ನವದೆಹಲಿ: ಗುರುಗ್ರಾಮ್ನಲ್ಲಿ (Gurugram Hit and Run) ಮಹಿಳಾ ಸ್ಪೋರ್ಟ್ಸ್ ಬೈಕರ್ಗೆ ಕಾರಿನಿಂದ ಡಿಕ್ಕಿ ಹೊಡೆದ ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು (Kalyan Bainsla) ಮಂಗಳವಾರ ರಾಜಸ್ಥಾನದ ದೌಸಾದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಬೈನ್ಸ್ಲಾ ಜೊತೆಗೆ ಈ ಪ್ರಕರಣದ ಮತ್ತೊಬ್ಬ ಆರೋಪಿ ಲವ್ನೀಶ್ ಗುರ್ಜರ್ನನ್ನೂ ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಗುರುಗ್ರಾಮ್ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿ ಚಾಲಕನ ವಿರುದ್ಧ ಕೊಲೆ ಯತ್ನದ ಆರೋಪವನ್ನು ದಾಖಲಿಸಿದ್ದಾರೆ. ಈ ಅಪರಾಧಕ್ಕೆ 10 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವ ಅವಕಾಶವಿದೆ. ಇದನ್ನೂ ಓದಿ: Gurugram Hit & Run | ನಾನೇನು ಬೇಕಂತ ಲೇಡಿ ಬೈಕರ್ಗೆ ಡಿಕ್ಕಿ ಹೊಡೆದಿಲ್ಲ ಎಂದ ಆರೋಪಿ
ಗುರುಗ್ರಾಮ್ನ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಭಾನುವಾರ ಬಿಳಿ ಬಣ್ಣದ ಸೆಡಾನ್ ಕಾರೊಂದು ಇದ್ದಕ್ಕಿದ್ದಂತೆ ಎಡಕ್ಕೆ ತಿರುಗಿ, ಬೈಕ್ ಚಲಾಯಿಸುತ್ತಿದ್ದ ಸಿಯಾ (Sia) ಅವರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ಕೆಳಗೆ ಬಿದ್ದರು. ಘಟನೆಯ ದೃಶ್ಯದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಯಿತು. ಮಹಿಳೆಯ ‘ಏಪ್ರಿಲಿಯಾ ಆರ್ಎಸ್ 457’ (Aprilia RS 457) ಸ್ಪೋರ್ಟ್ಸ್ ಬೈಕ್ ರಸ್ತೆಯ ಮೇಲೆ ಬಿದ್ದು ಬಹುದೂರ ಉಜ್ಜಿಕೊಂಡು ಹೋಯಿತು.
ಕಾರು ಚಾಲಕ ಕಲ್ಯಾಣ್ ವಿರುದ್ಧ ಬೈಕರ್ ಸಿಯಾ ಗುಡುಗಿದ್ದಾರೆ. ‘ಒಬ್ಬ ಮಹಿಳೆಗೆ ಡಿಕ್ಕಿ ಹೊಡೆದು ವೇಗವಾಗಿ ಪರಾರಿಯಾದರೆ ತನಗೆ ಏನೂ ಆಗುವುದಿಲ್ಲ ಎಂದು ಆತ ಭಾವಿಸಿದ್ದಾನೆ’ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಬೇಕು ಅಂತಲೇ ಬೈಕ್ಗೆ ಕಾರಿಂದ ಡಿಕ್ಕಿ ಆರೋಪ: ಗುರುಗ್ರಾಮ್ ಹಿಟ್ & ರನ್ ಕೇಸ್ನ ಮತ್ತೊಂದು ವಿಡಿಯೋ ವೈರಲ್
ಆರೋಪಿಗೆ ಕಠಿಣ ಶಿಕ್ಷೆ ಆಗುವವರೆಗೂ ನಮ್ಮ ಹೋರಾಟ ನಿಲ್ಲಲ್ಲ ಎಂದು ಬೈಕರ್ ಸಿಯಾ ಪೋಷಕರು ಮಾತನಾಡಿದ್ದಾರೆ.

