– ಶತ್ರುಗಳ ಮೇಲೆ ಸಿಡಿಸಲು ಸರ್ವಸನ್ನದ್ಧ ಎಂದ SIPRI
ನವದೆಹಲಿ: ಭಾರತ ಇದೇ ಮೊದಲ ಬಾರಿ `12 ನಿಯೋಜಿತ ಪರಮಾಣು ಸಿಡಿತಲೆ’ಗಳನ್ನು ಹೊಂದಿದೆ ಅಂತ ಸಿಪ್ರಿ (ಸ್ಟಾಕ್‌ಹೊಲ್ಮ್ ಅಂತಾರಾಷ್ಟ್ರೀಯ ಶಾಂತಿ ಸಂಶೋಧನಾ ಸಂಸ್ಥೆ) ಹೇಳಿದೆ.
ಭಾರತದ ಒಟ್ಟು 12 ನ್ಯೂಕ್ಲಿಯರ್ ವಾರ್ ಹೆಡ್ಸ್ ಹೊಂದಿದ್ದು, ಶತ್ರುಗಳ ಮೇಲೆ ಸಿಡಿಸಲು ಸರ್ವಸನ್ನದ್ಧಗೊಳಸಿ ಇಡಲಾಗಿದೆ. ಚೀನಾ 2024ರಲ್ಲಿ 24 ಪರಮಾಣು ಸಿಡಿತಲೆಗಳನ್ನು ಹೊಂದಿದ್ದು, ಈಗ 34ಕ್ಕೆ ಹೆಚ್ಚಿಸಿಕೊಂಡಿದೆ.
ಸಂಗ್ರಹಿಸಿಡಲಾಗುವ ಪರಮಾಣು ಶಸ್ತ್ರಾಸ್ತ್ರವನ್ನು ಕೂಡಲೇ ಶತ್ರುಗಳ ಮೇಲೆ ಪ್ರಯೋಗಿಸಲು ಬರೋದಿಲ್ಲ. ಶಸ್ತ್ರಾಸ್ತ್ರ ವ್ಯವಸ್ಥೆಯಲ್ಲಿ ತಂದಿಟ್ಟು ನಂತರ ಶತ್ರುಗಳತ್ತ ಉಡಾಯಿಸಬೇಕಾಗುತ್ತದೆ. ಆದ್ರೆ ನಿಯೋಜಿತ ಸಿಡಿತಲೆಗಳು ಹಾಗಲ್ಲ.. ಅದಾಗಲೇ ಅವುಗಳನ್ನು ಶತ್ರುಗಳ ಮೇಲೆ ಹಾರಿಸಲು ಸರ್ವಸನ್ನದ್ಧಗೊಳಿಸಿ ಇಡಲಾಗಿರುತ್ತದೆ. ಅಂತಹ 12 ನಿಯೋಜಿತ ಪರಮಾಣು ಸಿಡಿತಲೆಗಳನ್ನು ಭಾರತ ಹೊಂದಿದೆ ಎಂದು ಸಿಪ್ರಿ ಹೇಳಿದೆ.
