– ನನ್ನ ಮಗಳು ಮುಂಬೈನಲ್ಲಿ ಹುಟ್ಟಿದ್ದಕ್ಕೆ ಅವಳಿಗೆ ‘ಇಂಡಿಯಾ’ ಅಂತ ಹೆಸರಿಟ್ಟೆ ಎಂದ ಮಾಜಿ ಕ್ರಿಕೆಟಿಗ
ಬೀದರ್: ಆಕಾಶಕ್ಕೆ ಬಲೂನ್ ಮತ್ತು ಪಾರಿವಾಳಗಳನ್ನು ಬಿಡುವ ಮೂಲಕ 2026ರ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ವಿಶ್ವಪ್ರಸಿದ್ಧ ಕ್ರಿಕೆಟ್ ಆಟಗಾರ ಜಾಂಟಿ ರೋಡ್ಸ್ (Jonty Rhodes) ಚಾಲನೆ ನೀಡಿದರು.
ಪೊಲೀಸ್ ಇಲಾಖೆ ಆಯೋಜನೆಯ ಕ್ರೀಡಾಕೂಟವನ್ನು ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್ ಉದ್ಘಾಟಿಸಿದರು. ಬೀದರ್ನ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಕ್ರೀಡಾಕೂಟ ನಡೆಯಲಿದೆ. ಇದನ್ನೂ ಓದಿ: ಒಂದೇ ಪಂದ್ಯದಲ್ಲಿ 4 ವಿಶ್ವದಾಖಲೆ ಬರೆದ 15ರ ಪೋರ ವೈಭವ್ ಸೂರ್ಯವಂಶಿ!
ವಿವಿಧ ಪೊಲೀಸ್ ತುಕಡಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಸಮಾರಂಭದಲ್ಲಿ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ, ಮಾಜಿ ಸಚಿವ ರಹೀಂ ಖಾನ್ ಭಾಗಿಯಾಗಿದ್ದರು. ಎಸ್ಪಿ ಪ್ರದೀಪ್ ಗುಂಟಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದರು.
ನನ್ನ ಮಗಳು ಮುಂಬೈನಲ್ಲಿ ಹುಟ್ಟಿದ ಕಾರಣ ನಾನು ನನ್ನ ಮಗಳಿಗೆ ‘ಇಂಡಿಯಾ’ ಎಂದು ಹೆಸರು ಇಟ್ಟಿದ್ದೇನೆ. ಭಾರತ ಬಹಳಷ್ಟು ಸುಂದರ ದೇಶವಾಗಿದೆ ಎಂದು ಜಾಂಟಿ ರೋಡ್ಸ್ ಹೇಳಿದ್ದಾರೆ. ಭಾರತವನ್ನು ನನ್ನ ದೇಶದಷ್ಟೆ ಬಹಳಷ್ಟು ಸಲ ನೋಡಿದ್ದೇನೆ. ಅದಕ್ಕಾಗಿ ನಾನು ಇವತ್ತು ಇಂದು ಬೀದರ್ನಲ್ಲಿ ಇದ್ದೇನೆ. ನನ್ನನ್ನು ನೋಡಲು ಮಕ್ಕಳು ತಾಳ್ಮೆಯಿಂದ ಬಹಳಷ್ಟು ಕಾದಿದ್ದೀರಿ, ಧನ್ಯವಾದಗಳು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ವಿಕೆಟ್ ಬಿಟ್ಟುಕೊಡದ ಮಿಚೆಲ್-ಫಿಲಿಪ್ಸ್; ಭಾರತ v/s ಕಿವೀಸ್ ಮೊಲದ ಟೆಸ್ಟ್ ಡ್ರಾನಲ್ಲಿ ಅಂತ್ಯ
ಈ ಪ್ರಜಾಪ್ರಭುತ್ವ ದೇಶ ಸುರಕ್ಷಿತವಾಗಿದೆ. ಪೋಲಿಸ್ ಸೇವೆಗೆ ನೀವು ಮೊದಲು ಧನ್ಯವಾದಗಳು ಹೇಳಿ. ಕ್ರೀಡೆ ಅನ್ನೊದು ಒತ್ತಡ ಜೀವನದಲ್ಲಿ ಬಹಳ ಮುಖ್ಯವಾಗಿದೆ. ಇಂದಿನ ದಿನಗಳಲ್ಲಿ ಬಹಳಷ್ಟು ಮಕ್ಕಳು ಕ್ರಿಕೆಟ್ ಆಟವಾಡುತ್ತಿದ್ದಾರೆ ಎಂದು ಖುಷಿ ವ್ಯಕ್ತಪಡಿಸಿದ್ದಾರೆ.
