ನವದೆಹಲಿ: ನಾವು ಯಾವಾಗಲೂ ತಮಿಳುನಾಡು(Tamil Nadu) ಮತ್ತು ನಮ್ಮ ತಮಿಳು ಜನರ ಹಿತಾಸಕ್ತಿಯನ್ನು ಮೊದಲ ಆದ್ಯತೆಯಾಗಿಟ್ಟುಕೊಂಡೇ ಪ್ರತಿಯೊಂದು ನಿರ್ಧಾರವನ್ನು ತೆಗೆದುಕೊಂಡಿದ್ದೇವೆ ಎಂದು ತಮಿಳುನಾಡು ಮಾಜಿ ಸಿಎಂ ಸ್ಟಾಲಿನ್ (MK Stalin) ಪ್ರತಿಕ್ರಿಯಿಸಿದ್ದಾರೆ.
ನಾಳೆಯಿಂದ ಆರಂಭವಾಗಲಿರುವ ಸಂಸತ್ತಿನ ವಿಶೇಷ ಅಧಿವೇಶನಕ್ಕೂ ಮುನ್ನ, ಕೇಂದ್ರ ಸರ್ಕಾರದ ಪ್ರಸ್ತಾವಿತ ಕ್ಷೇತ್ರ ಪುನರ್ವಿಂಗಡಣೆ (Delimitation) ಮಸೂದೆಯನ್ನು ತಡೆಯಲು ಕಾಂಗ್ರೆಸ್ ‘ಕೊನೆಯ ಕ್ಷಣದ ಕಸರತ್ತು’ ಆರಂಭಿಸಿದೆ. ಈ ಮಸೂದೆಗೆ ಬೆಂಬಲ ಸೂಚಿಸಿರುವ ಡಿಎಂಕೆ ಮನವೊಲಿಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಇಂದು ಚೆನ್ನೈಗೆ ಪ್ರಯಾಣ ಬೆಳೆಸಿದ್ದಾರೆ.
ಚೆನ್ನೈಗೆ ಪ್ರಯಾಣ ಬೆಳೆಸುವ ಮುನ್ನ ಸಾಮಾಜಿಕ ಜಾಲತಾಣ ಮೂಲಕ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, “ಎಂ.ಕೆ. ಸ್ಟಾಲಿನ್ ಅವರನ್ನು ಭೇಟಿ ಮಾಡಿ, ಕ್ಷೇತ್ರ ಪುನರ್ವಿಂಗಡಣೆ ಸಂವಿಧಾನ ತಿದ್ದುಪಡಿ ಮಸೂದೆಗಳನ್ನು ವಿರೋಧಿಸುವಂತೆ ಅವರಿಗೂ ಹಾಗೂ ಡಿಎಂಕೆ ಪಕ್ಷಕ್ಕೂ ಮನವಿ ಮಾಡಲು ಚೆನ್ನೈಗೆ ತೆರಳುತ್ತಿದ್ದೇನೆ” ಎಂದು ತಿಳಿಸಿದ್ದಾರೆ.
Senior leaders of the INDIA bloc and I are going to Chennai to meet Thiru @mkstalin and request him and the DMK to oppose the delimitation Constitutional amendment bills.
An expansion to 850 seats will finish democracy in India. It will give BJP-RSS unlimited space to redraw India’s entire electoral map to their advantage.
Brother Stalin has always stood like a rock against anti-Tamil forces. In the national interest, in Tamil Nadu’s interest and to protect the Constitution, we have to defeat this bill together.
— Rahul Gandhi (@RahulGandhi) November 29, 2026
“ಲೋಕಸಭಾ ಸ್ಥಾನಗಳನ್ನು 850ಕ್ಕೆ ವಿಸ್ತರಿಸುವುದರಿಂದ ಭಾರತದಲ್ಲಿ ಪ್ರಜಾಪ್ರಭುತ್ವವೇ ಅಂತ್ಯವಾಗಲಿದೆ. ಇದು ಬಿಜೆಪಿ-ಆರ್ಎಸ್ಎಸ್ಗೆ ತಮ್ಮ ಲಾಭಕ್ಕಾಗಿ ಇಡೀ ಭಾರತದ ಚುನಾವಣಾ ನಕ್ಷೆಯನ್ನು ಮರುರಚಿಸಲು ಅನಿಯಮಿತ ಅವಕಾಶವನ್ನು ನೀಡುತ್ತದೆ. ಸಹೋದರ ಸ್ಟಾಲಿನ್ ಅವರು ತಮಿಳು ವಿರೋಧಿ ಶಕ್ತಿಗಳ ವಿರುದ್ಧ ಯಾವಾಗಲೂ ಬಂಡೆಯಂತೆ ನಿಂತಿದ್ದಾರೆ. ದೇಶದ ಹಿತದೃಷ್ಟಿಯಿಂದ, ತಮಿಳುನಾಡಿನ ಹಿತದೃಷ್ಟಿಯಿಂದ ಮತ್ತು ಸಂವಿಧಾನವನ್ನು ರಕ್ಷಿಸಲು ನಾವೆಲ್ಲರೂ ಒಟ್ಟಾಗಿ ಈ ಮಸೂದೆಯನ್ನು ಸೋಲಿಸಬೇಕಿದೆ” ಎಂದು ರಾಹುಲ್ ಗಾಂಧಿ ಕರೆ ನೀಡಿದ್ದಾರೆ.
ರಾಹುಲ್ ಗಾಂಧಿ ಅವರ ಈ ಟ್ವೀಟ್ಗೆ ತಕ್ಷಣವೇ ಪ್ರತಿಕ್ರಿಯಿಸಿರುವ ಸಿಎಂ ಎಂ.ಕೆ. ಸ್ಟಾಲಿನ್, “ಸಂವಿಧಾನ ಮತ್ತು ರಾಜ್ಯಗಳ ಹಕ್ಕುಗಳನ್ನು ರಕ್ಷಿಸುವಲ್ಲಿ ಡಿಎಂಕೆಯ ಐತಿಹಾಸಿಕ ಪಾತ್ರವನ್ನು ಗುರುತಿಸಿದ್ದಕ್ಕಾಗಿ ಸಹೋದರ ರಾಹುಲ್ ಗಾಂಧಿ ಅವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು” ಎಂದಿದ್ದಾರೆ.
My sincere thanks to brother @RahulGandhi for acknowledging the DMK’s historic role in protecting the Constitution and the rights of the States.
We have always made every decision keeping the interests of Tamil Nadu and our Tamil people as the foremost consideration.
We will not compromise on this path and I’m confident that history will judge us as Kattabommans and not Ettappans.
— M.K.Stalin (@mkstalin) November 29, 2026
“ನಾವು ಯಾವಾಗಲೂ ತಮಿಳುನಾಡು ಮತ್ತು ನಮ್ಮ ತಮಿಳು ಜನರ ಹಿತಾಸಕ್ತಿಯನ್ನು ಮೊದಲ ಆದ್ಯತೆಯಾಗಿಟ್ಟುಕೊಂಡೇ ಪ್ರತಿಯೊಂದು ನಿರ್ಧಾರವನ್ನು ತೆಗೆದುಕೊಂಡಿದ್ದೇವೆ. ಈ ಹಾದಿಯಲ್ಲಿ ನಾವು ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಇತಿಹಾಸವು ನಮ್ಮನ್ನು ‘ಕಟ್ಟಬೊಮ್ಮನ್’ (ಬ್ರಿಟಿಷರ ವಿರುದ್ಧ ಹೋರಾಡಿದ ವೀರ ಸ್ವಾತಂತ್ರ್ಯ ಹೋರಾಟಗಾರ) ಎಂದು ಗುರುತಿಸುತ್ತದೆಯೇ ಹೊರತು, ‘ಎಟ್ಟಪ್ಪನ್’ (ದ್ರೋಹಿ) ಎಂದು ತೀರ್ಪು ನೀಡುವುದಿಲ್ಲ ಎಂದು ಮಾರ್ಮಿಕವಾಗಿ ಪ್ರತಿಕ್ರಿಯಿಸಿದ್ದಾರೆ.
ಇದೀಗ ಇಡೀ ದೇಶದ ರಾಜಕೀಯ ವಲಯದ ಕಣ್ಣು ಚೆನ್ನೈನಲ್ಲಿ ನಡೆಯಲಿರುವ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮತ್ತು ಎಂ.ಕೆ. ಸ್ಟಾಲಿನ್ ನಡುವಿನ ಮಹತ್ವದ ಸಂಧಾನ ಸಭೆಯತ್ತ ನೆಟ್ಟಿದೆ.
ಡಿಎಂಕೆ INDIA ಒಕ್ಕೂಟದ ಭಾಗವಾಗಿತ್ತು. ಆದರೆ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ಸೋತ ಬಳಿಕ ಕಾಂಗ್ರೆಸ್ ಟಿವಿಕೆ ಜೊತೆ ಸೇರಿ ಮೈತ್ರಿ ಮಾಡಿದ್ದು ಡಿಎಂಕೆಯ ಕೆಂಗಣ್ಣಿಗೆ ಗುರಿಯಾಗಿದೆ. ಈ ಕಾರಣಕ್ಕೆ ಲೋಕಸಭೆಯಲ್ಲೂ ಕಾಂಗ್ರೆಸ್ ಜೊತೆ ನಾವು ಕುಳಿತುಕೊಳ್ಳುವುದಿಲ್ಲ, ನಮಗೆ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಿಕೊಡಬೇಕು ಎಂದು ಡಿಎಂಕೆ ಸಂಸದರು ಸ್ಪೀಕರ್ ಓಂ ಬಿರ್ಲಾ ಅವರಿಗೆ ಮನವಿ ಸಲ್ಲಿಸಿದ್ದರು.
