ವಾಷಿಂಗ್ಟನ್: ಅಮೆರಿಕದ ವೀಸಾ ಶುಲ್ಕಕ್ಕೆ ಫೆಡರಲ್ ನ್ಯಾಯಾಲಯವು ತಡೆ ಕೊಟ್ಟಿದೆ. ಹೆಚ್-1ಬಿ ವೀಸಾಕ್ಕಾಗಿ 1 ಲಕ್ಷ ಡಾಲರ್ ಶುಲ್ಕ ಪಾವತಿಸಬೇಕು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊರಡಿಸಿದ್ದ ಆದೇಶವನ್ನು ರದ್ದುಗೊಳಿಸಿದೆ.
ಹೆಚ್ಚುವರಿ ಶುಲ್ಕ ವಿಧಿಸುವ ನಿರ್ಧಾರವನ್ನು ಸಂಸತ್ತು ಅಂಗೀಕರಿಸಿಲ್ಲ ಎಂದು ಕೋರ್ಟ್ ತೀರ್ಪು ಕೊಟ್ಟಿದೆ.
ಹೆಚ್-1ಬಿ ವೀಸಾ ಶುಲ್ಕವನ್ನು 1 ಲಕ್ಷ ಡಾಲರ್‌ಗೆ ಹೆಚ್ಚಿಸಿ ಟ್ರಂಪ್ ಕಳೆದ ಸೆಪ್ಟೆಂಬರ್‌ನಲ್ಲಿ ಆದೇಶಿಸಿದ್ದರು. ಇದನ್ನು ಪ್ರಶ್ನಿಸಿ 20 ಡೆಮಾಕ್ರಟಿಕ್ ಸ್ಟೇಟ್ ಅಟಾರ್ನಿ ಜನರಲ್‌ಗಳು ಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಆದ್ರೆ ಕೆಲವು ವಿದೇಶಿ ಪ್ರಜೆಗಳ ಪ್ರವೇಶವನ್ನು ನಿರ್ಬಂಧಿಸಲು ಫೆಡರಲ್ ವಲಸೆ ಕಾನೂನಿನ ಅಡಿಯಲ್ಲಿ ವೀಸಾಕ್ಕೆ ಹೆಚ್ಚುವರಿ ಶುಲ್ಕ ವಿಧಿಸುವ ಕಾನೂನು ಬದ್ಧ ಅಧಿಕಾರ ಅಧ್ಯಕ್ಷರಿಗೆ ಇದೆ ಎಂಬ ಸರ್ಕಾರಿ ಪರ ವಕೀಲರ ವಾದಕ್ಕೆ ನ್ಯಾಯಾಧೀಶರು ಮನ್ನಣೆ ನೀಡಿಲ್ಲ. ಸದ್ಯ ಅಮೆರಿಕ ನ್ಯಾಯಾಲಯದ ತೀರ್ಪನ್ನು ಭಾರತೀಯರು ಸ್ವಾಗತಿಸಿದ್ದಾರೆ.
