ಬಿಗ್ಬಾಸ್ ಮನೆ ಇದೀಗ ಕಾಡಿನ ರೂಪ ಪಡೆದುಕೊಂಡಿದೆ. ಅದರಲ್ಲಿ ಇಬ್ಬರು ಕ್ಯಾಪ್ಟನ್.. ಓರ್ವ ಜೋಕರ್.. ಇದೀಗ ಓರ್ವ ಗುಳ್ಳೆನರಿ ಕಾಡನ್ನು ಸೇರಿಕೊಂಡಿದೆ. ಈಗಾಗಲೇ ಒಂದು ಟಾಸ್ಕ್ ಗೆದ್ದಿರುವ ಗುಳ್ಳೆನರಿಗೆ ಬಿಗ್ಬಾಸ್ ಇದೀಗ ಇನ್ನೊಂದು ಟಾಸ್ಕ್ ನೀಡಿದ್ದಾರೆ.
ಮನೆಯಲ್ಲಿರುವ ಗುಳ್ಳೆನರಿ ಯಶಸ್ಗೆ ಬಿಗ್ಬಾಸ್ (Bigg Boss) ಒಂದು ಟಾಸ್ಸ್ ನೀಡಿದ್ದಾರೆ. ಅದರಂತೆ ಮನೆಗೆ ಒಂದು ಪತ್ರದಲ್ಲಿ, ಮನೆಯ ಒಬ್ಬರು ಸದಸ್ಯರನ್ನು ಆರಿಸಿ, ಅವರ ಹೆಸರನ್ನು ಮನೆಯ ಯಾವುದಾದರೂ ಒಂದು ಕನ್ನಡಿಯ ಮೇಲೆ ಹೆಸರಿನೊಂದಿಗೆ ಹಾಂಟೆಡ್ ಎಂದು ಬರೆಯಬೇಕು ಎಂದು ತಿಳಿಸಿರುತ್ತಾರೆ. ಇದನ್ನೂ ಓದಿ:ಬಿಗ್ಬಾಸ್ ಕಾಡಿನಲ್ಲಿ ಆಟ ಆರಂಭಿಸಿದ ಗುಳ್ಳೆನರಿ – ಚಾಣಾಕ್ಷತೆಯಿಂದ ನಂಬಿಕೆ ಗಳಿಸಿ, ದ್ರೋಹ ಬಗೆದು ಅಧಿಕಾರ ಪಡೆಯೋರ್ಯಾರು?
ಗುಳ್ಳೆನರಿಯ Secret mission ಸಕ್ಸಸ್ ಆಗುತ್ತಾ?
ಬಿಗ್ ಬಾಸ್ | ಸೋಮ – ಶುಕ್ರ ರಾತ್ರಿ 9:30 | ಶನಿ – ಭಾನು ರಾತ್ರಿ 9:00
ಫುಲ್ಸ್ಟಾಪ್ ಇಲ್ಲದೇ 24X7 ನಾನ್ ಸ್ಟಾಪ್ ಮನರಂಜನೆ #JioHotstarನಲ್ಲಿ – https://t.co/96hibtGUwq
#BBK13 #ColorsKannada #ಕಲರ್ಫುಲ್ಕತೆ #colorfulstory #KichchaSudeepa #CKBBKPromo https://t.co/LWbFwr50cv
— Colors Kannada (@ColorsKannada) November 25, 2026
ಅದರಂತೆ ಯಶಸ್ ಪ್ರಶಾಂತ್ ಅವರ ಹೆಸರನ್ನು ಆಯ್ಕೆ ಮಾಡಿಕೊಂಡು, ಪ್ರಶಾಂತ್ ಹಾಂಟೆಡ್ ಎಂದು ಬಾತ್ರೂಮ್ನ ಒಂದು ಕನ್ನಡಿಯ ಮೇಲೆ ಬರೆಯುತ್ತಾರೆ. ಇದನ್ನು ನೋಡಿದ ಮನೆಯವರು ಯಾರು ಬರೆದರೂ ಎಂದು ಶಾಕ್ನಲ್ಲಿದ್ದಾರೆ.
ಇದಕ್ಕೂ ಮುನ್ನ ನಿನ್ನೆಯ ಟಾಸ್ಕ್ನಲ್ಲಿ ಯಶಸ್ ಗಾನವಿ ಕ್ಯಾಪ್ಟನ್ಸಿಯ ಟೀಮ್ಗೆ ಸೇರಿಕೊಂಡು.. ತಂಡವನ್ನು ಸೋಲಿಸುವಲ್ಲಿ ಯಶಸ್ವಿಯಾಗಿದ್ದಾರೆ.ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್ – 2ನೇ ಬಾರಿ ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲೇರಿದ ಪವಿತ್ರಾಗೌಡ
