ಮಂಡಿಮನೆ ಟಾಕೀಸ್ ಲಾಂಛನದಲ್ಲಿ ನಿರ್ಮಾಣವಾಗಿರುವ, ‘ಫಸ್ಟ್ ರ್ಯಾಂಕ್ ರಾಜು’ ಖ್ಯಾತಿಯ ನಟ ಗುರುನಂದನ್ ಹಾಗೂ ‘ಪ್ರೇಮದ ಊರಲಿ’ ಖ್ಯಾತಿಯ ನಟಿ ತಪಸ್ವಿನಿ ಪೂಣಚ್ಛ ನಾಯಕ-ನಾಯಕಿಯಾಗಿ ಅಭಿನಯಿಸಿರುವ ‘MR ಜಾಕ್’ ಚಿತ್ರ ಆರಂಭದಿಂದಲೂ ಸಾಕಷ್ಟು ಕುತೂಹಲ ಮೂಡಿಸಿದೆ. ಸುಮಂತ್ ನಿರ್ದೇಶನದಲ್ಲಿ ಚಿತ್ರ ಮೂಡಿ ಬಂದಿದೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಹಾಡುಗಳು ಹಾಗೂ ಟ್ರೇಲರ್ ಪ್ರೇಕ್ಷಕರ ಗಮನ ಸೆಳೆದಿದ್ದು, ಚಿತ್ರತಂಡದ ನಿರೀಕ್ಷೆಯನ್ನು ಹೆಚ್ಚಿಸಿವೆ.
ಇದೀಗ ಚಿತ್ರದ ಮತ್ತೊಂದು ಮನಮೋಹಕ ಹಾಡು ‘ಈ ಮಿಡಿತಕ್ಕೆ ಸೆಳೆತಕ್ಕೆ’ ಬಿಡುಗಡೆಯಾಗಿದೆ. ಖ್ಯಾತ ಸಾಹಿತಿ ಜಯಂತ್ ಕಾಯ್ಕಿಣಿ (Jayanth Kaykini) ಅವರು ಈ ಹಾಡಿಗೆ ಸಾಹಿತ್ಯ ರಚಿಸಿದ್ದು, ರಜತ್ ಹೆಗಡೆ ತಮ್ಮ ಸುಮಧುರ ಗಾಯನದ ಮೂಲಕ ಹಾಡಿಗೆ ಜೀವ ತುಂಬಿದ್ದಾರೆ. ಕಿರಣ್ ರವೀಂದ್ರನಾಥ್ ಸಂಗೀತ ಸಂಯೋಜಿಸಿರುವ ಈ ಹಾಡು ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಇದನ್ನೂ ಓದಿ:ಕಾಲು ಗಳಿಗೆ 8 ಕೆಜಿ ತೂಕದ ಗೆಜ್ಜೆಗಳನ್ನು ಕಟ್ಟಿಕೊಂಡು ಕುಣಿದ ಶ್ರದ್ಧಾ ಕಪೂರ್; ಯಾಕೆ ಗೊತ್ತಾ?
ಜಯಂತ್ ಕಾಯ್ಕಿಣಿ ಅವರ ಮನಮಿಡಿಯುವ ಸಾಹಿತ್ಯ, ರಜತ್ ಹೆಗಡೆ ಅವರ ಸುಮಧುರ ಗಾಯನ ಹಾಗೂ ಕಿರಣ್ ರವೀಂದ್ರನಾಥ್ ಅವರ ಸಂಗೀತ ಸಂಯೋಜನೆಯ ಸಂಗಮವಾಗಿರುವ ಈ ಹಾಡು ಬಿಡುಗಡೆಯಾದ ಕ್ಷಣದಿಂದಲೇ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹಾಡು ಹೆಚ್ಚಿನ ವೀಕ್ಷಣೆ ಪಡೆಯುತ್ತಿದ್ದು, ಸಂಗೀತ ಪ್ರಿಯರ ಗಮನ ಸೆಳೆಯುತ್ತಿದೆ.
ಹಾಡಿನ ನೃತ್ಯ ಸಂಯೋಜನೆ ಹಾಗೂ ನಿರ್ದೇಶನವನ್ನು ಸುಮಂತ್ ನಿರ್ವಹಿಸಿದ್ದಾರೆ. ಶಿವಸೇನ ಅವರ ಛಾಯಾಗ್ರಹಣ ಮತ್ತು ವಿಜಯ್ ರಾಜ್ ಅವರ ಸಂಕಲನ ಹಾಡಿಗೆ ಮತ್ತಷ್ಟು ಮೆರುಗು ನೀಡಿದೆ. ಆಕರ್ಷಕ ಹಾಡುಗಳು, ಕುತೂಹಲಕಾರಿ ಟ್ರೇಲರ್ ಹಾಗೂ ವಿಭಿನ್ನ ಕಥಾಹಂದರದೊಂದಿಗೆ ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಿಸಿದೆ. ಸಂಗೀತ, ಪ್ರೇಮ ಹಾಗೂ ಮನರಂಜನೆಯ ಸಮ್ಮಿಲನವಾಗಿರುವ ಈ ಚಿತ್ರ ಪ್ರೇಕ್ಷಕರ ಮನಗೆಲ್ಲುವ ನಿರೀಕ್ಷೆಯಿದೆ.ಇದನ್ನೂ ಓದಿ: ಬೆಂಗ್ಳೂರಲ್ಲಿ ಪಂಜಾಬಿ ಗಾಯಕ ದಿಲ್ಜಿತ್ ದೋಸಂಜ್ ಸಂಗೀತ ಕಾರ್ಯಕ್ರಮಕ್ಕೆ ಬಾಂಬ್ ಬೆದರಿಕೆ
