ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ರಸ್ತೆಗುಂಡಿ ಮುಚ್ಚುವುದಕ್ಕೆ ಸಚಿವ ಕೃಷ್ಣಬೈರೇಗೌಡ ಅವರು ಡೆಡ್ಲೈನ್ ಕೊಡ್ತಾನೆ ಇದ್ದಾರೆ. ಆದರೆ ಜಿಬಿಎ ಅಧಿಕಾರಿಗಳು ರಸ್ತೆಗುಂಡಿ (Pathole) ಮುಚ್ಚುವುದರಲ್ಲೆ ಇದಾರೆ. ಈಗ ಹೊಸ ವಿಚಾರ ಅಂದರೆ ಬೆಂಗಳೂರಿನಲ್ಲಿ ರಸ್ತೆ ಗುಂಡಿ ಬೀಳುವುದಕ್ಕೆ ಏನು ಕಾರಣ ಅಂತಾ ಜಿಬಿಎ ಕಂಡುಕೊಂಡಿದೆ.
ಬೆಂಗಳೂರಿನಲ್ಲಿ (Bengaluru) ರಸ್ತೆಗುಂಡಿ ಬೀಳುವುದಕ್ಕೆ ಕಾಂಕ್ರೀಟ್, ಜಲ್ಲಿ ತುಂಬಿದ ಟ್ರಕ್ ಮತ್ತೆ ಲಾರಿಗಳಿಂದ ರಸ್ತೆಗುಂಡಿ ಬೀಳ್ತಿದೆ ಅಂತೆ. ಈ ಬಗ್ಗೆ ಸ್ವತ: ಜಿಬಿಎ ಮುಖ್ಯ ಆಯುಕ್ತರೇ ಮಾಹಿತಿ ಬಿಚ್ಚಿಟ್ಟಿದ್ದಾರೆ.
ಇನ್ನು, ರಸ್ತೆಗುಂಡಿ ಮುಚ್ಚುವುದಕ್ಕೆ 4,200 ಕೋಟಿ ರೂ. ಬಿಡುಗಡೆ ಆಗಿದ್ದು, ಜನವರಿ, ಫೆಬ್ರವರಿ ಒಳಗಡೆ ಬಾಕಿ ಇರುವ ಹೊಸ ರಸ್ತೆಗಳನ್ನ ನಿರ್ಮಾಣ ಮಾಡಲಿದ್ದಾರೆ. ಸುಮಾರು 2,300 ಕಿಮೀ ಅಷ್ಟು ರಸ್ತೆ ಕಾಮಗಾರಿ ಬಾಕಿ ಇದೆ. ವಾರ್ಡ್ ಗಳಲ್ಲಿ ರಸ್ತೆ ಗುಂಡಿ 75 ಲಕ್ಷ ಮೀಸಲಾಗಿದ್ದು, ಡಿಸೆಂಬರ್ ಒಳಗಡೆ ಮುಚ್ಚಲು ಗುರಿ ಇಡಲಾಗಿದೆ.

