ಭೋಪಾಲ್: ಮಧ್ಯಪ್ರದೇಶ (Madhya Pradesh) ರಾಜ್ಯಸಭಾ ಚುನಾವಣೆಯಲ್ಲಿ ಹೈಡ್ರಾಮಾ ನಡೀತಿದೆ. ಕಾಂಗ್ರೆಸ್ (Congress) ಅಭ್ಯರ್ಥಿ ಮೀನಾಕ್ಷಿ ನಟರಾಜನ್ (Meenakshi Natarajan) ನಾಮಪತ್ರವೇ ತಿರಸ್ಕೃತವಾಗಿದೆ.
ಕ್ರಿಮಿನಲ್ ಕೇಸ್ ಮಾಹಿತಿ ಮುಚ್ಚಿಟ್ಟ ಕಾರಣದಿಂದ ನಾಮಪತ್ರ ತಿರಸ್ಕಾರಗೊಂಡಿದೆ. ಇದಕ್ಕೂ ಮುನ್ನ 10 ಮತಗಳ ಕೊರತೆ ಇದ್ದರೂ, ಬಿಜೆಪಿ ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು. ಹಾಗಾಗಿ, ಅಡ್ಡ ಮತದಾನದ ಭೀತಿಯಿಂದಾಗಿ ಕಾಂಗ್ರೆಸ್ ತನ್ನ ಶಾಸಕರನ್ನು ಬೆಂಗಳೂರಿಗೆ ಶಿಫ್ಟ್ ಮಾಡಲು ಪ್ಲಾನ್ ಮಾಡಿತ್ತು. ಬಿಡದಿಯ ವಂಡರ್‌ಲಾ ರೆಸಾರ್ಟ್ನಲ್ಲಿ ಸಕಲ ಸಿದ್ಧತೆ ನಡೆಸಿತ್ತು. ಆದರೆ, ಮೀನಾಕ್ಷಿ ನಟರಾಜನ್ ನಾಮಪತ್ರ ರಿಜೆಕ್ಟ್ ಆದ ಕಾರಣ ಅಲ್ಲೇ ಉಳಿದಿದ್ದಾರೆ. ಇದನ್ನೂ ಓದಿ: 12 ವರ್ಷ ಪ್ರಧಾನ ಸೇವಕರಾಗಿ ಮೋದಿ ಸೇವೆ; ರಾಜ್ಯದ ದೇವಸ್ಥಾನಗಳಲ್ಲಿ ನಾಳೆ ವಿಶೇಷ ಪೂಜೆ
ಅಂದಹಾಗೆ, 229 ಸಂಖ್ಯಾಬಲದ ವಿಧಾನಸಭೆಯಲ್ಲಿ ರಾಜ್ಯಸಭೆಯಲ್ಲಿ ಆಯ್ಕೆಗೆ 58 ಮತಗಳು ಬೇಕಾಗಿವೆ. 164 ಶಾಸಕರನ್ನು ಹೊಂದಿರೋ ಬಿಜೆಪಿ ಮೊದಲ 2 ಸ್ಥಾನಗಳನ್ನು ಸುಲಭವಾಗಿ ಗೆಲ್ಲಬಹುದು. ಆದ್ರೆ, ಮೂರನೇ ಅಭ್ಯರ್ಥಿ ಗೆಲುವಿಗೆ 10 ಮತಗಳು ಕೊರತೆ ಇದ್ದರೂ, ಮಹೇಶ್ ಕೇವತ್‌ರನ್ನು ಕಣಕ್ಕಿಳಿಸಿದೆ. 62 ಶಾಸಕರ ಬಲ ಹೊಂದಿರೋ ಕಾಂಗ್ರೆಸ್ಸಿಗೆ 1 ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವಷ್ಟು ಮತಗಳಿವೆ.
