CricketLatestMain PostSports

ಪಂತ್ ಸಿಕ್ಸರ್‌ಗೆ ಕೊಹ್ಲಿ ಡ್ಯಾನ್ಸ್ – ವೀಡಿಯೋ ವೈರಲ್

Advertisements

ಜೋಹನ್ಸ್‌ಬರ್ಗ್‌: ದಕ್ಷಿಣ ಆಫ್ರಿಕಾ ವಿರುದ್ಧ ನಿನ್ನೆ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ರಿಷಭ್ ಪಂತ್ ಬಿಗ್ ಸಿಕ್ಸ್ ಸಿಡಿಸುತ್ತಿದ್ದಂತೆ, ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಡ್ಯಾನ್ ಮಾಡಿದ ವೀಡಿಯೋ ವೈರಲ್ ಆಗುತ್ತಿದೆ.

ನಿನ್ನೆ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಐದು ಬಾಲ್‍ಗಳನ್ನು ಎದುರಿಸಿ ಡಕ್ ಔಟ್ ಆಗಿ ನಿರಾಸೆ ಮೂಡಿಸಿದ್ದರು. ಬಳಿಕ ವಿಕೆಟ್ ಕೀಪರ್ ಬ್ಯಾಟ್ಸ್‌ಮ್ಯಾನ್ ರಿಷಭ್ ಪಂತ್ ಭರ್ಜರಿ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಸರೆಯಾಗಿದ್ದರು. ಪಂತ್ 85 ರನ್ (71 ಎಸೆತ, 10 ಬೌಂಡರಿ, 2 ಸಿಕ್ಸ್) ಬಾರಿಸಿ ಬ್ಯಾಟಿಂಗ್‍ನಲ್ಲಿ ಮಿಂಚಿದ್ದರು, ಅದರಲ್ಲೂ ಪಂತ್ ಸಿಡಿಸಿದ ಬಿಗ್ ಸಿಕ್ಸ್‌ನ್ನು ಕಂಡು ಡ್ರೆಸ್ಸಿಂಗ್ ರೂಮ್‍ನಲ್ಲಿ ಶಿಖರ್ ಧವನ್ ಜೊತೆ ಕೂತಿದ್ದ ಕೊಹ್ಲಿ ಕೂತಲ್ಲೆ ಕೈಗಳನ್ನು ಮೇಲೆತ್ತಿ ಸ್ಟೆಪ್ ಹಾಕಿ ಎಂಜಾಯ್ ಮಾಡಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ ತೊಡಗಿದೆ. ಇದನ್ನೂ ಓದಿ: ಕೊಹ್ಲಿಗೆ ಶೋಕಾಸ್ ನೋಟಿಸ್ ನೀಡಿಲ್ಲ: ಗಂಗೂಲಿ

ಮೊದಲ ಏಕದಿನ ಪಂದ್ಯ ಸೋತಿದ್ದ ಟೀಂ ಇಂಡಿಯಾ ಎರಡನೇ ಪಂದ್ಯದಲ್ಲೂ ಸೋಲು ಕಂಡಿದೆ. ಎರಡನೇ ಏಕದಿನ ಪಂದ್ಯದಲ್ಲಿ 7 ವಿಕೆಟ್‍ಗಳ ಜಯ ಸಾಧಿಸಿದ ದಕ್ಷಿಣ ಆಫ್ರಿಕಾ 3 ಪಂದ್ಯಗಳ ಸರಣಿಯನ್ನು 2-0 ಅಂತರದಲ್ಲಿ ಗೆದ್ದಕೊಂಡಿದೆ. ಇನ್ನೊಂದು ಪಂದ್ಯ ಬಾಕಿ ಉಳಿದಿದ್ದು, ನಾಳೆ ಕೇಪ್‍ಟೌನ್‍ನಲ್ಲಿ ಮೂರನೇ ಏಕದಿನ ಪಂದ್ಯ ನಡೆಯಲಿದೆ. ಇದನ್ನೂ ಓದಿ: ಐಪಿಎಲ್‌ನಲ್ಲೇ ದುಬಾರಿ ಆಟಗಾರನಾಗಿ ಹೊರಹೊಮ್ಮಿದ ರಾಹುಲ್‌ಗೆ ಕ್ಯಾಪ್ಟನ್‌ ಪಟ್ಟ ಕಟ್ಟಿದ ಲಕ್ನೋ

Leave a Reply

Your email address will not be published.

Back to top button