ಬೆಂಗಳೂರು: ವಾಲಿದ 200 ಕೋಟಿ ವೆಚ್ಚದ ಬೃಹತ್ ಕಟ್ಟಡ ತೆರವಿಗೆ ಜಿಬಿಎ ಸೂಚನೆ ನೀಡಿದೆ. 18 ಅಂತಸ್ಥಿನ ಬೃಹತ್ ಕಟ್ಟಡ ಇದಾಗಿದ್ದು, ಬೆಂಗ್ಳೂರು ಇತಿಹಾಸದಲ್ಲೇ ಅತಿ ಎತ್ತರದ ಕಟ್ಟಡ ತೆರವು ಕಾರ್ಯಾಚರಣೆಗೆ ಸಿದ್ಧತೆ ನಡೆದಿದೆ.
ಅವೈಜ್ಞಾನಿಕವಾಗಿ ನಿರ್ಮಾಣವಾಗಿರುವ 49 ಅಪಾರ್ಟ್ಮೆಂಟ್ ಹೊಂದಿರುವ 18 ಅಂತಸ್ತಿನ ಬೃಹತ್ ಕಟ್ಟಡ ಒಂದು ಕಡೆ ವಾಲಿದ್ದು, ಜನರಿಗೆ ಭೀತಿ ಹುಟ್ಟಿಸಿದೆ. ಕಟ್ಟಡಕ್ಕೆ ಸ್ಟ್ರಕ್ಚರಲ್ ಡ್ಯಾಮೇಜ್ ಆಗಿದ್ದು, ಭವಿಷ್ಯದಲ್ಲಿ ದುರಂತ ಉಂಟಾಗುವ ಭೀತಿ ಎದುರಾಗಿದೆ. ಇದರಿಂದಾಗಿ ಕಟ್ಟಡದ ವಾಲಿದ ಭಾಗವನ್ನು ತೆರವುಗೊಳಿಸಲು ಜಿಬಿಎ ಸೂಚಿಸಿದೆ.
SNN ರಾಜ್ ಕಾರ್ಪ್ ಒಡೆತನದಲ್ಲಿ ಈ ಕಟ್ಟಡ ನಿರ್ಮಾಣವಾಗಿದ್ದು, ಈ ಸಂಬಂಧ ಮಾಲೀಕರ ಜೊತೆ ಜಿಬಿಎ ಮುಖ್ಯ ಆಯುಕ್ತರು ಸಭೆ ನಡೆಸಿದ್ದಾರೆ. ಸಭೆಯಲ್ಲಿ ಕಟ್ಟಡದ ಡೆಮಾಲಿಷನ್‌ಗೆ ಸೂಚಿಸಿದ್ದಾರೆ. ವಾಲಿರುವ ಕಟ್ಟಡದ ಭಾಗವನ್ನು ಡೆಮಾಲಿಷನ್ ಮಾಡಲು ಮಾಲೀಕರು ಒಪ್ಪಿಕೊಂಡಿದ್ದಾರೆ.
ಕಟ್ಟಡ ಜಿಬಿಎ ಕಡೆಯಿಂದ ತೆರವಾಗಲ್ಲ. ಕಟ್ಟಡ ನಿರ್ಮಿಸಿದ ಬಿಲ್ಡರ್ ತೆರವು ಮಾಡಲಿದ್ದಾರೆ. ಕಟ್ಟಡ ತೆರವಿಗೂ ಮುನ್ನ ಸಾರ್ವಜನಿಕ ಸುರಕ್ಷತೆ ಸಂಬಂಧ ಜಿವಿಎ ಅನುಮತಿ ಪಡೆದಿದ್ದಾರೆ. ತೆರವು ವೆಚ್ಚವನ್ನು ಸಂಸ್ಥೆ ಭರಿಸಲು ಮುಂದಾಗಿದೆ.

