ಚಂಡೀಗಢ: ನಾನು ಬೇಕಂತ ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆಸಿಲ್ಲ ಎಂದು ಗುರುಗ್ರಾಮ್‌ನಲ್ಲಿ (Gurugram) ನಡೆದಿದ್ದ ಹಿಟ್ & ರನ್ (Hit And Run) ಪ್ರಕರಣದ ಆರೋಪಿ ಕಲ್ಯಾಣ್ ಬೈನ್ಸ್ಲಾ ಹೇಳಿದ್ದಾನೆ.
ಮಾಧ್ಯಮದ ಜೊತೆ ಮಾತಾಡಿರುವ ಬೈನ್ಲಾ, ಬೈಕ್ (Bike) ಚಲಾಯಿಸುತ್ತಿರುವುದು ಮಹಿಳೆ ಎಂಬುದು ನನಗೆ ತಿಳಿದಿರಲಿಲ್ಲ. ನಾನು ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದಿಲ್ಲ. ಸೆ.13ರ ಬೆಳಗ್ಗೆ ಸೋದರಸಂಬಂಧಿಯೊಂದಿಗೆ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ತಿಳಿಸಿದ್ದಾನೆ. ಇದನ್ನೂ ಓದಿ: ಬೇಕು ಅಂತಲೇ ಬೈಕ್‌ಗೆ ಕಾರಿಂದ ಡಿಕ್ಕಿ ಆರೋಪ: ಗುರುಗ್ರಾಮ್ ಹಿಟ್ & ರನ್ ಕೇಸ್‌ನ ಮತ್ತೊಂದು ವಿಡಿಯೋ ವೈರಲ್
ಇಬ್ಬರು ಬೈಕ್ ಸವಾರರು ಪದೇ ಪದೇ ತಮ್ಮನ್ನು ಪಕ್ಕದಿಂದ ಹಿಂದಿಕ್ಕಿ, ಕಾರಿನ ಮುಂದೆ ಬಂದು ವೇಗವನ್ನು ಕಡಿಮೆ ಮಾಡುತ್ತಿದ್ದರು. ಆಗ ಡಿಕ್ಕಿ ಸಂಭವಿಸಿದೆ. ಇದು ಉದ್ದೇಶಪೂರ್ವಕವಾಗಿ ಮಾಡಿದ್ದಲ್ಲ. ಮಹಿಳೆಗೆ ಗಾಯವಾಗಿರುವುದಕ್ಕೆ ವಿಷಾದವಿದೆ ಎಂದಿದ್ದಾನೆ.
ಸಿಸಿಟಿವಿ ಪರಿಶೀಲಿಸಿ
ವೈರಲ್ ವಿಡಿಯೋಗಳಲ್ಲಿ ಕಂಡುಬರುವ ದೃಶ್ಯಗಳು ಸಂಪೂರ್ಣ ಚಿತ್ರಣ ನೀಡುತ್ತಿಲ್ಲ. ಅವರು ಪದೇ ಪದೇ ನನ್ನ ಮುಂದೆ ಬಂದು ಬೈಕ್‌ನ ವೇಗವನ್ನು ಕಡಿಮೆ ಮಾಡುತ್ತಿದ್ದರು. ಬೈಕ್ ಸವಾರರು ಕಾರಿನ ಕನ್ನಡಿಯತ್ತ (ಮಿರರ್) ನೋಡದೆ ಬೈಕ್ ತಿರುಗಿಸಿ ನಿಯಂತ್ರಣ ಕಳೆದುಕೊಂಡಿದ್ದರಿಂದಲೇ ಡಿಕ್ಕಿ ಸಂಭವಿಸಿದೆ. ಡಿಕ್ಕಿ ಆಕಸ್ಮಿಕವಾಗಿ ಸಂಭವಿಸಿದೆ ಎಂದು ಭಾವಿಸೋಣ. ತಪ್ಪು ನಡೆದಿದೆ ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ ಎಂದು ಆತ ಹೇಳಿದ್ದಾನೆ.
ತನ್ನ ವಿರುದ್ಧದ ಆರೋಪಗಳು ತನ್ನ ಕುಟುಂಬದ ಮೇಲೆ ಪರಿಣಾಮ ಬೀರಿದರೆ, ಅವುಗಳಿಗೆ ಪ್ರತಿಕ್ರಿಯಿಸುತ್ತೇನೆ. ತನ್ನ ವಿರುದ್ಧ ಈ ಹಿಂದೆ ಯಾವುದೇ ಕ್ರಿಮಿನಲ್ ಪ್ರಕರಣಗಳು ದಾಖಲಾಗಿಲ್ಲ ಎಂಬುದನ್ನು ಆತ ಒತ್ತಿ ಹೇಳಿದ್ದಾನೆ.
ಮಹಿಳೆ ಹೇಳಿದ್ದೇನು?
ಕಾರು ಡಿಕ್ಕಿಯಾದ ಬಗ್ಗೆ ಪ್ರತಿಕ್ರಿಯಿಸಿದ್ದ ಮಹಿಳೆ, ಕಾರಿನಲ್ಲಿದ್ದವರು ತಮ್ಮನ್ನು ಹಿಂಬಾಲಿಸುತ್ತಿದ್ದರು. ಕಾರು ಡಿಕ್ಕಿ ಹೊಡೆಯುವ ಮೊದಲು ಚಾಲಕ ಆಕ್ರಮಣಕಾರಿಯಾಗಿ ವಾಹನ ಚಲಾಯಿಸುತ್ತಿದ್ದ ಎಂದು ಆರೋಪಿಸಿದ್ದಳು.
ತಮ್ಮ ಬೈಕ್‌ನಿಂದ ಅಂತರ ಕಾಯ್ದುಕೊಳ್ಳುಂತೆ ಹೇಳಿದ್ದಕ್ಕೆ ಕಲ್ಯಾಣ್ ಬೈನ್ಸ್ಲಾ ಲೇಡಿ ಬೈಕರ್ ಸಿಯಾಗೆ (Woman Biker) ಬೆನ್ನಟ್ಟಿ ಕಾರು ಡಿಕ್ಕಿ ಹೊಡೆಸಿದ್ದಾನೆ ಎಂದು ಆರೋಪಿಸಿದ್ದರು. ಮಹಿಳೆಯ ಬೈಕ್‌ಗೆ ಕಾರು ಡಿಕ್ಕಿಯಾದ (Accident) ವಿಡಿಯೋ ಆಕ್ಷನ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸುಮೋಟೋ ಕೇಸ್ ದಾಖಲು
ಈ ಅಪಘಾತದ ವಿಡಿಯೋ ವೈರಲ್ ಆದ ಬಳಿಕ ಗುರುಗ್ರಾಮ್ ಪೊಲೀಸರು ಸ್ವಯಂಪ್ರೇರಿತವಾಗಿ (suo motu) ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಪರಿಚಿತ ವ್ಯಕ್ತಿಯ ವಿರುದ್ಧ ಎಫ್‌ಐಆರ್ (FIR) ದಾಖಲಿಸಿದ್ದಾರೆ. ಗಾಯಗೊಂಡ ಬೈಕ್ ಸವಾರರು ಕೂಡ ತಮ್ಮ ವಕೀಲರ ಮೂಲಕ ಎಫ್‌ಐಆರ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಬೆನ್ನಟ್ಟಿ ಲೇಡಿ ಬೈಕರ್‌ಗೆ ಡಿಕ್ಕಿ ಹೊಡೆಸಿದ ಕಾರು ಚಾಲಕ – ವಿಡಿಯೋ ವೈರಲ್

