– ಕಾವೇರಿ ನೀರು ಬಿಡಲು CWMA ಆದೇಶ, ಸುಪ್ರೀಂನಲ್ಲಿ ಮನವಿ
ಬೆಂಗಳೂರು: 27 ಕೋಟಿ ರೂ. ವೆಚ್ಚದಲ್ಲಿ ಮೋಡ ಬಿತ್ತನೆಗೆ (Cloud Seeding) ನಿರ್ಧಾರ ಮಾಡಿದ್ದು, 3-4 ದಿನಗಳಲ್ಲಿ ಮೋಡ ಬಿತ್ತನೆ ಕಾರ್ಯ ಪ್ರಾರಂಭ ಆಗಲಿದೆ ಎಂದು ನೀರಾವರಿ ಸಚಿವ ಚಲುವರಾಯಸ್ವಾಮಿ (N Chaluvaraya Swamy) ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೋಡ ಬಿತ್ತನೆ ಬಗ್ಗೆ ಈಗಾಗಲೇ ಚರ್ಚೆ ಆಗಿದೆ. ಕ್ಯಾಬಿನೆಟ್‌ನಲ್ಲಿ ಚರ್ಚೆ ಆಗಿದೆ. ನೀರಾವರಿ ಇಲಾಖೆ ಮೂಲಕ ಮೋಡ ಬಿತ್ತನೆ ಮಾಡುತ್ತೇವೆ. ಏಜೆನ್ಸಿ ಅವರ ಜೊತೆ ಮಾತಾಡಿದ್ದೇವೆ. ಡೆವಲಪ್ಮೆಂಟ್ ಕಮೀಷನರ್ ನೇತೃತ್ವದಲ್ಲಿ ಮಾನಿಟರ್ ಕಮಿಟಿ ಮತ್ತು ಟೆಕ್ನಿಕಲ್ ಕಮಿಟಿ ಆಗಬೇಕು. ಸಿಎಸ್ ಅವರ ಜೊತೆ ಮಾತಾಡಿದ್ದೇನೆ. ಇವತ್ತೇ ಕಮಿಟಿ ರಚನೆ ಆಗುತ್ತದೆ. ಕಮಿಟಿಯಿಂದ ರಿಪೋರ್ಟ್ ಪಡೆದು ಮುಂದಿನ ಪ್ರಕ್ರಿಯೆ ಮಾಡುತ್ತೇವೆ ಎಂದರು. ಇದನ್ನೂ ಓದಿ: ಬಿಡದಿ ಟೌನ್‌ಶಿಪ್| ಕೋರ್ಟ್ ಅನುಮತಿ ಇಲ್ಲದೆ ಒಂದು ಇಟ್ಟಿಗೆಯೂ ಅಲುಗಾಡುವಂತಿಲ್ಲ, ಮರ ಕಡಿಯುವಂತಿಲ್ಲ: ಹೈಕೋರ್ಟ್
ಮೋಡ ಬಿತ್ತನೆಗೆ ಪ್ರಕ್ರಿಯೆಗಳು ಆಗಬೇಕು. ಯಾವ ರೀತಿ ಪ್ರೊಸೀಜರ್ ಇರಬೇಕು ಅಂತ ಸಭೆ ಮಾಡಿದ್ದೇವೆ. ಕಳೆದ ವರ್ಷ 20% ಸಕ್ಸಸ್ ರೇಟ್ ಇತ್ತು. ಕ್ಲೌಡ್ ಅಸೆಸ್‌ಮೆಂಟ್ ಪ್ರಕಾರ ಸೆಪ್ಟೆಂಬರ್, ಅಕ್ಟೋಬರ್‌ವರೆಗೂ ಕ್ಲೌಡ್ ಇದೆ. ಪರಿಸರದ ಮೇಲೆ ಪರಿಣಾಮ ಬೀರಲ್ಲ ಎಂದು ನುಡಿದರು. ಇದನ್ನೂ ಓದಿ: ಎರಡು ವಾರಗಳಲ್ಲಿ ಶರಣಾಗುವಂತೆ ತರುಣ್ ತೇಜ್‌ಪಾಲ್‌ಗೆ ಸುಪ್ರೀಂ ಸೂಚನೆ
ಮೋಡ ಬಿತ್ತನೆ ಯಶಸ್ವಿಯಾಗೋ ಬಗ್ಗೆ ಯೋಚನೆ ಇದೆ. 30% ಆದ್ರು ಆಗಲಿ ಅನ್ನೋದು ನಮ್ಮ ಇಚ್ಛೆ. ಹಿಂದೆ 3 ಬಾರಿ ಮೋಡ ಬಿತ್ತನೆ ಆಗಿದೆ. ಮಳೆ ಕಡಿಮೆ ಆಗಿದೆ. ಇದರಿಂದ ಜನರಿಗೆ ಅನುಕೂಲ ಆಗಬಹುದು ಅಂತ ಮೋಡ ಬಿತ್ತನೆ ಮಾಡುತ್ತಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಕುಮಾರಸ್ವಾಮಿ ಈವರೆಗೂ ಹೇಳಿದ ಯಾವುದೇ ದಾಖಲಾತಿ ಬಿಡುಗಡೆ ಮಾಡಿಲ್ಲ: ಚಲುವರಾಯಸ್ವಾಮಿ
4 ಕಂದಾಯ ವಿಭಾಗದಲ್ಲಿ ಮೋಡ ಬಿತ್ತನೆ ಮಾಡುತ್ತಿದ್ದೇವೆ. ಎಲ್ಲಿ ಕ್ಲೌಡ್ ಇರುತ್ತೋ ಅಲ್ಲಿ ಮೋಡ ಬಿತ್ತನೆ ಮಾಡುತ್ತೇವೆ. 27 ಕೋಟಿ ವೆಚ್ಚದಲ್ಲಿ ಮೋಡ ಬಿತ್ತನೆ ಆಗಲಿದೆ. 60 ದಿನ ಗಂಟೆಗಳ ಆಧಾರದಲ್ಲಿ ಇದನ್ನ ಮಾಡುತ್ತೇವೆ. ಸಕ್ಸಸ್ ರೇಟ್ ಕಡಿಮೆ ಇದೆ. ಆದರೂ ರೈತರ ಒತ್ತಡ ಇದೆ. ಅದಕ್ಕೆ ಮಾಡುತ್ತೇವೆ. ಬರ ಇದೆ. ಹೀಗಾಗಿ ಮೋಡ ಬಿತ್ತನೆ ಮಾಡಿದ್ರೆ ಅನುಕೂಲ ಆಗಬಹುದು ಅಂತ ಮಾಡುತ್ತಿದ್ದೇವೆ ಎಂದರು. ಇದನ್ನೂ ಓದಿ: ಧರ್ಮಸ್ಥಳ ಶ್ರೀ ಮಂಜುನಾಥನ ದರ್ಶನ ಪಡೆದ ಯಶ್ – ‘ಟಾಕ್ಸಿಕ್’ ಯಶಸ್ಸಿಗಾಗಿ ವಿಶೇಷ ಪೂಜೆ
ತಮಿಳುನಾಡಿಗೆ 9 ಸಾವಿರ ಕ್ಯೂಸೆಕ್ ನೀರು ಬಿಡಲು CWMAಯೂ ಆದೇಶ ಮಾಡಿದ್ದು, ಆದೇಶ ಪಾಲನೆ ಮಾಡಿ ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸುತ್ತೇವೆ. CWRC 9 ಸಾವಿರ ಕ್ಯೂಸೆಕ್ ನೀರು ಬಿಡಲು ಆದೇಶ ಮಾಡಿದೆ. CWMA ಕೂಡಾ ಇದನ್ನ ಪಾಲನೆ ಮಾಡಿ ಎಂದಿದೆ. ತಮಿಳುನಾಡು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸುಪ್ರೀಂ ಕೋರ್ಟ್‌ನಲದಲಿ ಮುಂದಿನ ವಾರ ಕೇಸ್ ಇದೆ. CWRC ಮುಂದೆ ನಾವು 9 ಸಾವಿರ ಬಿಡಲ್ಲ ಅಂತ ವಾದ ಮಾಡಿದ್ದೇವೆ. ಆದರೂ ಆದೇಶ ಮಾಡಿದೆ. ರೈತರಿಗೆ ಸಮಸ್ಯೆ ಆಗದಂತೆ ಕ್ರಮ ಮಾಡುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಜವಾಬ್ದಾರಿ ಹಸ್ತಾಂತರಿಸುವ ಸಮಯ ಬಂದಿದೆ: ಹೇಳಿಕೆ ಚರ್ಚೆಗೆ ಗ್ರಾಸವಾದ ಬೆನ್ನಲ್ಲೇ ಗಡ್ಕರಿ ಕಚೇರಿಯಿಂದ ಸ್ಪಷ್ಟನೆ
14 ಕ್ಯೂಸೆಕ್ ಒಳ ಹರಿವು ಇದೆ. ನೀರು ಬಂದಾಗ ಏನು ಮಾಡೋಕೆ ಆಗಲ್ಲ. ಯಾರು ಹಿಡಿದುಕೊಳ್ಳಲು ಆಗಲ್ಲ. CWMA ಆದೇಶ ಪಾಲನೆ ಮಾಡುತ್ತೇವೆ. ನಿನ್ನೆ ಮಳೆ ಉತ್ತಮವಾಗಿದೆ. ಹಾರಂಗಿ ತುಂಬಿದೆ. ಕೆಆರ್‌ಎಸ್‌ಗೆ 15-20 ಕ್ಯೂಸೆಕ್ ನೀರು ಬರಬಹುದು. 9 ಸಾವಿರ ಕ್ಯೂಸೆಕ್ ನೀರು ಈಗ ಹೋಗುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: TMC 20 ರೆಬೆಲ್ ಸಂಸದರಿಗೆ ನೋಟಿಸ್, ಸ್ಪೀಕರ್‌ಗೆ ಯಾಕೆ ಕೊಟ್ಟಿಲ್ಲ? – ಸುಪ್ರೀಂ ಪ್ರಶ್ನೆ
ಸುಪ್ರೀಂಕೋರ್ಟ್‌ನಲ್ಲಿ ಕಡಿಮೆ ಮಾಡಿ ಅಂತ ಕೇಳುತ್ತೇವೆ. ನಮ್ಮ ಬೇಡಿಕೆ ನಾವು ಇಡುತ್ತೇವೆ. CWMA ಆದೇಶ ಪಾಲನೆ ಮಾಡಿ ಸುಪ್ರೀಂಕೋರ್ಟ್‌ನಲ್ಲಿ ನಾವು ಮನವಿ ಮಾಡುತ್ತೇವೆ. ರೈತರಿಗೆ ನಾವು ಸಮಸ್ಯೆ ಆಗದಂತೆ ಕ್ರಮ ತೆಗೆದುಕೊಳ್ಳುತ್ತೇವೆ. ಇದಕ್ಕೆಲ್ಲಾ ಮಳೆ ಪರಿಹಾರ. ಸಿಎಂ ನಾವು ದಿನಾ ದೇವರಲ್ಲಿ ಮಳೆ ಬರಲಿ ಅಂತ ಪ್ರಾರ್ಥನೆ ಮಾಡುತ್ತಿದ್ದೇವೆ ಎಂದರು. ಇದನ್ನೂ ಓದಿ: ತಮಿಳುನಾಡಿಗೆ ನಿತ್ಯ 9 ಸಾವಿರ ಕ್ಯೂಸೆಕ್ ನೀರು ಹರಿಸಿ – CWRC ಶಿಫಾರಸು ಎತ್ತಿಹಿಡಿದ CWMA
