ಮೆಕ್ಸಿಕೋ: ಮೆಕ್ಸಿಕೋದಲ್ಲಿ ಇಂದು (ಶುಕ್ರವಾರ) 7.4 ತೀವ್ರತೆಯ ಪ್ರಬಲ ಭೂಕಂಪ (Earthquake) ಸಂಭವಿಸಿದ್ದು, ದಕ್ಷಿಣ ಕರಾವಳಿಯಲ್ಲಿ ಸುನಾಮಿ ಎಚ್ಚರಿಕೆ ನೀಡಲಾಗಿದೆ.
ಮೆಕ್ಸಿಕೋದಲ್ಲಿ (Mexico) ಭೂಕಂಪ ಸಂಭವಿಸಿದ ಹಿನ್ನೆಲೆ ನೆರೆಯ ದೇಶಗಳಾದ ಗ್ವಾಟೆಮಾಲಾ ಮತ್ತು ಎಲ್ ಸಾಲ್ವಡಾರ್‌ನಲ್ಲಿಯೂ ಭೂಮಿ ಕಂಪಿಸಿದ ಅನುಭವ ಆಗಿದೆ. ಇದನ್ನೂ ಓದಿ: ಬುಲೆಟ್ ರೈಲು ವಿಳಂಬಕ್ಕೆ ಬೇಜವಾಬ್ದಾರಿಯೇ ಕಾರಣ – ಜಪಾನ್ ಮಾಜಿ ಸಚಿವರ ಹೇಳಿಕೆಗೆ ಭಾರತ ತಿರುಗೇಟು
Guatemala earthquake and tsunami threat LATEST
A magnitude 7.4 Earthquake struck the coast of Chiapas state in southern Mexico, near the border with Guatemala.
A tsunami warning was issued in the area. Eyewitnesses told Reuters news agency that in Guatemala ‘buildings shook.’… pic.twitter.com/6JVBs1CfTJ
— Abhijit Pathak (@aajtakabhijit) July 17, 2026
ಮೆಕ್ಸಿಕೋದ ಪ್ರಮುಖ ಪೆಸಿಫಿಕ್ ಬಂದರು ಮತ್ತು ಮೀನುಗಾರಿಕಾ ಪಟ್ಟಣವಾದ ಪೋರ್ಟೊ ಮಡೆರೊ ಕರಾವಳಿ ಪ್ರದೇಶದಲ್ಲಿ ಭೂಕಂಪ ಸಂಭವಿಸಿದ ನಂತರ ಸುನಾಮಿ ಎಚ್ಚರಿಕೆ ನೀಡಲಾಗಿದೆ. ಯುಎಸ್ ಭೂವೈಜ್ಞಾನಿಕ ಸಮೀಕ್ಷೆ (USGS) ಪ್ರಕಾರ, ಹತ್ತಿರದ ಅಕ್ವಿಲ್ಸ್ ಸೆರ್ಡಾನ್‌ನ ನೈಋತ್ಯಕ್ಕೆ 48 ಕಿ.ಮೀ ದೂರದಲ್ಲಿ ಭೂಕಂಪ ಸಂಭವಿಸಿದೆ. ಇದನ್ನೂ ಓದಿ: ಪಾಕಿಸ್ತಾನದಿಂದ ಸ್ವಾತಂತ್ರ್ಯ ಘೋಷಿಸಿಕೊಂಡ ಬಲೂಚಿಸ್ತಾನ – ಪ್ರತ್ಯೇಕ ದೇಶವಾಗಲು ಯಾವೆಲ್ಲಾ ಮಾನದಂಡ ಪೂರೈಸಬೇಕು?
Notable quake, preliminary info: M 7.3 – 48 km SW of Aquiles Serdán, Mexico https://t.co/lb0uJuhZ2B
— USGS Earthquakes (@USGS_Quakes) July 17, 2026
ಈವರೆಗೆ ಯಾವುದೇ ಸಾವು – ನೋವಿನ ವರದಿಯಾಗಿಲ್ಲ. ಆದ್ರೆ ಮುಗಿಲೆತ್ತರದ ಕಟ್ಟಡಗಳು ಎಲೆಗಳಂತೆ ಅಲುಗಾಡುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇನ್ನೂ ಕೆಲ ಪ್ರದೇಶಗಳಲ್ಲಿ ಭಯಭೀತರಾದ ಜನ ಮನೆ ಬಿಟ್ಟು ಬೀದಿಗೆ ಓಡಿದ್ದಾರೆ.
ಗಂಭೀರ ಹಾನಿಯಾಗಿಲ್ಲ ಎಂದ ಮೆಕ್ಸಿಕನ್ ಸರ್ಕಾರ
ಇನ್ನೂ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮೆಕ್ಸಿಕೊದ ನೌಕಾಪಡೆಯ ಕಾರ್ಯದರ್ಶಿ ರೇಮುಂಡೊ ಪೆಡ್ರೊ ಮೊರೇಲ್ಸ್ ಏಂಜಲೀಸ್, ಭೂಕಂಪದ ಬಳಿಕವೂ ಯಾವುದೇ ಹಾನಿಗಳು ವರದಿಯಾಗಿಲ್ಲ. ಯಾವುದೇ ಸಮಸ್ಯೆಗಳೂ ಕಂಡುಬಂದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮೈಸೂರು, ಬೆಂಗಳೂರಿಗೂ ಬಂದಿದ್ದ ಬಂಧಿತ ಅಮೆರಿಕ ನೌಕಾಪಡೆಯ ಮಾಜಿ ಸಿಬ್ಬಂದಿ – ಸ್ಫೋಟಕ ರಹಸ್ಯ ಬಯಲು
