ಬೆಂಗಳೂರು: ಕಾಂತರ ಸಿನಿಮಾ ನಟಿ ರುಕ್ಮಿಣಿ ವಸಂತ್ (Rukmini Vasanth) ಬಿಕಿನಿ ಫೋಟೋ ವೈರಲ್ ಪ್ರಕರಣದ ತನಿಖೆಯನ್ನ ಸೈಬರ್ ಕ್ರೈಂ ಪೊಲೀಸರು (Cyber Crime Police) ಚುರುಕುಗೊಳಿಸಿದ್ದಾರೆ.
ಎಐ ತಂತ್ರಜ್ಞಾನ ಬಳಸಿ ಕೆಲ ಕಿಡಿಗೇಡಿಗಳು ಸಾಮಾಜಿಕ ಜಾಲಾತಾಣಗಳಲ್ಲಿ ನಟಿ ರುಕ್ಮಿಣಿ ವಸಂತ್ ಅವರ ಫೋಟೋಗಳನ್ನ ಎಡಿಟ್ ಮಾಡಿ ವಿವಿಧ ಅಕೌಂಟ್‌ಗಳಿಂದ ವೈರಲ್ ಮಾಡಲಾಗುತ್ತಿತ್ತು. ಸಾಮಾಜಿಕ ಜಾಲಾತಾಣದಲ್ಲಿ ನನ್ನ ಬಿಕಿನಿ ಫೋಟೋಗಳನ್ನ ಹಾಕಿ ತೆಜೋವಧೆ ಮಾಡಲಾಗುತ್ತಿದೆ ಎಂದು ಆರೋಪಿಸಿ ನಟಿ ಬೆಂಗಳೂರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಹಾಗಾಗಿ ಪೊಲೀಸರು ದೂರಿನಲ್ಲಿ ಉಲ್ಲೇಖಿಸಿದ್ದ ಅಕೌಂಟ್‌ಗಳ ಬಗ್ಗೆ ಮಾಹಿತಿಗಾಗಿ ಮೆಟಾಗೆ ಪತ್ರ ಬರೆದಿದ್ದಾರೆಂದು ತಿಳಿದುಬಂದಿದೆ. ಇದನ್ನೂ ಓದಿ: ಕೊಡಗಿನ ಹೋಂಸ್ಟೇ ಬಾತ್‌ರೂಮ್‌ನಲ್ಲಿ ಗ್ಯಾಸ್ ಸೋರಿಕೆ; ಮೈಸೂರಿನ ಯುವತಿ ಸಾವು
ಅದಕ್ಕೂ ಮೊದಲು ವೈರಲ್ ಫೋಟೋಸ್‌ಗಳ ಬಗ್ಗೆ ನಟಿ ರುಕ್ಮಿಣಿ ವಸಂತ್ ಅವರಿಂದ ಮಾಹಿತಿ ಪಡೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ನಟಿ ವೈರಲ್ ಫೋಟೋ ಅಸಲಿಯೋ ಎಐ ಜನರೇಟೆಡೋ ಅನ್ನೋದನ್ನ ಖಾತರಿ ಪಡಿಸಿಕೊಳ್ಳಲಾಗಿದೆ. ಪೊಲೀಸರ ಪ್ರಾಥಮಿಕ ತನಿಖೆಯ ವೇಳೆ ವೈರಲ್ ಪೋಟೊಗಳು ಎಐ ತಂತ್ರಜ್ಞಾನ ಬಳಸಿ ಮಾಡಿ ವೈರಲ್ ಮಾಡುತ್ತಿರುವ ಫೋಟೋಸ್‌ಗಳು ಎಂದು ತಿಳಿದು ಬಂದಿದೆ ಎನ್ನಲಾಗಿದೆ. ಇದನ್ನೂ ಓದಿ: ಸಿಎಂ ಡಿಕೆ ಶಿವಕುಮಾರ್‌ಗೆ ವಿಡಿಯೋ ಕಾಲ್ ಮಾಡಿ ಮಲೇಷ್ಯಾ ಪ್ರಧಾನಿ ವಿಶ್
ಹಾಗಾಗಿ ಪೊಲೀಸರು ನಟಿ ಬಿಕಿನಿ ಪೋಟೋಗಳನ್ನ ವೈರಲ್ ಮಾಡಿ ತೇಜೋವಧೆ ಮಾಡುತ್ತಿದ್ದ ಸುಮಾರು 20ಕ್ಕೂ ಹೆಚ್ಚು ಅಕೌಂಟ್‌ಗಳ ಮಾಹಿತಿಯನ್ನ ಸೈಬರ್ ಕ್ರೈಂ ಪೊಲೀಸರು ಕೇಳಿದ್ದಾರೆ. ನಟಿಯ ಫೋಟೋ ವೀಡಿಯೋ ವೈರಲ್ ಮಾಡಿದವರ ಮಾಹಿತಿ ಸಿಗುತ್ತಿದ್ದಂತೆ ಆರೋಪಿಗಳಿಗೆ ಸೈಬರ್ ಕ್ರೈಂ ಪೊಲೀಸರು ಬಲೆ ಬೀಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ನಾಳೆ ದೆಹಲಿಯಲ್ಲಿ ಇಂಡಿಯಾ ಒಕ್ಕೂಟ ಸಭೆ – ಟಿಎಂಸಿ ಸೇರಿ 23 ಪಕ್ಷಗಳ ನಾಯಕರು ಭಾಗಿ
