ಕುಂಭಮೇಳದಲ್ಲಿ (Kumbamela) ರುದ್ರಾಕ್ಷಿ ಮಾರುತ್ತಿದ್ದ ಚೆಲುವೆ ಮೋನಾಲಿಸಾ (Monalisa) ಬಾಳು ಇದೀಗ ಸೂತ್ರ ಇಲ್ಲದ ಗಾಳಿಪಟದಂತೆ ಆಗಿದೆ. ಕುಂಭಮೇಳದಲ್ಲಿ ವೈರಲ್ ಆದ ನಂತರ ಮೋನಾಲಿಸಾಗೆ ಹಲವು ಸಿನಿಮಾಗಳಿಗೆ ಆಫರ್ ಬಂದಿತ್ತು. ಕೇವಲ ಸಿನಿಮಾ (Cinema) ಮಾಡಿಕೊಂಡಿದ್ದರೆ, ಆಕೆಯ ಬಾಳು ಹೊಸದಾಗಿ ಆರಂಭವಾಗಬಹುದಿತ್ತು. ಆದರೆ, ಆಗಿದ್ದು ಬೇರೆ.
ಸಿನಿಮಾ ಮಾಡುವಾಗ ಪರಿಚಯವಾದ ನಟ ಫರ್ಮಾನ್ ಖಾನ್ ಜೊತೆ ಸ್ನೇಹ ಬೆಳೆಸಿದರು. ಸ್ನೇಹ ಪ್ರೀತಿಯಾಗಿ ಬದಲಾಯಿತು. ಆನಂತರ ಕುಟುಂಬದ ವಿರೋಧ ಕಟ್ಟಿಕೊಂಡು ಮದುವೆ ಆದರು. ಆ ಮದುವೆಯೇ ಮೋನಾಲಿಸಾಳ ಬಾಳನ್ನು ಹಾದಿ ತಪ್ಪಿಸುತ್ತಿದೆ. ಇವರ ಮದುವೆ ಲವ್ ಜಿಹಾದ್ ಆಯಿತು. ಅವರ ಕುಟುಂಬ ವಿರೋಧ ವ್ಯಕ್ತ ಪಡಿಸಿತು. ಇವರದ್ದು ಬಾಲ್ಯವಿವಾಹ ಅಂತ ವಿವಾದವೂ ಆಯಿತು. ಇದೀಗ ಆಕೆಗೆ ಜೀವ ಬೆದರಿಕೆ ಇದೆಯಂತೆ. ಇದನ್ನೂ ಓದಿ: ಶೂಟಿಂಗ್ ವೇಳೆ ಅವಘಡ – ತೆಲುಗು ಸ್ಟಾರ್ ಬಾಲಯ್ಯಗೆ ಶಸ್ತ್ರಚಿಕಿತ್ಸೆ
ತನಗೆ ಜೀವ ಬೆದರಿಕೆ ಇದೆ. ಹಾಗಾಗಿ ರಕ್ಷಣೆ ಕೊಡಬೇಕು ಅಂತ ಮೋನಾಲಿಸಾ ಕೇರಳದ ಹೈಕೋರ್ಟ್ ಮೆಟ್ಟಿಲು ಏರಿದ್ದರು. ಈಗ ಹೈಕೋರ್ಟ್ (Kerala High Court) ಮೋನಾಲಿಸಾಗೆ ಪೊಲೀಸ್ ರಕ್ಷಣೆ ನೀಡಬೇಕು ಅಂತ ಆದೇಶ ನೀಡಿದೆ. ಇದನ್ನೂ ಓದಿ: ಕನ್ನಡದ ಮೇಲೆ ಆಣೆ ಮಾಡಿ ಪ್ರೇಮ್ ಬಾಯಿ ಮುಚ್ಚಿಸಿದ ಹಂಸಲೇಖ
