ಮೂರು ವಾರಗಳ ಕಾಲ ಬಿಗ್‌ಬಾಸ್ ಕನ್ನಡ ಸೀಸನ್ 13ರಲ್ಲಿ ಸ್ಪರ್ಧಿಯಾಗಿ ಆಟವಾಡಿದ್ದ ಕಿರುತೆರೆ ನಟಿ ವೈಷ್ಣವಿ ಇದೀಗ ಎಲಿಮನೇಟ್ ಆಗಿ ಹೊರಬಂದಿದ್ದಾರೆ. ಮನೆಯಿಂದ ಹೊರ ಬಂದ ಬಳಿಕ ಇದೀಗ ವೈಷ್ಣವಿ ಉಳಿದ ಫೀಮೇಲ್ ಕಂಟೆಸ್ಟಂಟ್‌ಗಳ ಕುರಿತು ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ. ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿರುವ ವೈಷ್ಣವಿ ಸಂಗೀತಾ, ಆಸಿಯಾ, ಕಾವ್ಯ, ಸೌಂದರ್ಯ ಅವರ ಆಟದ ರೀತಿಯನ್ನು ವಿವರಿಸಿದ್ದಾರೆ.
ಸಂಗೀತಾ ಕುರಿತು ವೈಷ್ಣವಿ ಅಭಿಪ್ರಾಯ
‘ಸಂಗೀತಾ, ಸ್ಮಾರ್ಟ್ ಆಗಿ ಆಟವಾಡುತ್ತಿದ್ದಾರೆ. ಸೈಲೆಂಟಾಗಿ ಸೇಫ್ ಗೇಮ್ ಆಡುತ್ತಿದ್ದಾರೆ’ ಅನ್ನೋದು ಮನೆಯಿಂದ ಹೊರಬಂದ ವೈಷ್ಣವಿ ಅಭಿಪ್ರಾಯ.

ಕಾವ್ಯ ಬಗ್ಗೆ ವೈಷ್ಣವಿ ಮಾತು
‘ಕಾವ್ಯ…ಸಂಗೀತಾನ ಸೆರಗು ಹಿಡ್ಕೊಂಡು ಓಡಾಡ್ತಿದ್ದಾರೆ’ ಎಂದು ಕಾವ್ಯ ಆಟದ ವೈಖರಿಯನ್ನು ವೈಷ್ಣವಿ ವರ್ಣಿಸಿದ್ದಾರೆ.
ಆಸಿಯಾ ಆಟದ ಕುರಿತು ಸಹಸ್ಪರ್ಧಿಯಾಗಿದ್ದ ವೈಷ್ಣವಿ ಅನಿಸಿಕೆ
‘ಆಸಿಯಾ ವಿಕ್ಟಿಂ ಕಾರ್ಡ್ ಪ್ಲೇ ಮಾಡದಿದ್ದರೆ.. ಶೀ ಈಸ್ ಪ್ಲೇಯಿಂಗ್ ವೆರಿ ಗುಡ್’… ಏನಾದ್ರು ಆಯ್ತು ತಾನ್ ಆಡ್ಬೇಕು… ಆಡಲ್ಲ ಅಂತ ಗೊತ್ತಾದ ತಕ್ಷಣ ಧೋ… ಅಂತ ಅತ್ತುಬಿಡೋದು… ಏನೋ ಆಯ್ತು ಅಂದ್ರೆ ಧೋ ಅಂತ ಅತ್ತುಬಿಡೋದು.. ಹೌದು ಒಂದ್ಸಲ ಎರಡು ಸಲ ಅಳು ಬರುತ್ತೆ, ನಾನೂ ಅತ್ತಿದ್ದೀನಿ ಎಲ್ಲರೂ ಅತ್ತಿದ್ದಾರೆ ಮನೆಯಲ್ಲಿ ಇಲ್ಲ ಅಂತಲ್ಲ. ಬಟ್ ಸಿಚುಯೇಷನ್ ಬಂದಾಗ ತನಗೆ ವರ್ಕೌಟ್ ಆಗ್ಲಿಲ್ಲ ಅಂದಾಗ ಪ್ರತಿ ಸಲ ಯಾರೂ ಅಳೋದಿಲ್ಲ. ಅವರು ನನಗಿಂದ ವೆರಿ ಮೋರ್ ದೊಡ್ಡವರು.. ಆ ಮೆಚ್ಯುರಿಟಿ ಇದ್ದೇ ಇರುತ್ತೆ. ನನಗಿಂತ ದೊಡ್ಡವರು ಅಂದಾಗ ಜೀವನ ಏನು ನೋಡಿರ್ತಾರಾ? ಅವರೇನು ಫೆಲ್ಯುರ್ಸ್ ನೋಡ್ದೇನೇ ಜೀವನದಲ್ಲಿ ಇರ್ತಾರಾ..? ಹಲವು ಬಾರಿ ನಾನೂ ಕೂಡ ಸ್ಟ್ರಾಂಗ್ ಆಗಿ ನಿಂತಿದ್ದೀನಿ, ನಾನೂ ಕೂಡ ಆಡ್ಬೇಕು ಅಂತ ನಿಂತಿದ್ದೀನಿ. ಆದರೆ ವಿಕ್ಟಿಮ್ ಕಾರ್ಡ್ ಪ್ಲೇ ಮಾಡಿಲ್ಲವಲ್ಲ. ಎಷ್ಟ್ ದಿನ ಅಂತ ವಿಕ್ಟಿಮ್ ಕಾರ್ಡ್ ಪ್ಲೇ ಮಾಡುತ್ತೀರಾ’ ಎಂದು ಆಸಿಯಾ ಆಟದ ಕುರಿತು ವೈಷ್ಣವಿ ಅಭಿಪ್ರಾಯಪಟ್ಟಿದ್ದಾರೆ.

ಸೌಂದರ್ಯ ಶೆಟ್ಟಿ ಬಗ್ಗೆ ವೈಷ್ಣವಿ ಅಭಿಪ್ರಾಯ
‘ಸೌಂದರ್ಯ ಚಾಲಾಕ್’… ಹೀಗೆ ಸೌಂದರ್ಯ ಬಿಬಿಕೆ ಆಟದ ಕುರಿತು ವೈಷ್ಣವಿ ಹೇಳಿದ್ದಾರೆ.


