ನವದೆಹಲಿ: ಸರ್ಕಾರದ ಭರವಸೆ ನಡುವೆಯೂ ಜು.24ರಂದು ದೇಶವ್ಯಾಪಿ ಪ್ರತಿಭಟನೆಗೆ ಕಾಕ್ರೋಚ್ ಜನತಾ ಪಾರ್ಟಿ (Cockroach Janta Party) ಪ್ರತಿಭಟನೆ ನೀಡಿದೆ.
ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಸಿಜೆಪಿಯ (CJP) ಬೇಡಿಕೆಗಳ ಕುರಿತು ಸರ್ಕಾರ ನೀಡಿದ ಭರವಸೆ ನಡುವೆ `ಕಾಕ್ರೋಚ್ ಜನತಾ ಪಾರ್ಟಿ’ ಶುಕ್ರವಾರ (ಜು.24) ದೇಶವ್ಯಾಪಿ ಪ್ರತಿಭಟನೆಗೆ ಕರೆ ನೀಡಿದ್ದು, ನೀಟ್ ಪರೀಕ್ಷೆಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ಅವರ ರಾಜೀನಾಮೆಗೆ ಆಗ್ರಹಿಸಲಿದೆ ಎಂದು ಹೇಳಿಕೆ ಬಿಡುಗಡೆ ಮಾಡಿದೆ. ಇದನ್ನೂ ಓದಿ: ಗ್ಯಾಸ್ ಸೋರಿಕೆಯಾಗಿ ಹೊತ್ತಿ ಉರಿದ ಅಂಗಡಿ – ಬೆಂಕಿ ನಂದಿಸಲು ಹರಸಾಹಸ
ಭಾರತದಾದ್ಯಂತ ಪೊಲೀಸರಿಂದ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತರೊಡನೆ ಒಗ್ಗಟ್ಟು ಪ್ರದರ್ಶಿಸಲು ಈ ದೇಶವ್ಯಾಪಿ ಪ್ರತಿಭಟನೆಗೆ ಕರೆ ನೀಡಲಾಗಿದೆ. ವಿದ್ಯಾರ್ಥಿ ಸಂಘಟನೆಗಳು ಮತ್ತು ಗುಂಪುಗಳು `ಅನುಮತಿಗಳು ಮತ್ತು ಲಾಜಿಸ್ಟಿಕ್ಸ್’ ವಿಷಯಗಳಲ್ಲಿ ಒಟ್ಟಾಗಿ ಕೆಲಸ ಮಾಡಬೇಕು. ಎಲ್ಲರ ಮುಂದೆ ಬೇಡಿಕೆಗಳನ್ನು ಗಟ್ಟಿಯಾಗಿ ಓದಿ. ಪೊಲೀಸರ ದೌರ್ಜನ್ಯ ಎದುರಿಸಿ ಒಗ್ಗಟ್ಟು ಪ್ರದರ್ಶಿಸಿ. ಇಂಕ್ವಿಲಾಬ್ ಜಿಂದಾಬಾದ್, ಭಾರತ ಮಾತಾ ಕೀ ಜೈ ಎಂದು ಸಿಜೆಪಿ ಹೇಳಿಕೆಯಲ್ಲಿ ತಿಳಿಸಿದೆ.
ಪ್ರತಿಭಟನಾಕಾರರು ಜೈ ಹಿಂದ್, ಭಾರತ ಮಾತಾ ಕೀ ಜೈ, ಇಂಕ್ವಿಲಾಬ್ ಜಿಂದಾಬಾದ್, ಜೈ ಭೀಮ್‌ನಂತಹ ಧನಾತ್ಮಕ ಘೋಷಣೆಗಳನ್ನು ಮಾತ್ರ ಕೂಗಬೇಕು ಮತ್ತು ಎಲ್ಲವನ್ನೂ ರೆಕಾರ್ಡ್ ಮಾಡಬೇಕು ಎಂದು ಮನವಿ ಮಾಡಿದೆ. ಜೊತೆಗೆ, ಏನೇ ಸಂಭವಿಸಿದರೂ ಪ್ರತಿಭಟನಾಕಾರರು ಶಾಂತಿಯುತವಾಗಿ ಮತ್ತು ಅಹಿಂಸಾತ್ಮಕವಾಗಿರಬೇಕು ಎಂದು ಸಲಹೆ ನೀಡಿದೆ.ಇದನ್ನೂ ಓದಿ: ಶಿವನಸಮುದ್ರ & ಶಿಂಷಾದಲ್ಲಿ ಜಲವಿದ್ಯುತ್ ಉತ್ಪಾದನೆ ಸಂಪೂರ್ಣ ಸ್ಥಗಿತ
ಪ್ರತಿಭಟನಾಕಾರರು ತಮಗೆ ಅನುಮತಿ ನೀಡಲಾದ ಜಾಗದಲ್ಲಿ ಮಾತ್ರ ಇರಬೇಕು ಮತ್ತು ನಿಗದಿಪಡಿಸಿದ ರಸ್ತೆಗಳಲ್ಲೇ ಸಾಗಬೇಕು. ಪ್ರಚೋದನೆ ನೀಡುವ, ನಿಂದಿಸುವ, ದ್ವೇಷ ಹರಡುವ ಅಥವಾ ಕೋಮು ಸೌಹಾರ್ದತೆಗೆ ಧಕ್ಕೆ ತರುವಂತಹ ಮಾತುಗಳನ್ನು ಆಡಬಾರದು. ಜೊತೆಗೆ ಪ್ರತಿಭಟನಾಕಾರರು 2 ರಿಂದ 3 ಜನರ ಸಣ್ಣ ಗುಂಪುಗಳಲ್ಲಿ ಇರಬೇಕು. ಕೋಲು ಅಥವಾ ಲಾಠಿಯಂತಹ ಯಾವುದೇ ರೀತಿಯ ಆಯುಧಗಳನ್ನು ಹಿಡಿದುಕೊಳ್ಳಲು ಯಾರಿಗೂ ಅನುಮತಿ ಇಲ್ಲ. ಪ್ರತಿಭಟನೆಯ ಸಂದರ್ಭದಲ್ಲಿ ಯಾರೂ ಸಂಚಾರಕ್ಕೆ ಅಡಚಣೆ ಉಂಟುಮಾಡಬಾರದು ಎಂದು ಸೂಚನೆ ನೀಡಿದೆ. ಅದರೊಂದಿಗೆ ಸುಳ್ಳು ಸುದ್ದಿ ಹರಡಂತೆ ಎಚ್ಚರಿಕೆ ನೀಡಿದೆ.
ತುರ್ತು ಪರಿಸ್ಥಿತಿಗಾಗಿ ನಿಮ್ಮ ವಕೀಲರ ಮತ್ತು ಒಬ್ಬ ಆಪ್ತರ ಫೋನ್ ಸಂಖ್ಯೆಯನ್ನು ಮಾರ್ಕರ್‌ನಿಂದ ನಿಮ್ಮ ಕೈಮೇಲೆ ಬರೆದುಕೊಳ್ಳಿ ಹಾಗೂ ಜೇಬಿನಲ್ಲಿರುವ ಕಾರ್ಡ್ನಲ್ಲೂ ಬರೆದಿಟ್ಟುಕೊಳ್ಳಿ. ಏಕೆಂದರೆ ಒತ್ತಡದ ಸಮಯದಲ್ಲಿ ಫೋನ್ ಹಾಳಾಗಬಹುದು, ಚಾರ್ಜ್ ಖಾಲಿಯಾಗಬಹುದು ಅಥವಾ ಸಂಖ್ಯೆ ನೆನಪಿಗೆ ಬಾರದಿರಬಹುದು. ಯಾರಾದರೂ ಕಿಡಿಗೇಡಿತನ ಮಾಡಿದರೆ ಸುಮ್ಮನಿರಬೇಡಿ. ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಮತ್ತು ಸುತ್ತಮುತ್ತಲಿನವರ ಸಹಾಯ ಕೇಳಿ. ಯಾರಾದರೂ ನಿಮ್ಮನ್ನು ಪ್ರಚೋದಿಸಿದರೆ ಗಲಾಟೆ ಮಾಡದೆ ಅಲ್ಲಿಂದ ದೂರ ಸರಿದು, ಮಾರ್ಷಲ್‌ಗಳಿಗೆ ವಿಷಯ ತಿಳಿಸಿ ಎಂದಿದೆ.ಇದನ್ನೂ ಓದಿ: ಗುಜರಾತ್ | ಭಾರೀ ಮಳೆಗೆ ಪಾರ್ಕಿಂಗ್ ಸ್ಥಳ ಜಲಾವೃತ; ನೀರಲ್ಲಿ ಮುಳುಗಿದ 50 ಕ್ಕೂ ಹೆಚ್ಚು ಕಾರುಗಳು
