ಕನ್ನಡದ ಹೆಸರಾಂತ ನಟಿ ತಾರಾ ಸೇರಿದಂತೆ ಕನ್ನಡದ ಸೆಲೆಬ್ರಿಟಿಗಳು ತಿರುಪತಿ ತಿಮ್ಮಪ್ಪನ (Tirupati) ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ. ನಟಿ ದೀಪಿಕಾ ದಾಸ್, ನಿರೂಪಕಿ ಅನುಶ್ರೀ ಮತ್ತು ಪತಿ ಕೂಡ ತಾರಾಗೆ ಸಾಥ್ ಕೊಟ್ಟಿದ್ದಾರೆ.
ನಟಿ ತಾರಾ ಆಗಾಗ್ಗೆ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗುತ್ತಾರೆ. ಅಲ್ಲದೇ, ಅನೇಕ ದೇವಸ್ಥಾನಗಳಿಗೂ ಭೇಟಿ ನೀಡುತ್ತಾರೆ. ಇದೇ ಮೊದಲ ಬಾರಿಗೆ ಕಲಾವಿದರ ಜೊತೆ ಒಟ್ಟಾಗಿ ದರ್ಶನ ಪಡೆದಿದ್ದಾರೆ. ಆ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಇದನ್ನೂ ಓದಿ: ಕುಂಭಮೇಳ ಚೆಲುವೆ ಮೋನಾಲಿಸಾಗೆ ಪೊಲೀಸ್ ರಕ್ಷಣೆ
ತಾರಾ ಮೇಳವನ್ನು ಕಂಡ ಅಲ್ಲಿನ ಅಭಿಮಾನಿಗಳು ಅಭಿಮಾನದಿಂದ ಫೋಟೋ ತಗೆಸಿಕೊಂಡಿದ್ದಾರೆ. ಆ ಫೋಟೋಗಳನ್ನು ಅವರು ಜಾಲತಾಣಗಳಲ್ಲೂ ಹಂಚಿಕೊಂಡು ಸಂಭ್ರಮಿಸಿದ್ದಾರೆ.
