟಿ ಬಿಡುಗಡೆ ಗೊಂಡಿದೆ. ಈ ಪಟ್ಟಿಯಲ್ಲಿ ದೇಶಿ ಸ್ಟಾರ್ ಆಟಗಾರಾದ ಶಾರೂಖ್ ಖಾನ್ ಮತ್ತು ಅವೇಶ್ ಖಾನ್ ಮೂಲ ಬೆಲೆ ಕಂಡು ಅಭಿಮಾನಿಗಳು ದಂಗಾಗಿದ್ದಾರೆ.

ಹೌದು ಈ ಬಾರಿಯ ಐಪಿಎಲ್‍ನಲ್ಲಿ 1,214 ಮಂದಿ ಆಟಗಾರರು ತಮ್ಮ ಹೆಸರನ್ನು ನೋಂದಣಿ ಮಾಡಿಕೊಂಡಿದ್ದಾರೆ. ಇದರಲ್ಲಿ 896 ಭಾರತೀಯ ಆಟಗಾರರು ಮತ್ತು 318 ವಿದೇಶಿ ಆಟಗಾರರು ಹರಾಜಿಗೆ ತಮ್ಮ ಹೆಸರನ್ನು ಕೊಟ್ಟಿದ್ದಾರೆ. ಈ ಬಾರಿ 5 ಕ್ಯಾಟಗರಿಯಲ್ಲಿ ಆಟಗಾರರಿಗೆ ಬೆಲೆ ನಿಗದಿಪಡಿಸಲಾಗಿದೆ. 2 ಕೋಟಿ, 1.5 ಕೋಟಿ, 1 ಕೋಟಿ, 50 ಲಕ್ಷ ಮತ್ತು 20 ಲಕ್ಷ ರೂಪಾಯಿಯ ಮೂಲ ಬೆಲೆ ಕ್ಯಾಟಗರಿಯಲ್ಲಿ ಆಟಗಾರರು ತಮ್ಮ ಹೆಸರನ್ನು ನೋಂದಣಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಪಂತ್ ಸಿಕ್ಸರ್‌ಗೆ ಕೊಹ್ಲಿ ಡ್ಯಾನ್ಸ್ – ವೀಡಿಯೋ ವೈರಲ್

ಅಚ್ಚರಿ ಎಂಬಂತೆ ಸ್ಟಾರ್ ಆಟಗಾರರಾಗಿ ಗುರುತಿಸಿಕೊಂಡಿದ್ದ, ಕ್ರಿಸ್ ಗೇಲ್, ಬೆನ್ ಸ್ಟೋಕ್ಸ್, ಜೋಫ್ರಾ ಆರ್ಚರ್, ಸ್ಯಾಮ್ ಕರ್ರನ್, ಮಿಚೆಲ್ ಸ್ಟಾರ್ಕ್ ಐಪಿಎಲ್‍ನಿಂದ ಹಿಂದೆ ಸರಿದಿದ್ದಾರೆ. ಈ ನಡುವೆ ಈ ಹಿಂದಿನ ಐಪಿಎಲ್ ಮತ್ತು ದೇಶಿ ಟೂರ್ನಿಗಳಲ್ಲಿ ಮಿಂಚುಹರಿಸಿದ ಆಟಗಾರಾದ ಶಾರೂಖ್ ಖಾನ್ ಮತ್ತು ಆವೇಶ್ ಖಾನ್ ಮೂಲಬೆಲೆಯನ್ನು 20 ಲಕ್ಷ ಫಿಕ್ಸ್ ಮಾಡಿಕೊಂಡು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ.‌ ಇದನ್ನೂ ಓದಿ: ಕೊನೆಯ ಎಸೆತದಲ್ಲಿ ಸಿಕ್ಸರ್‌, ತಮಿಳುನಾಡಿಗೆ ಟ್ರೋಫಿ – ಕರ್ನಾಟಕಕ್ಕೆ ವಿರೋಚಿತ ಸೋಲು

ಅವೇಶ್ ಖಾನ್ 14ನೇ ಆವೃತ್ತಿ ಐಪಿಎಲ್‍ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಎರಡನೇ ಆಟಗಾರ ಎಂಬ ಹಿರಿಮೆ ಪಾತ್ರರಾಗಿದ್ದರೆ, ಶಾರೂಖ್ ಖಾನ್ ವಿಜಯ ಹಜಾರೆ, ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ತಮಿಳುನಾಡು ತಂಡವನ್ನು ತನ್ನ ಉತ್ತಮ ಬ್ಯಾಟಿಂಗ್ ಮೂಲಕ ಚಾಂಪಿಯನ್ ಮಾಡಿದ್ದರು.

2 ಕೋಟಿ ಮೂಲಬೆಲೆ ಹೊಂದಿರುವ ಆಟಗಾರರು:
ಶ್ರೇಯಸ್ ಅಯ್ಯರ್, ಮೊಹಮ್ಮದ್ ಶಮಿ, ಶಿಖರ್ ಧವನ್, ಆರ್. ಅಶ್ವಿನ್, ಸುರೇಶ್ ರೈನಾ, ಅಂಬಟಿ ರಾಯುಡು, ಶಾರ್ದೂಲ್ ಠಾಕೂರ್, ರಾಬಿನ್ ಉತ್ತಪ್ಪ, ಯಜುವೇಂದ್ರ ಚಹಾಲ್, ದೀಪಕ್ ಚಹಾರ್, ದೇವದತ್ ಪಡಿಕ್ಕಲ್, ಕೃನಾಲ್ ಪಾಂಡ್ಯ, ಹರ್ಷಲ್ ಪಟೇಲ್, ಉಮೇಶ್ ಯಾದವ್, ದಿನೇಶ್ ಕಾರ್ತಿಕ್, ಇಶಾನ್ ಕಿಶನ್, ಭುವನೇಶ್ವರ್ ಕುಮಾರ್, ಫಾಫ್ ಡು ಪ್ಲೆಸಿಸ್, ಕಗಿಸೊ ರಬಾಡ, ಇಮ್ರಾನ್ ತಾಹೀರ್, ಫಾಬಿನ್ ಅಲೆನ್, ಡ್ವೇನ್ ಬ್ರಾವೋ, ಎವಿನ್ ಲೆವಿಸ್, ಓಡೆನ್ ಸ್ಮಿತ್, ಮುಜೀಬ್ ಝರ್ದನ್, ಆಸ್ಟನ್ ಅಗರ್, ನಥನ್ ಕಲ್ಟರ್ ನೈಲ್, ಪ್ಯಾಟ್ ಕಮಿನ್ಸ್, ಜೋಶ್ ಹ್ಯಾಝಲ್‍ವುಡ್, ಮಿಚೆಲ್ ಮಾರ್ಶ್, ಸ್ಟೀವ್ ಸ್ಮಿತ್, ಮ್ಯಾಥ್ಯೂ ವೇಡ್, ಡೇವಿಡ್ ವಾರ್ನರ್, ಆಡಂ ಝಂಪಾ, ಶಕಿಬ್ ಅಲ್ ಹಸನ್, ಮುಸ್ತಫಿಜುರ್ ರೆಹಮಾನ್, ಸ್ಯಾಮ್ ಬಿಲ್ಲಿಂಗ್ಸ್, ಸಖೀಬ್ ಮೊಹಮ್ಮದ್, ಕ್ರಿಸ್ ಜೋರ್ಡನ್, ಗ್ರೈಗ್ ಓವರ್ಟನ್, ಆದಿಲ್ ರಶೀದ್, ಜೇಸನ್ ರಾಯ್, ಜೇಮ್ಸ್ ವಿನ್ಸ್, ಡೇವಿಡ್ ವಿಲ್ಲೆ, ಮಾರ್ಕ್ ವುಡ್, ಟ್ರೆಂಟ್ ಬೌಲ್ಟ್, ಲೂಕಿ ಫರ್ಗಿಸನ್, ಕ್ವಿಂಟನ್ ಡಿ ಕಾಕ್, ಮಚೆರ್ಂಟ್ ಲ್ಯಾಂಗ್. ಇದನ್ನೂ ಓದಿ: ಕೊಹ್ಲಿಗೆ ಶೋಕಾಸ್ ನೋಟಿಸ್ ನೀಡಿಲ್ಲ: ಗಂಗೂಲಿ

1.5 ಕೋಟಿ ಮೂಲಬೆಲೆ ಹೊಂದಿರುವ ಆಟಗಾರರು:
ವಾಷಿಂಗ್ಟನ್ ಸುಂದರ್, ಅಮಿತ್ ಮಿಶ್ರಾ, ಇಶಾಂತ್ ಶರ್ಮಾ, ಆರೋನ್ ಫಿಂಚ್, ಕ್ರಿಸ್ ಲಿನ್, ನೇಥನ್ ಲ್ಯಾನ್, ಕೇನ್ ರಿಚರ್ಡಸನ್, ಜಾನಿ ಬೈರ್‍ಸ್ಟೋ, ಅಲೆಕ್ಸ್ ಹೇಲ್ಸ್, ಇಯಾನ್ ಮಾರ್ಗನ್, ಡೇವಿಡ್ ಮಲನ್, ಆಡಂ ಮಿಲ್ನೆ, ಕಾಲಿನ್ ಮುನ್ರೊ, ಜಿಮ್ಮಿ ನೀಶಮ್, ಗ್ಲೆನ್ ಫಿಲಿಪ್ಸ್, ಟಿಮ್ ಸೌಥಿ, ಕಾಲಿನ್ ಇನ್‍ಗ್ರಾಮ್, ಶಿಮ್ರೋನ್ ಹೆಟ್ಮೇರ್, ಜೇಸನ್ ಹೋಲ್ಡರ್, ನಿಕೋಲಸ್ ಪೂರನ್.

1 ಕೋಟಿ ಮೂಲಬೆಲೆ ಹೊಂದಿರುವ ಆಟಗಾರರು:
ನಿತೀಶ್ ರಾಣ, ಮನೀಶ್ ಪಾಂಡೆ, ಟಿ. ನಟರಾಜನ್, ಅಜಿಂಕ್ಯಾ ರಹಾನೆ, ಪಿಯೂಶ್ ಚಾವ್ಲಾ, ಪ್ರಸಿದ್ಧ್ ಕೃಷ್ಣ, ವೃದ್ದಿಮಾನ್ ಸಾಹ, ಕೇದರ್ ಜಾಧವ್, ಕುಲ್‍ದೀಪ್ ಯಾದವ್, ಜಯಂತ್ ಯಾದವ್, ಮೊಹಮ್ಮದ್ ನಬಿ, ಜೇಮ್ಸ್ ಫಾಲ್ಕನರ್, ಮೋಸಿಸ್ ಹೆನ್ರಿಕ್ಯೂಸ್, ಮಾರ್ನಸ್ ಲಾಬುಶೇನ್, ರಿಲೆ ಮೆರೆಡಿತ್, ಜೋಶ್ ಫಿಲಿಪ್, ಲ್ಯಾಮ್ ಲಿವಿಂಗ್ಸ್ಟೋನ್, ರೋಸ್ಟನ್ ಚೇಸ್, ಶೆರ್ಫಾನ್ ರುಥರ್‍ಫಾರ್ಡ್, ಡಾರ್ಸಿ ಶಾರ್ಟ್, ಆಂಡ್ರೊ ಟೈ, ಡೇನ್ ಲಾರೆನ್ಸ್, ಓಲಿ ಫೋಪ್, ಡೆವೋನ್ ಕಾನ್ವೇ, ಕಾಲಿನ್ ಗ್ರ್ಯಾಂಡ್‍ಹೋಮ್, ಮಿಚೆಲ್ ಸ್ಯಾಂಟನರ್, ಟೈಮಲ್ ಮಿಲ್ಸ್, ಆಡಂ ಮಕ್ರಾರ್ಮ್, ರಿಲಿ ರೊಸ್ಸೋ, ತಬ್ರೈಸ್ ಶಂಸಿ, ರಾಸ್ಸಿ ವಾನ್ ಡೇರ್ ಡೆ, ವಾನಿಂದು ಹಸರಂಗ.

ಈ ಬಾರಿಯ ಐಪಿಎಲ್ ಭಾರತದಲ್ಲೇ ನಡೆಸಲು ಐಪಿಎಲ್ ಆಡಳಿತ ಮಂಡಳಿ ನಿರ್ಧರಿಸಿದ್ದು, ಪ್ರೇಕ್ಷಕರಿಲ್ಲದೆ ಖಾಲಿ ಮೈದಾನದಲ್ಲಿ ಐಪಿಎಲ್ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ.

Leave a Reply

Your email address will not be published.

Back to top button