ನವದೆಹಲಿ: ಅಡುಗೆ ಎಣ್ಣೆ (Cooking Oil) ಪೊಟ್ಟಣದ ಗಾತ್ರವನ್ನು ನಿಗದಿಪಡಿಸಿ ಕೇಂದ್ರ ಸರ್ಕಾರ ಹೊಸ ಆದೇಶ ಹೊರಡಿಸಿದೆ. ಕಂಪನಿಗಳು ತಮಗೆ ಇಷ್ಟ ಬಂದಂತೆ ಗಾತ್ರ ಮತ್ತು ಪ್ರಮಾಣದಲ್ಲಿ ಎಣ್ಣೆ ಮಾರಾಟ ಮಾಡಲು ಅವಕಾಶ ಇರಲ್ಲ ಅಂತ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯ ಸೂಚಿಸಿದೆ.
ಇದರಿಂದಾಗಿ ಗ್ರಾಹಕರಿಗೆ ಖಾದ್ಯ ತೈಲದ ವಿವಿಧ ಕಂಪನಿ, ಬ್ರ್ಯಾಂಡ್‌ಗಳ ಮಾರಾಟ ದರವನ್ನು ಹೋಲಿಸಿ ಖರೀದಿಸಲು ಅನುಕೂಲವಾಗಲಿದೆ ಅಂತ ಸಚಿವಾಲಯ ತಿಳಿಸಿದೆ. ಅಡುಗೆ ಎಣ್ಣೆ ಪೊಟ್ಟಣದ ಗಾತ್ರ ಮತ್ತು ಅವುಗಳಲ್ಲಿ ಭರ್ತಿ ಮಾಡುವ ತೈಲದ ಪ್ರಮಾಣಕ್ಕೆ ಸಂಬಂಧಿಸಿದಂತೆ ಪ್ರಮಾಣಿತ ಕಾರ್ಯಾಚರಣೆಗೆ ವಿಧಾನಕ್ಕೆ (ಎಸ್‌ಓಪಿ) ಇಲಾಖೆಯು ತಿದ್ದುಪಡಿ ಮಾಡಿದೆ. ಇದನ್ನೂ ಓದಿ: ನಾಳೆ ದೆಹಲಿಯಲ್ಲಿ ಇಂಡಿಯಾ ಒಕ್ಕೂಟ ಸಭೆ – ಟಿಎಂಸಿ ಸೇರಿ 23 ಪಕ್ಷಗಳ ನಾಯಕರು ಭಾಗಿ
ಎಣ್ಣೆ ತಯಾರಕರು, ಪ್ಯಾಕ್ ಮಾಡುವವರು, ಆಮದುದಾರರು 3 ತಿಂಗಳಲ್ಲಿ ಈ ಹೊಸ ನಿಯಮ ಅಳವಡಿಸಿಕೊಳ್ಳಬೇಕು ಅಂತ ಗುಡುವು ವಿಧಿಸಿದೆ. ಪರಿಷ್ಕೃತ ಎಸ್‌ಓಪಿ ಪ್ರಕಾರ 9 ಬಗೆಯ ಪೊಟ್ಟಣಗಳಲ್ಲಿ ಮಾರಬಹುದಾಗಿದೆ. 200 ಗ್ರಾಂ, 500 ಗ್ರಾಂ, 1 ಲೀಟರ್/ ಕೆಜಿ, 2 ಲೀಟರ್/ಕೆಜಿ, 3 ಲೀಟರ್/ಕೆಜಿ, 4 ಲೀಟರ್/ಕೆಜಿ, 5 ಲೀಟರ್/ಕೆಜಿ, 15 ಲೀಟರ್/ಕೆಜಿ, 20 ಲೀಟರ್/ ಕೆಜಿಯ ಪೊಟ್ಟಣ್ಣಗಳಲ್ಲಿ ಮಾರಾಟ ಮಾಡಬಹುದಾಗಿದೆ.
ತಾಳೆ ಎಣ್ಣೆ (ಪಾಮ್ ಆಯಿಲ್), ಸೋಯಾಬೀನ್, ಸೂರ್ಯಕಾಂತಿ, ಶೇಂಗಾ, ಸಾಸಿವೆ, ಎಳ್ಳು, ಅಕ್ಕಿ ಹೊಟ್ಟಿನಿಂದ ಮಾಡಿದ ಎಣ್ಣೆ, ಹತ್ತಿ, ಜೋಳದ ಎಣ್ಣೆಗಳಿಗೆ ಈ ಎಸ್‌ಓಪಿ ಅನ್ವಯ ಆಗಲಿದೆ. 200 ಎಂಎಲ್‌ಗಿಂತ ಕಡಿಮೆ ಇರುವ ಪ್ಯಾಕ್‌ಗಳಿಗೆ ಈ ನಿಯಮ ಅನ್ವಯಿಸಲ್ಲ. ಇದನ್ನೂ ಓದಿ: ವಿದೇಶದಲ್ಲಿನ ಕೆಲ ಶಕ್ತಿಗಳು ದೇಶದ ಯುವಜನರನ್ನ ಕೈಗೊಂಬೆಯಾಗಿ ಮಾಡಿಕೊಳ್ಳಲು ಬಯಸ್ತಿವೆ; ʻಕಾಕ್ರೋಚ್ʼಗೆ ನಬಿನ್ ಚಾಟಿ
