– ಸೈಯದ್ ಮುಷ್ತಾಕ್ ಅಲಿ ಫೈನಲ್ ಪಂದ್ಯ
– ತಮಿಳುನಾಡಿಗೆ 4 ವಿಕೆಟ್‌ಗಳ ರೋಚಕ ಜಯ
ನವದೆಹಲಿ: ಕೊನೆಯ ಎಸೆತದಲ್ಲಿ ಶಾರೂಖ್ ಖಾನ್ ಅವರ ಸಿಕ್ಸರ್ ನೆರವಿನಿಂದ ಕರ್ನಾಟಕ ವಿರುದ್ಧ ತಮಿಳುನಾಡು 4 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯನ್ನು ಗೆದ್ದುಕೊಂಡಿದೆ.
ಟಾಸ್ ಸೋತು ಬ್ಯಾಟಿಂಗ್ ಮಾಡಿದ ಕರ್ನಾಟಕ 7 ವಿಕೆಟ್ ನಷ್ಟಕ್ಕೆ 152 ರನ್ ಗಳಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ತಮಿಳುನಾಡು 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 153 ರನ್ ಹೊಡೆದು ಜಯಗಳಿಸಿತು.
Advertisement
Advertisement
ಕೊನೆಯ 12 ಎಸೆತಗಳಲ್ಲಿ ತಮಿಳುನಾಡು ಗೆಲುವಿಗೆ 30 ರನ್ ಬೇಕಿತ್ತು. 19ನೇ ಓವರ್‌ನಲ್ಲಿ 14 ರನ್ ಬಂತು. ಕೊನೆಯ ಓವರಿನಲ್ಲಿ 16 ರನ್ ಬೇಕಿತ್ತು. ಇದನ್ನೂ ಓದಿ: ಚಹರ್ ಸಿಕ್ಸ್‌ಗೆ ಸೆಲ್ಯೂಟ್ ಹೊಡೆದ ರೋಹಿತ್
Advertisement
ಪ್ರತೀಕ್ ಜೈನ್ ಎಸೆದ ಮೊದಲ ಎಸೆತದಲ್ಲಿ 4 ರನ್ ಬಂದರೆ ಎರಡನೇ ಎಸೆತದಲ್ಲಿ 1 ರನ್ ಬಂತು. ಮೂರನೇ ಎಸೆತ ವೈಡ್ ಆದರೆ ನಂತರ ಎರಡು ಎಸೆತದಲ್ಲಿ ಸಿಂಗಲ್ ರನ್ ಬಂತು. 5ನೇ ಎಸೆತ ವೈಡ್ ಆಯ್ತು. ನಂತರದ ಎಸೆತದಲ್ಲಿ ಶಾರೂಖ್ ಖಾನ್ 2 ರನ್ ಓಡಿದರು. ಕೊನೆಯ ಎಸೆತದಲ್ಲಿ ತಮಿಳುನಾಡು ಜಯಗಳಿಸಲು 5 ರನ್ ಬೇಕಿತ್ತು. ಜೈನ್ ಎಸೆದ ಕೊನೆಯ ಎಸೆತವನ್ನು ಶಾರೂಖ್ ಖಾನ್ ಸಿಕ್ಸರ್‌ಗೆ ಅಟ್ಟಿ ತಮಿಳುನಾಡಿಗೆ ಪ್ರಶಸ್ತಿ ಗೆದ್ದುಕೊಟ್ಟರು.
Advertisement
ಈ ಮೂಲಕ ತಮಿಳುನಾಡು ಮೂರನೇ ಬಾರಿ ಟ್ರೋಫಿಯನ್ನು ಎತ್ತಿಕೊಂಡಿದೆ. ಈ ಹಿಂದೆ 2006-07, 2020-21 ರಲ್ಲಿ ಪ್ರಶಸ್ತಿಯನ್ನು ಜಯಿಸಿತ್ತು.
WHAT. A. FINISH! ???? ????
A last-ball SIX from @shahrukh_35 does the trick! ???? ????
Tamil Nadu hold their nerve & beat the spirited Karnataka side by 4 wickets to seal the title-clinching victory. ???? ???? #TNvKAR #SyedMushtaqAliT20 #Final
Scorecard ▶️ https://t.co/RfCtkN0bjq pic.twitter.com/G2agPC795B
— BCCI Domestic (@BCCIdomestic) November 22, 2021
ತಮಿಳುನಾಡು ಪರವಾಗಿ ನಾರಾಯಣ್ ಜಗದೀಶನ್ 41 ರನ್(46 ಎಸೆತ, 2 ಬೌಂಡರಿ, 1 ಸಿಕ್ಸರ್) ಹರಿ ನಿಶಾಂತ್ 23 ರನ್(12 ಎಸೆತ, 1 ಬೌಂಡರಿ, 2 ಸಿಕ್ಸರ್), ಕೊನೆಯಲ್ಲಿ ಶಾರೂಖ್ ಖಾನ್ ಔಟಾಗದೇ 33 ರನ್(15 ಎಸೆತ, 1 ಬೌಂಡರಿ, 3 ಸಿಕ್ಸರ್) ಸಿಡಿಸಿದರು.
ಕರ್ನಾಟಕದ ಪರವಾಗಿ ಅಭಿನವ್ ಮನೋಹರ್ 46 ರನ್(37 ಎಸೆತ, 4 ಬೌಂಡರಿ, 2 ಸಿಕ್ಸರ್), ಪ್ರವೀಣ್ ದುಬೆ 33 ರನ್(25 ಎಸೆತ, 3 ಬೌಂಡರಿ, 1 ಸಿಕ್ಸರ್) ಹೊಡೆದರು. ಅಂತಿಮವಾಗಿ ಕರ್ನಾಟಕ 20 ಓವರ್‌ಗಳಲ್ಲಿ 151 ರನ್ ಗಳಿಸಿತು.