– 2 ಪರ್ಯಾಯ ರಸ್ತೆ ಎಂದ ಕೃಷ್ಣ ಬೈರೇಗೌಡ
ಬೆಂಗಳೂರು: ಕೊನೆಗೂ ಪರಿಸರವಾದಿಗಳ ಹೋರಾಟಕ್ಕೆ ಮಣಿದು ರಾಜ್ಯ ಸರ್ಕಾರ ಪ್ರಸ್ತಾವಿತ ಲಾಲ್ಬಾಗ್ (Lalbagh) ಮೂಲಕ ಹಾದು ಹೋಗಲಿರುವ ಸುರಂಗ ಮಾರ್ಗ (Tunnel Road) ನಿರ್ಮಾಣದಿಂದ ಹಿಂದೆ ಸರಿದಿದೆ. ಅಲ್ಲದೇ 2 ಪರ್ಯಾಯ ಮಾರ್ಗದ ಹುಡುಕಾಟ ನಡೆಸುತ್ತಿದೆ.
ಹೆಬ್ಬಾಳ ಎಸ್ಟೀಮ್ ಮಾಲ್ನಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ 16.75 ಕಿ.ಮೀ. ಉದ್ದದವರೆಗೆ ಯೋಜಿಸಿರುವ ಸುರಂಗ ಯೋಜನೆಯಲ್ಲಿ ಲಾಲ್ಬಾಗ್ನ ಬಂಡೆ ಕೆಳಗೆ ಮಾರ್ಗ ಹಾದು ಹೋಗುವ ಪ್ರಸ್ತಾವನೆ ಇತ್ತು. ಸಸ್ಯೋದ್ಯಾನದಲ್ಲಿ ಒಂದು ಎಕ್ಸಿಟ್ ಮಾರ್ಗ ರಚಿಸುವ ಉದ್ದೇಶವಿತ್ತು. ಇದು ಪರಿಸರವಾದಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಸುರಂಗ ಹಾದು ಹೋದರೆ ಪ್ರಾಚೀನ ಬಂಡೆ ಹಾಗೂ ಐತಿಹಾಸಿಕ ಕೆಂಪೇಗೌಡ ಕಾವಲು ಗೋಪುರಕ್ಕೆ ಹಾನಿಯಾಗಲಿದೆ ಅಂತಾ ಹೋರಾಟಕ್ಕೆ ಇಳಿದಿದ್ದರು. ಇದರ ಬೆನ್ನಲ್ಲೇ ಸಚಿವ ಕೃಷ್ಣ ಬೈರೇಗೌಡ (Krishna Byre Gowda) ಲಾಲ್ಬಾಗ್ನಲ್ಲಿ ಟನಲ್ ರೋಡ್ ಪ್ರಸ್ತಾವನೆ ಸರ್ಕಾರ ಸಂಪೂರ್ಣ ಕೈಬಿಟ್ಟಿದೆ ಎಂದು ಸ್ಪಷ್ಟಪಡಿಸಿದರು. ಅಲ್ಲದೇ ಪರ್ಯಾಯ ಮಾರ್ಗದ ಹುಡುಕಾಟದ ಬಗ್ಗೆಯೂ ಹೇಳಿದರು. ಇದನ್ನೂ ಓದಿ: ಬೀದರ್ನಲ್ಲಿ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ವಿಶ್ವಪ್ರಸಿದ್ಧ ಕ್ರಿಕೆಟ್ ಆಟಗಾರ ಜಾಂಟಿ ರೋಡ್ಸ್ ಚಾಲನೆ
ಸುರಂಗ ಕೊರೆಯುವ ಕಂಪನದಿಂದ ಬಂಡೆಯಲ್ಲಿ ಬಿರುಕು ಮೂಡುವ ಮತ್ತು ಅಂತರ್ಜಲ ವ್ಯವಸ್ಥೆ ಏರುಪೇರಾಗುವ ಸಾಧ್ಯತೆಯ ಬಗ್ಗೆ ಆತಂಕ ಎದುರಾಗಿತ್ತು. ಈಗ ಸರ್ಕಾರ ಪರ್ಯಾಯ ಮಾರ್ಗದ ಸರ್ವೆ ನಡೆಸುತ್ತಿದೆ. ಈ ಮಧ್ಯೆ ಸರ್ಕಾರಕ್ಕೆ ಮಾರ್ಗ ಬದಲಾವಣೆಯಿಂದ ದರ ಹೆಚ್ಚಳವೂ ಆಗಲಿದ್ದು, ಟೋಲ್ ವರ್ಷವನ್ನು ವಿಸ್ತರಣೆ ಮಾಡೋದಾಗಿ ಹೇಳಿದರು. ಎರಡು ಸ್ಥಳ ವೀಕ್ಷಣೆ ಮಾಡಿದ್ದು, ಒಂದು ಅಂತಿಮವಾಗಲಿದೆ ಎಂದರು. ಲಾಲ್ಬಾಗ್ ಸಿದ್ದಾಪುರ ಅಥವಾ ವಿಲ್ಸನ್ ಗಾರ್ಡನ್ ಪ್ರದೇಶದಲ್ಲಿ ಸುರಂಗ ಎಕ್ಸಿಟ್ಗೆ ಚಿಂತನೆ ನಡೆಸಲಾಗಿದೆ. ಇದನ್ನೂ ಓದಿ: ತೋಟದಲ್ಲಿ AI ಚಿರತೆ ಸೃಷ್ಟಿಸಿ ಪುಂಡಾಟ – ಕಿಡಿಗೇಡಿಗಾಗಿ ಪೊಲೀಸರ ಹುಡುಕಾಟ
ಇನ್ನು ಪ್ರಾಜೆಕ್ಟ್ನ ದರ ಇಳಿಕೆಯ ಬಗ್ಗೆ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಕಮಿಟಿ ರಚನೆಯಾಗಿದ್ದು, ಈಗಾಗಲೇ ಕಂಟ್ರಾಕ್ಟರ್ ಜೊತೆ ಚರ್ಚೆಯೂ ನಡೆಯುತ್ತಿದೆ. ಒಟ್ಟಾರೆ ಸಸ್ಯಕಾಶಿಗೆ ದಕ್ಕೆಯಾಗಲ್ಲ ಎನ್ನುವ ಸುದ್ದಿ ಸರ್ಕಾರ ನೀಡಿದ್ದು, ಬೆಂಗಳೂರಿಗರು ನಿರಾಳರಾಗಿದ್ದಾರೆ. ಇದನ್ನೂ ಓದಿ: ಆದಾಯಕ್ಕಿಂತ ಅಧಿಕ ಆಸ್ತಿ ಆರೋಪ – ಸುಪ್ರೀಂಕೋರ್ಟ್ನಲ್ಲಿ ರಾಹುಲ್ ಗಾಂಧಿಗೆ ರಿಲೀಫ್
