ಬೆಂಗಳೂರು: ಇನ್ನೇನು ಪಿಂಕ್ ಲೈನ್ ಮೆಟ್ರೋ (Pink Line Metro) ಆರಂಭವಾಗುತ್ತದೆ ಎನ್ನುವಷ್ಟರಲ್ಲಿ ಹೊಸದೊಂದು ವಿವಾದ ಶುರುವಾಗಿದೆ. ತಾವರೆಕೆರೆ ಮೆಟ್ರೋ ನಿಲ್ದಾಣಕ್ಕೆ (Tavarekere Metro Station) `ಬಿಸ್ಮಿಲ್ಲಾ’ ನಿಲ್ದಾಣ ಹೆಸರಿಡುವಂತೆ ಸೋಷಿಯಲ್ ಮೀಡಿಯಾದಲ್ಲಿ ಮನವಿಗೆ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
ಸಿಲಿಕಾನ್ ಸಿಟಿ ಬೆಂಗಳೂರಿನ (Bengaluru) ಬಹುನಿರೀಕ್ಷಿತ ನಮ್ಮ ಮೆಟ್ರೋ ಗುಲಾಬಿ ಮಾರ್ಗ ಶೀಘ್ರದಲ್ಲೇ ಲೋಕಾರ್ಪಣೆಗೊಳ್ಳಲು ಸಜ್ಜಾಗುತ್ತಿದೆ. ಈ ತಿಂಗಳ ಕೊನೆ ಅಥವಾ ಅಕ್ಟೋಬರ್ ವೇಳೆಗೆ ಉದ್ಘಾಟನೆಗೊಳ್ಳಲಿದೆ. ಆದರೆ ಈ ಲೋಕಾರ್ಪಣೆಗೂ ಮುನ್ನವೇ ಗುಲಾಬಿ ಮಾರ್ಗದ ತಾವರೆಕೆರೆ ಮೆಟ್ರೋ ನಿಲ್ದಾಣಕ್ಕೆ ಬಿಸ್ಮಿಲ್ಲಾ ಮೆಟ್ರೋ ನಿಲ್ದಾಣ ಅಂತ ಹೆಸರಿಡಿ ಎಂಬ ಕೂಗು ಜೋರಾಗಿದೆ. ಇದನ್ನೂ ಓದಿ: 15 ದಿನ ಅಷ್ಟೇ ಬಾಕಿ – ಇ-ಕೆವೈಸಿ ಕೊಡದಿದ್ರೆ ರೇಷನ್ ಕಾರ್ಡ್ ರದ್ದಾಗೋದು ಗ್ಯಾರಂಟಿ
ಕಾಳೇನ ಅಗ್ರಹಾರದಿಂದ ಸಂಪರ್ಕ ಕಲ್ಪಿಸುವ ತಾವರೆಕೆರೆ ಮೆಟ್ರೋ ನಿಲ್ದಾಣಕ್ಕೆ ಬಿಸ್ಮಿಲ್ಲಾ ನಗರ ಮೆಟ್ರೋ ನಿಲ್ದಾಣ ಅಥವಾ `ಬಿಸ್ಮಿಲ್ಲಾ ನಗರ-ತಾವರೆಕೆರೆ’ ಎಂದು ಮರುನಾಮಕರಣ ಮಾಡಬೇಕೆಂಬ ಕೂಗು ಕೇಳಿ ಬಂದಿದೆ. ಬಿಸ್ಮಿಲ್ಲಾ ನಗರದ ಸ್ಥಳೀಯ ಮುಸ್ಲಿಂ ನಿವಾಸಿಗಳು ಹಾಗೂ ಪ್ರಮುಖ ಮುಖಂಡರು ಬಿಎಂಆರ್‌ಸಿಎಲ್ ಎಂಡಿ ಪಿ.ಸಿ. ಜಾಫರ್ ಅವರನ್ನು ಖುದ್ದು ಭೇಟಿಯಾಗಿ ಔಪಚಾರಿಕ ಮನವಿ ಪತ್ರ ಸಲ್ಲಿಸಿದ್ದಾರೆ.
ತಾವರೆಕೆರೆ ಎನ್ನುವ ಏರಿಯಾ ಮೆಟ್ರೋ ನಿಲ್ದಾಣದಿಂದ 2.5 ಕಿಲೋಮೀಟರ್ ದೂರದಲ್ಲಿದೆ. ಬಿಸ್ಮಿಲ್ಲಾ ನಗರ ಕೇವಲ 250 ಮೀಟರ್‌ನಲ್ಲಿದೆ. ಇಲ್ಲಿ ಮುಸ್ಲಿಂ ಸಮುದಾಯದ ಜನಸಂಖ್ಯೆ ಹೆಚ್ಚಾಗಿದೆ. ಪ್ರತಿದಿನ ಸಾವಿರಾರು ಸ್ಥಳೀಯ ನಿವಾಸಿಗಳು ಈ ನಿಲ್ದಾಣವನ್ನೇ ಅವಲಂಬಿಸಲಿದ್ದಾರೆ. ಆದ್ದರಿಂದ ಸ್ಥಳೀಯರ ಗುರುತಿಗಾಗಿ ಮತ್ತು ಸುಲಭ ಗುರುತಿಸುವಿಕೆಗಾಗಿ ಈ ನಿಲ್ದಾಣಕ್ಕೆ `ಬಿಸ್ಮಿಲ್ಲಾ ನಗರ’ ಎಂದು ಮರುನಾಮಕರಣ ಮಾಡಬೇಕು ಅಥವಾ `ಬಿಸ್ಮಿಲ್ಲಾ ನಗರ-ತಾವರೆಕೆರೆ’ ಎಂದು ಜಂಟಿ ಹೆಸರನ್ನಿಡಬೇಕು ಅಂತ ಬೇಡಿಕೆ ಇಟ್ಟಿದ್ದಾರೆ. ಸದ್ಯ ಇದು ಹಿಂದೂ ಸಂಘಟನೆಗಳ ವಿರೋಧಕ್ಕೆ ಕಾರಣವಾಗಿದೆ.ಇದನ್ನೂ ಓದಿ:ದಲಿತರಿಗೆ ಮೀಸಲಿಟ್ಟ ಹಣ ಗ್ಯಾರಂಟಿ ಯೋಜನೆಗೆ ಬಳಕೆ ಮಾಡಿಕೊಳ್ಳಲಾಗಿದೆ: ಸಿಎಂ ಬಹಿರಂಗ ಹೇಳಿಕೆ
ಯಾವುದೇ ಕಾರಣಕ್ಕೂ ಆ ಯೋಚನೆ ಸರ್ಕಾರ ಮಾಡಬಾರದು. ಇದು ಕಾಂಗ್ರೆಸ್ (Congress) ಮುಸ್ಲಿಂ ತುಷ್ಟೀಕರಣದಿಂದ ಆಗ್ತಿದೆ. ಇದನ್ನ ಸಹಿಸಲು ಆಗಲ್ಲ. ಬಿಸ್ಮಿಲ್ಲ ಯಾರು? ಸ್ವಾತಂತ್ರ್ಯ ಹೋರಾಟಗಾರನಾ? ಕರ್ನಾಟಕಕ್ಕೆ ಅವರ ಕೊಡುಗೆ ಏನು? ಒಂದು ವೇಳೆ ಹೆಸರು ಬದಲಾವಣೆ ಮಾಡಬೇಕು ಅಂದರೆ ಅಂಬೇಡ್ಕರ್, ಕೆಂಪೇಗೌಡರ ಹೆಸರಿಡಿ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Mutalik) ಹಾಗೂ ಹಿಂದೂ ಜನಜಾಗೃತಿಯ ಮೋಹನ್ ಗೌಡ ಆಗ್ರಹಿಸಿದ್ದಾರೆ. ಅಲ್ಲದೇ ಯಾರ ಒತ್ತಡಕ್ಕೂ ಬಿಎಂಆರ್‌ಸಿಎಲ್ ಮಣಿಯಬಾರದು ಎಂದಿದ್ದಾರೆ.
ಇನ್ನು ಈ ಬಗ್ಗೆ ಬಿಎಂಆರ್‌ಸಿಎಲ್ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ ಮುಂದಿನ ದಿನಗಳಲ್ಲಿ ಯಾರಾದರೂ ಮನವಿ ಕೊಟ್ಟರೇ ಯಾವ ಹೆಸರು, ಯಾವ ಉದ್ದೇಶ, ಸಾಧ್ಯತೆಗಳ ಬಗ್ಗೆ ಬಿಎಂಆರ್ಸಿರಲ್ (BMRCL) ಮಾಹಿತಿ ಕಲೆಹಾಕಲಿದೆ. ಇದರ ಜೊತೆಗೆ ಎಂಡಿ ನೇತೃತ್ವದ ಕಮಿಟಿ ಹೆಸರನ್ನ ಫೈನಲ್ ಮಾಡೋದು. ಆ ಕಮಿಟಿಯಲ್ಲಿ ರಾಜ್ಯದ ಇಬ್ಬರು, ಕೇಂದ್ರ ಒಬ್ಬರು ಇರ್ತಾರೆ. ಸದ್ಯಕ್ಕೆ ಯಾರೋ ಟ್ಯಾಗ್ ಮಾಡಿದ್ದು, ಬಿಟ್ರೇ ಬೇರೆ ಮಾಹಿತಿ ಇಲ್ಲ ಅನ್ನೋದು ಬಿಎಂಆರ್ಸಿಎಲ್ ಮೂಲಗಳ ಮಾಹಿತಿ.
ಈ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ (Congress Govt) ಮುಸ್ಲಿಂ ತುಷ್ಟೀಕರಣ ಮಾಡಲು ಮುಂದಾದ್ರೇ ಅನ್ನೋ ಎಚ್ಚರಿಕೆ ಹಿಂದೂ ಸಂಘಟನೆಗಳದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ (Social Media) ಮಾತ್ರ ಒತ್ತಾಯ ಮಾಡಲಾಗಿದೆ. ಈ ವಿಚಾರ ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆಯುತ್ತೆ ಕಾದು ನೋಡಬೇಕು.ಇದನ್ನೂ ಓದಿ: ರಾಮಮಂದಿರ ಸಿಬ್ಬಂದಿಗೆ ಹೊಸ ನಿಯಮ – ಆಂತರಿಕ ಮಾಹಿತಿ ಸೋರಿಕೆಗೆ ಕಡಿವಾಣ, ಉಲ್ಲಂಘಿಸಿದ್ರೆ ಶಿಸ್ತು ಕ್ರಮ

