ದಾವಣಗೆರೆ: ಕಿಡಿಗೇಡಿಯೊಬ್ಬ ತೋಟದಲ್ಲಿ ಚಿರತೆ ಓಡಾಡುವಂತೆ AI ಚಿತ್ರ ಸೃಷ್ಟಿಸಿ ಜನರಲ್ಲಿ ಆತಂಕ ಮೂಡಿಸಿದ ಘಟನೆ ಚನ್ನಗಿರಿ ಪಟ್ಟಣದ ಹೊರವಲಯದಲ್ಲಿ ನಡೆದಿದೆ.
ಅಪರಿಚಿತ ಆರೋಪಿ ಎಐ ಬಳಸಿ ತೆಂಗಿನ ತೋಟದಲ್ಲಿ ಚಿರತೆ ಸೃಷ್ಟಿಸಿದ್ದಾನೆ. ಅಲ್ಲದೇ ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು, ತೋಟದಲ್ಲಿ ಚಿರತೆ ಪ್ರತ್ಯಕ್ಷ ಎಂಬ ಸುಳ್ಳು ಸುದ್ದಿ ಹಬ್ಬಿಸಿದ್ದಾನೆ. ಇದರಿಂದ ಸುತ್ತಮುತ್ತಲಿನ ಜನ ಆತಂಕಕ್ಕೊಳಗಾಗಿದ್ದಾರೆ. ಇದನ್ನೂ ಓದಿ: ಸಂತೇಬೆನ್ನೂರು ಸುತ್ತಮುತ್ತ ಕರಡಿಗಳ ಹಾವಳಿ – ಅರಣ್ಯ ಇಲಾಖೆ ವಿರುದ್ಧ ರೈತರ ಆಕ್ರೋಶ
ಈ ವಿಚಾರ ತಿಳಿಯುತ್ತಿದ್ದಂತೆ ಪೊಲೀಸರು ಸುಳ್ಳು ಸುದ್ದಿ ಹರಡಿದ ಕಿಡಿಗೇಡಿಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಇತ್ತೀಚೆಗಷ್ಟೇ ದೆವ್ವ ಇದೆ ಎಂದು AI ಚಿತ್ರ ರಚಿಸಿ ಕಿಡಿಗೇಡಿಗಳು ವೈರಲ್ ಮಾಡಿದ್ದರು. ಇದನ್ನೂ ಓದಿ: ಬೇಲೂರಿನಿಂದ ಮೂಡಿಗೆರೆಯತ್ತ ಕಾಡಾನೆಗಳ ಸಂಚಾರ; ಸುತ್ತಮುತ್ತಲಿನ ಗ್ರಾಮಸ್ಥರಿಗೆ ಅರಣ್ಯ ಇಲಾಖೆ ಎಚ್ಚರಿಕೆ
