ನವದೆಹಲಿ: ನೀಟ್ (NEET 2026) ಅಕ್ರಮ ಖಂಡಿಸಿ ಮತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ ನಡೆಸುತ್ತಿರುವ ಪ್ರತಿಭಟನೆ ವೇಳೆ ಪ್ರತಿಭಟನಾಕಾರರ ಮೇಲಿನ ಪೊಲೀಸ್ ಕ್ರಮವನ್ನು ಸುಪ್ರೀಂ ಕೋರ್ಟ್ ವಕೀಲರು ಖಂಡಿಸಿದ್ದಾರೆ.
ಹಿರಿಯ ವಕೀಲ ಇಂದಿರಾ ಜೈಸಿಂಗ್ ಮತ್ತು ಎಸ್ ಮುರಳೀಧರ್ ನೇತೃತ್ವದಲ್ಲಿ ಸುಪ್ರೀಂ ಕೋರ್ಟ್ ಆವರಣದಲ್ಲಿ ಪ್ರಜಾಪ್ರಭುತ್ವ ಉಳಿಸಿ, ಸಂವಿಧಾನ ರಕ್ಷಿಸಿ ಅಭಿಯಾನ ನಡೆಯಿತು. ಈ ವೇಳೆ ವಕೀಲರು ಸಂವಿಧಾನದ ಪ್ರಸ್ತಾವನೆ ಓದಿ, ಬಳಿಕ ರಾಷ್ಟ್ರಗೀತೆ ಹಾಡಿದರು. ಈ ಮೂಲಕಸಿಜೆಪಿ ಪ್ರತಿಭಟನೆಗೆ ಬೆಂಬಲ ಘೋಷಿಸಿದರು. ಇದನ್ನೂ ಓದಿ: ಸರ್ಕಾರದ ಭರವಸೆ ನಡುವೆಯೂ ಜು.24ರಂದು ದೇಶವ್ಯಾಪಿ ಪ್ರತಿಭಟನೆಗೆ ಸಿಜೆಪಿ ಕರೆ
ಮಾಧ್ಯಮಗಳ ಜೊತೆ ಮಾತನಾಡಿದ ಇಂದಿರಾ ಜೈಸಿಂಗ್ ಅವರು, ನಾವು ವಿದ್ಯಾರ್ಥಿಗಳ ಪರವಾಗಿ ನಿಲ್ಲಲು ಇಲ್ಲಿಗೆ ಬಂದಿದ್ದೇವೆ. ನ್ಯಾಯದ ಪರವಾಗಿ ನಿಲ್ಲಲು ಬಂದಿದ್ದೇವೆ ಎಂದರು.

ಈ ವಿಚಾರ ವಿದ್ಯಾರ್ಥಿಗಳದ್ದು, ನಾವು ಸುಪ್ರೀಂ ಕೋರ್ಟ್ ಮುಂದೆ ನಿಂತು ಅವರಿಗೆ ನ್ಯಾಯ ಸಿಗಬೇಕು ಎಂದು ಧ್ವನಿ ಎತ್ತುವುದು ವಕೀಲರ ಕರ್ತವ್ಯವಾಗಿದೆ. ದೇಶದ ಸುಪ್ರೀಂ ಕೋರ್ಟ್ ಕರ್ತವ್ಯವೇ ನ್ಯಾಯ ಕಾಪಾಡುವುದು. ಅದಕ್ಕಾಗಿಯೇ ನಾವು ಈ ಬೇಡಿಕೆಗಳನ್ನಿಟ್ಟುಕೊಂಡು ನ್ಯಾಯಾಲಯಕ್ಕೆ ಬಂದಿದ್ದೇವೆ ಎಂದರು.
ಇದರ ನಡುವೆಯೇ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಸಿಜೆಪಿಯ (CJP) ಬೇಡಿಕೆಗಳ ಕುರಿತು ಕೇಂದ್ರ ಸರ್ಕಾರ ನೀಡಿದ ಭರವಸೆ ಹೊರತಾಗಿಯೂ `ಕಾಕ್ರೋಚ್ ಜನತಾ ಪಾರ್ಟಿ’ ಜು.24 ರಂದು ದೇಶವ್ಯಾಪಿ ಪ್ರತಿಭಟನೆಗೆ ಕರೆ ನೀಡಿದೆ. ನೀಟ್ ಪರೀಕ್ಷೆಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ಅವರ ರಾಜೀನಾಮೆಗೆ ಆಗ್ರಹಿಸಲಿದೆ ಎಂದು ಹೇಳಿಕೆ ಬಿಡುಗಡೆ ಮಾಡಿದೆ. ಇದನ್ನೂ ಓದಿ: ನಾವು ಪ್ರತಿಷ್ಠೆಗೆ ಬಿದ್ದಿಲ್ಲ, ಮಾತುಕತೆಗೆ ಬನ್ನಿ – ಸಿಜೆಪಿ ಜೊತೆ ಸಭೆಗೆ ಕೇಂದ್ರದಿಂದ 4ನೇ ಆಹ್ವಾನ
