ಬೆಂಗಳೂರು: ರಾಜ್ಯದ ಗ್ರಾಹಕರಿಗೆ ಸರ್ಕಾರ ದರ ಏರಿಕೆ ಶಾಕ್ ಕೊಟ್ಟಿದೆ. ಬೆಣ್ಣೆ (Butter) ಮತ್ತು ತುಪ್ಪ (Ghee) ದರವನ್ನು ಹೆಚ್ಚಳ ಮಾಡಿದೆ.
ತುಪ್ಪದ ಬೆಲೆ ಕೆಜಿಗೆ 15 ರೂ., ಬೆಣ್ಣೆ ದರ ಕೆಜಿಗೆ 22 ರೂ. ದರ ಹೆಚ್ಚಿಸಲಾಗಿದೆ. ಪರಿಷ್ಕೃತ ದರ ನಾಳೆಯಿಂದಲೇ ಜಾರಿಗೆ ಬರಲಿದೆ. ಎಲ್ಲಾ ಕೆಎಂಎಫ್ ಮಳಿಗೆಗಳಲ್ಲೂ ದರ ಏರಿಕೆ ಆಗಲಿದೆ. ಇದನ್ನೂ ಓದಿ: ಗ್ಯಾಸ್ ಸೋರಿಕೆಯಾಗಿ ಹೊತ್ತಿ ಉರಿದ ಅಂಗಡಿ – ಬೆಂಕಿ ನಂದಿಸಲು ಹರಸಾಹಸ
ಹಾಲಿನ ಉತ್ಪನ್ನಗಳ ದರ ಏರಿಕೆಯಿಂದ ಗ್ರಾಹಕರಿಗೆ ಹೊರೆಯಾಗಿದೆ. ತುಪ್ಪ, ಬೆಣ್ಣೆ ಖರೀದಿ ದುಬಾರಿಯಾಗಿದೆ. ಇದರಿಂದ ಗೃಹ ಬಳಕೆ ಹಾಗೂ ಹೋಟೆಲ್ ಉದ್ಯಮದ ಮೇಲೂ ಪರಿಣಾಮ ಬೀರಲಿದೆ. ಬೆಂಗಳೂರು ಸಹಕಾರ ಹಾಲು ಒಕ್ಕೂಟದಿಂದ ಏರಿಕೆ ಮಾಡಲಾಗಿದೆ.
ಸದ್ಯ ತುಪ್ಪ ಕೆ.ಜಿಗೆ 700 ರೂಪಾಯಿ ಇದೆ. ನಾಳೆಯಿಂದ ನಂದಿನಿ ತುಪ್ಪ ಕೆ.ಜಿಗೆ 715 ರೂಪಾಯಿ ಆಗಲಿದೆ. ಬೆಣ್ಣೆ ಅರ್ಧ ಕೆ.ಜಿಗೆ 610 ರೂಪಾಯಿ ಇದೆ. ನಾಳೆಯಿಂದ 660 ರೂಪಾಯಿಗೆ ಏರಿಕೆಯಾಗಲಿದೆ ಎಂದು ಕೆಎಂಎಫ್ ಮಾಹಿತಿ ನೀಡಿದೆ. ಇದನ್ನೂ ಓದಿ: ಬೆಂಗ್ಳೂರು ಇತಿಹಾಸದಲ್ಲೇ ಅತಿ ಎತ್ತರದ 200 ಕೋಟಿ ವೆಚ್ಚದ ಬೃಹತ್ ಕಟ್ಟಡ ತೆರವಿಗೆ ಜಿಬಿಎ ಸೂಚನೆ
