ಚಿಕ್ಕಮಗಳೂರು: ಕಳಸ (Kalasa) ತಾಲೂಕಿನ ಸುತ್ತಮುತ್ತ ಭಾರೀ (Rain) ಮಳೆಯಾಗುತ್ತಿದೆ. ಇದರಿಂದ ಚರಂಡಿ ತುಂಬಿ ಬಸ್ ನಿಲ್ದಾಣಕ್ಕೆ ನೀರು ನುಗ್ಗಿದೆ.
ಬುಧವಾರದಿಂದ ಕಾಫಿನಾಡಲ್ಲಿ ಮತ್ತೆ ಮಳೆ ಚುರುಕು ಪಡೆದಿದೆ. ಚರಂಡಿ ತುಂಬಿ ರಸ್ತೆಗೆ ನೀರು ಹರಿದಿದೆ. ಮಳೆ ಕಂಡು ಮಲೆನಾಡಿಗರ ಮೊಗದಲ್ಲಿ ಮಂದಹಾಸ ಮೂಡಿದೆ. ಇದನ್ನೂ ಓದಿ: ಗುಜರಾತ್ | ಭಾರೀ ಮಳೆಗೆ ಪಾರ್ಕಿಂಗ್ ಸ್ಥಳ ಜಲಾವೃತ; ನೀರಲ್ಲಿ ಮುಳುಗಿದ 50 ಕ್ಕೂ ಹೆಚ್ಚು ಕಾರುಗಳು
ಜುಲೈ ಕೊನೆ ಬಂದರೂ ಕೊಡಿ ಬೀಳಬೇಕಾದ ಮಲೆನಾಡ ಕೆರೆಕಟ್ಟೆಗಳಲ್ಲಿ ನೀರಿನ ಕೊರತೆ ಉಂಟಾಗಿದೆ. ಆಗಸ್ಟ್ ಬಂದರೂ ಮಳೆಗಾಗಿ ಸಮೃದ್ಧ ಮಳೆಗಾಗಿ ಆಕಾಶದ ಕಡೆ ರೈತರು ಮುಖ ಮಾಡಿದ್ದಾರೆ. ಇದನ್ನೂ ಓದಿ: ಶಿವನಸಮುದ್ರ & ಶಿಂಷಾದಲ್ಲಿ ಜಲವಿದ್ಯುತ್ ಉತ್ಪಾದನೆ ಸಂಪೂರ್ಣ ಸ್ಥಗಿತ
