ಬೆಂಗಳೂರು: ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ತನ್ನ ಅಭ್ಯರ್ಥಿಯನ್ನು ಪ್ರಕಟಿಸಿದೆ. ಮೈತ್ರಿಕೂಟವು 3ನೇ ಅಭ್ಯರ್ಥಿಯಾಗಿ ಗೋವಿಂದ ರಾಜು (Govinda Raju) ಅವರನ್ನು ಕಣಕ್ಕಿಳಿಸಿದೆ.
ಕಾಂಗ್ರೆಸ್‌ನ 5ನೇ ಅಭ್ಯರ್ಥಿ ವಿನಯ್ ಕಾರ್ತಿಕ್ ವಿರುದ್ಧ ಮೈತ್ರಿಕೂಟದ ಅಭ್ಯರ್ಥಿ ಜೆಡಿಎಸ್‌ನ ಗೋವಿಂದ ರಾಜು ಸ್ಪರ್ಧೆ ಮಾಡಲಿದ್ದಾರೆ.
ಜೆಡಿಎಸ್‌ನ ಮಾಜಿ ಪರಿಷತ್ ಸದಸ್ಯರಾದ ಫಾರೂಕ್ ಹಾಗೂ ರಮೇಶ್ ಗೌಡ ಇಬ್ಬರಲ್ಲಿ ಒಬ್ಬರು ಮೈತ್ರಿಕೂಟದ ಅಭ್ಯರ್ಥಿ ಆಗಬಹುದು ಎನ್ನಲಾಗಿತ್ತು. ಆದರೆ, ಕೇಂದ್ರ ಸಚಿವ ಕುಮಾರಸ್ವಾಮಿಯಿಂದ ಕಡೆ ಗಳಿಗೆಯಲ್ಲಿ ಗೋವಿಂದ ರಾಜು ಕಣಕ್ಕೆ ಇಳಿಸಲು ತೀರ್ಮಾನಿಸಿದೆ.
