ನಟಿ ಜಾನ್ವಿ ಕಪೂರ್ (Janhvi Kapoor)ಅಭಿನಯದ ಪೆದ್ದಿ ಸಿನಿಮಾ (Peddi Cinema) ಬಿಡುಗಡೆಯಾದ ಬಳಿಕ ಅವರ ಪಾತ್ರದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಮತ್ತು ಟೀಕೆಗಳು ವ್ಯಕ್ತವಾಗುತ್ತಿವೆ. ಈ ನಡುವೆ ಜಾನ್ವಿ ಕಪೂರ್ ಅವರಿಗೆ ಅವರ ಮೇಕಪ್ ಆರ್ಟಿಸ್ಟ್ ಸವ್ಲೀನ್ ಕೌರ್ ಮಂಚಂದಾ ಬೆಂಬಲ ಸೂಚಿಸಿದ್ದಾರೆ.
ಮೇಕಪ್ ಆರ್ಟಿಸ್ಟ್ ಸವ್ಲೀನ್ ಕೌರ್ ಮಂಚಂದಾ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ, ‘ಒಬ್ಬ ನಟಿ ಆಯ್ಕೆ ಮಾಡಿಕೊಂಡ ಪಾತ್ರಕ್ಕಾಗಿ ಅವರನ್ನು ಮಾತ್ರ ದೂಷಿಸುವುದು ಸರಿಯಲ್ಲ. ಪೋಸ್ಟ್-ಪ್ರೊಡಕ್ಷನ್ ಹಂತದಲ್ಲೇ ಜಾನ್ವಿ ಕಪೂರ್ ಕೆಲವು ದೃಶ್ಯಗಳ ಬಗ್ಗೆ ಪ್ರಶ್ನಿಸಿದ್ದರು. ಮಹಿಳೆಯರನ್ನು ಅತೀ ಮಾದಕತೆಯಿಂದ ಚಿತ್ರಿಸುವ ದೃಶ್ಯಗಳ ವಿರುದ್ಧ ಧ್ವನಿ ಎತ್ತುವ ಮೂಲಕ ಜಾನ್ವಿ ತಮ್ಮ ವೃತ್ತಿಪರ ನಿಲುವನ್ನು ಸ್ಪಷ್ಟಪಡಿಸಿದ್ದರು. ಅಷ್ಟೇ ಅಲ್ಲ ಕೆಲವು ದೃಶ್ಯಗಳಲ್ಲಿ ಬಳಸಲಾದ ಕ್ಯಾಮೆರಾ ಆ್ಯಂಗಲ್‌ಗಳ ಬಗ್ಗೆ ಜಾನ್ವಿ ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ ಸಿನಿಮಾದಲ್ಲಿ ಆ ದೃಶ್ಯಗಳನ್ನು ಉಳಿಸಿಕೊಳ್ಳಲಾಗಿದೆ’ ಎಂದು ಆರೋಪಿಸಿದ್ದಾರೆ. ಈ ಪೋಸ್ಟ್ ಹಂಚಿಕೊಳ್ಳುವ ಮೂಲಕ ಮೇಕಪ್ ಆರ್ಟಿಸ್ಟ್ ಸವ್ಲೀನ್ ಕೌರ್ ಮಂಚಂದಾ ಅವರು ಜಾನ್ವಿ ಕಪೂರ್ ಬೆಂಬಲಕ್ಕೆ ನಿಂತಿದ್ದಾರೆ.ಇದನ್ನೂ ಓದಿ: ಸಿಎಂ ವಿಜಯ್ ರಾಜೀನಾಮೆ ಕೊಟ್ಟ ತಿರುಚ್ಚಿ ಕ್ಷೇತ್ರದಿಂದ ರಾಘವ ಲಾರೆನ್ಸ್ ಸ್ಪರ್ಧೆ?
ವಿವಾದಗಳ ನಡುವೆಯೂ ಪೆದ್ದಿ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಜೂನ್ 4 ರಂದು ಬಿಡುಗಡೆಯಾದ ಈ ಚಿತ್ರ ಭಾರತದಲ್ಲಿ 125.25 ಕೋಟಿ ರೂ.ಗೂ ಹೆಚ್ಚು ಗಳಿಕೆ ಕಂಡಿದ್ದು, ವಿಶ್ವದಾದ್ಯಂತ 190 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ. ಚಿತ್ರದಲ್ಲಿ ರಾಮ್ ಚರಣ್, ಬೋಮನ್ ಇರಾನಿ, ದಿವ್ಯೇಂದು ಶರ್ಮಾ ಹಾಗೂ ಶಿವ ರಾಜ್‌ಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದನ್ನೂ ಓದಿ: ಖ್ಯಾತ ರಾಷ್ಟ್ರ ಪ್ರಶಸ್ತಿ ವಿಜೇತ ಮಲಯಾಳಂ ನಟ ಸಲೀಂ ಕುಮಾರ್ ಇನ್ನಿಲ್ಲ
