ರಾಜ್ಯದಲ್ಲಿ ಮುಂಗಾರು ಅಬ್ಬರ ಜೋರಾಗಿದೆ. ಈ ನಡುವೆ ಮುಂದಿನ ಆರು ದಿನ ರಾಜ್ಯದ ಹಲವೆಡೆ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರು ಸೇರಿ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಒಳನಾಡು ಹಾಗೂ ಕರಾವಳಿಯಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದ್ದು, ಜೂನ್ 13ರವರೆಗೆ ಬಿರುಗಾಳಿ ಸಮೇತ ಮಳೆಯಾಗಲಿದೆ ಎಂದು ತಿಳಿಸಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಚಿಕ್ಕಮಗಳೂರಿನಲ್ಲಿ ಗರಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

ನಗರಗಳ ಹವಾಮಾನ ವರದಿ
ಬೆಂಗಳೂರು: 28-22
ಮಂಗಳೂರು: 27-25
ಶಿವಮೊಗ್ಗ: 27-22
ಬೆಳಗಾವಿ: 28-23
ಮೈಸೂರು: 28-22

ಮಂಡ್ಯ: 28-22
ಮಡಿಕೇರಿ: 23-21
ರಾಮನಗರ: 29-22
ಹಾಸನ: 26-21
ಚಾಮರಾಜನಗರ: 29-23
ಚಿಕ್ಕಬಳ್ಳಾಪುರ: 29-21

ಕೋಲಾರ: 29-22
ತುಮಕೂರು: 28-21
ಉಡುಪಿ: 27-26
ಕಾರವಾರ: 28-27
ಚಿಕ್ಕಮಗಳೂರು: 23-19
ದಾವಣಗೆರೆ: 29-23

ಹುಬ್ಬಳ್ಳಿ: 28-23
ಚಿತ್ರದುರ್ಗ: 29-23
ಹಾವೇರಿ: 28-23
ಬಳ್ಳಾರಿ: 33-24
ಗದಗ: 29-23
ಕೊಪ್ಪಳ: 32-24

ರಾಯಚೂರು: 36-26
ಯಾದಗಿರಿ: 36-27
ವಿಜಯಪುರ: 35-25
ಕಲಬುರಗಿ: 36-26
ಬಾಗಲಕೋಟೆ: 32-24
