ಆನೇಕಲ್: ತಾಲೂಕಿನ (Anekal) ಮುತ್ಯಾಲಮಡುವಿನ ಬಳಿ 7 ಆನೆದಂತಗಳನ್ನು ಕಾರಿನಲ್ಲಿ ಸಾಗಿಸುತ್ತಿದ್ದ ಮೂವರು ದಂತಚೋರರನ್ನು ಆನೇಕಲ್ ಪೊಲೀಸರು (Police) ಬಂಧಿಸಿದ್ದಾರೆ.
ತಮಿಳುನಾಡು (Tamil Nadu) ಮೂಲದ ಸತೀಶ್ವರನ್, ಶರತ್ ಕುಮಾರ್ ಹಾಗೂ ಶಂಕರ್ ಬಂಧಿತ ಆರೋಪಿಗಳು. ಬಂಧಿತರಿಂದ 7 ಆನೆ ದಂತ, ಒಂದು ಕಾರು, ಮೊಬೈಲ್ ಪೋನ್, ವನ್ಯಜೀವಿಗಳನ್ನು ಬೇಟೆಯಾಡಲು ಬಳಸುತ್ತಿದ್ದ ಶಸ್ತ್ರಾಸ್ತ್ರಗಳನ್ನು ಪೊಳೀಸರು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಕಾಡು ರಕ್ಷಕನಿಂದಲೇ ಆನೆ ದಂತ ಸಾಗಾಟ – ಫಾರೆಸ್ಟ್ ವಾಚರ್, ಸಂಬಂಧಿ ಬಂಧನ
ವನ್ಯಜೀವಿ ಬೇಟೆ ಹಾಗೂ ದಂತ, ಜಿಂಕೆ ಮಾಂಸ ಸಾಗಾಣಿಕೆ ಬಗ್ಗೆ ಪೋಲಿಸರಿಗೆ ಖಚಿತ ಮಾಹಿತಿ ಸಿಕ್ಕಿತ್ತು. 15 ದಿನಗಳಿಂದ ಈ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದರು. ಅದರಂತೆ ಆನೇಕಲ್ ಪೊಲೀಸ್ ಇನ್ಸ್ಪೆಕ್ಟರ್ ಪ್ರಕಾಶ್ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ತಮಿಳುನಾಡಿನಿಂದ ಬೆಂಗಳೂರಿಗೆ ದಂತ ಮಾರಾಟಕ್ಕೆ ಕಾರಿನಲ್ಲಿ ಬರುತ್ತಿದ್ದಂತೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಧಿತರನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದ್ದು, ನ್ಯಾಯಾಲಯ ಆರೋಪಿಗಳನ್ನು 6 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ.ಇದನ್ನೂ ಓದಿ: 51 ಕೆಜಿ ತೂಕದ 10 ಆನೆ ದಂತ ವಶ – ಮೂವರು ಅರೆಸ್ಟ್
