ಅಂಬಾನಿ ಕುಟುಂಬ ಆಯೋಜಿಸಿದ್ದ ಗಣಪತಿ ಆಚರಣೆಯಲ್ಲಿ ವಿವಿಧ ಬಾಲಿವುಡ್ ತಾರೆಗಳು ಜೋಡಿಯಾಗಿ ಪೂಜೆಗೆ ಭಾಗಿಯಾಗಿದ್ದರು.
ನಟ ವಿಕ್ಕಿ ಕೌಶಲ್- ಕತ್ರಿನಾ ಕೈಫ್, ಸಿದ್ಧಾರ್ಥ್ ಮಲ್ಹೋತ್ರಾ-ಕಿಯಾರಾ ಅಡ್ವಾಣಿ ಮುಂತಾದ ಸೆಲೆಬ್ರಿಟಿ ಕಪಲ್‌ಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಇತ್ತೀಚೆಗೆ ಟಾಕ್ಸಿಕ್ ಸಿನಿಮಾ ಮೂಲಕ ಸುದ್ದಿಯಲ್ಲಿರುವ ಕಿಯಾರಾ ಅಡ್ವಾಣಿ, ಪತಿ ಸಿದ್ಧಾರ್ಥ್ ಮಲ್ಹೋತ್ರಾ ಅಂಬಾನಿ ಗಣೇಶ ಆಚರಣೆಯಲ್ಲಿ ಭಾಗಿಯಾಗಿದ್ದರು. 2023 ರಲ್ಲಿ ವಿವಾಹವಾದ ಈ ದಂಪತಿಗಳು ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಂಡಾಗಲೆಲ್ಲಾ ಸುದ್ದಿಯಲ್ಲಿರುತ್ತಾರೆ.

ಬಾಲಿವುಡ್ ಕ್ಯೂಟ್ ಜೋಡಿಯಾದ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಕೂಡ ಗಮನ ಸೆಳೆದಿದ್ದು, ಟ್ರೆಡಿಷನಲ್ ಉಡುಗೆಯಲ್ಲಿ ಕಾಣಿಸಿಕೊಂಡಿದ್ದು, ಆಲಿಯಾ ಅವರ ಹ್ಯಾಂಡ್‌ಬ್ಯಾಗ್ ಎಲ್ಲರ ಗಮನ ಸೆಳೆಯಿತು.

ಕತ್ರಿನಾ ಕೈಫ್ ಕೂಡ ಪತಿ ವಿಕ್ಕಿ ಕೌಶಲ್ ಜೊತೆಗೆ ಅಂಬಾನಿ ಗಣಪತಿ ಆಚರಣೆಯಲ್ಲಿ ಭಾಗವಹಿಸಿದ್ದರು.

ಇನ್ನು ಸಿನಿಪ್ರಿಯರ ನೆಚ್ಚಿನ ಜೋಡಿ ರಿತೇಶ್ ದೇಶಮುಖ್ ಮತ್ತು ಜೆನೆಲಿಯಾ ಡಿಸೋಜಾ ಕಾರ್ಯಕ್ರಮದಲ್ಲಿ ಹಾಜರಿದ್ದರು. ಜೊತೆಗೆ ಅಷ್ಟಾಗಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ಇಷ್ಟವಿಲ್ಲ ಎನ್ನುತ್ತಿದ್ದ, ವರುಣ್ ಧವನ್ ತಮ್ಮ ಪತ್ನಿ ನತಾಶಾ ದಲಾಲ್ ಜೋಡಿ ಕೂಡ ಈ ಬಾರಿ ಎಲ್ಲರ ಗಮನ ಸೆಳೆದರು.

ಇನ್ನು ಬಾಲಿವುಡ್ ನಟ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಖಾನ್ ಕೂಡ ತಮ್ಮ ಮಕ್ಕಳೊಂದಿಗೆ ಪೂಜೆಗೆ ಹಾಜರಿದ್ದರು

