-ಬಿಜೆಪಿ ಅವರು ಪಾದಯಾತ್ರೆ ಮಾಡಿ ವಾಕ್ ಮಾಡಲಿ
ಬೆಂಗಳೂರು: ನೈಸ್ ಯೋಜನೆ (NICE Scheme) ಕುರಿತು ಸಿಎಂ ವಿರುದ್ಧ ಕುಮಾರಸ್ವಾಮಿ (HD Kumaraswamy) ಏನು ದಾಖಲಾತಿ ಬಿಡುಗಡೆ ಮಾಡುತ್ತಾರೋ ಮಾಡಲಿ ಎಂದು ಸಚಿವ ಚಲುವರಾಯಸ್ವಾಮಿ (N Chaluvaraya Swamy) ಸವಾಲ್ ಹಾಕಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ದಾಖಲೆ ಬಿಡುಗಡೆ ಮಾಡಲಿ. ಅವರು ಇದುವರೆಗೂ ಬಿಡುಗಡೆ ಮಾಡ್ತೀನಿ ಅಂದರು ಯಾವುದೇ ದಾಖಲಾತಿ ಬಿಡುಗಡೆ ಮಾಡಿಲ್ಲ. ಕಳೆದ 3 ವರ್ಷದಲ್ಲಿ ಯಾವುದಾದರೂ ದಾಖಲೆ ಬಿಡುಗಡೆ ಮಾಡಿದ್ರಾ? ಯಾವುದು ಬಿಡುಗಡೆ ಮಾಡಿಲ್ಲ. ಕುಮಾರಸ್ವಾಮಿ ಅವರನ್ನ ಯಾಕೆ ಬಿಡುಗಡೆ ಮಾಡಲ್ಲ ಕೇಳಿ ಎಂದು ಪ್ರಶ್ನೆ ಮಾಡಿದರು. ಇದನ್ನೂ ಓದಿ: ಧರ್ಮಸ್ಥಳ ಶ್ರೀ ಮಂಜುನಾಥನ ದರ್ಶನ ಪಡೆದ ಯಶ್ – ‘ಟಾಕ್ಸಿಕ್’ ಯಶಸ್ಸಿಗಾಗಿ ವಿಶೇಷ ಪೂಜೆ
ನೈಸ್ ಕಂಪನಿ ವಿಚಾರದಲ್ಲಿ ಕುಮಾರಸ್ವಾಮಿ ಹಿಟ್ ಅಂಡ್ ರನ್ ಕೇಸ್ ಮಾಡುತ್ತಿದ್ದಾರೆ. ಕುಮಾರಸ್ವಾಮಿ ಕೇಂದ್ರ ಮಂತ್ರಿಯಾಗಿ ಕ್ಯಾಬಿನೆಟ್ ಗೆ ಹೋಗ್ತಾರೋ ಇಲ್ಲವೋ ಗೊತ್ತಿಲ್ಲ. ಬೆಂಗಳೂರಿನಲ್ಲಿ ಮಾತ್ರ ಇರುತ್ತಾರೆ. ಅದು ಹೇಗೆ ಉಕ್ಕು ಕೈಗಾರಿಕಾ ಇಲಾಖೆ ನಡೆಸುತ್ತಿದ್ದಾರೆ ಎಂದರು. ಇದನ್ನೂ ಓದಿ: ಜವಾಬ್ದಾರಿ ಹಸ್ತಾಂತರಿಸುವ ಸಮಯ ಬಂದಿದೆ: ಹೇಳಿಕೆ ಚರ್ಚೆಗೆ ಗ್ರಾಸವಾದ ಬೆನ್ನಲ್ಲೇ ಗಡ್ಕರಿ ಕಚೇರಿಯಿಂದ ಸ್ಪಷ್ಟನೆ
ವಿಜಯವಾಡದಲ್ಲಿ ಫ್ಯಾಕ್ಟರಿ ಕೊಡೋದು ಪ್ರಧಾನಮಂತ್ರಿಗಳ ಭರವಸೆ ಆಗಿತ್ತು ಮಾಡಿದ್ರು. ಕುಮಾರಸ್ವಾಮಿ ಕರ್ನಾಟಕಕ್ಕೆ ಏನು ಮಾಡಿದ್ದಾರೆ ಹೇಳಲಿ. ಹೆಚ್‌ಎಂಟಿ ಲಾಭ ಮಾಡುತ್ತಿದೆ. ಎಲ್ಲಿಗೆ ಹೋಯ್ತು ಗಿಫ್ಟ್? ಗಿಫ್ಟ್ ಕೊಟ್ಟಿದ್ದಾರೆ ಗೊತ್ತಾ? ಅವರು ದುಡ್ಡು ಕೊಟ್ಟು ತಗೊಂಡರೆ ಏನು ತಪ್ಪು ಬಿಡಿ. ಅವರ ಅವಧಿ ಎಷ್ಟು ದಿನ ಇದೆ. ಅವರು ಏನು ಮಾಡುತ್ತಾರೆ ನೋಡೋಣ ಎಂದು ಹೆಚ್‌ಡಿಕೆ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: TMC 20 ರೆಬೆಲ್ ಸಂಸದರಿಗೆ ನೋಟಿಸ್, ಸ್ಪೀಕರ್‌ಗೆ ಯಾಕೆ ಕೊಟ್ಟಿಲ್ಲ? – ಸುಪ್ರೀಂ ಪ್ರಶ್ನೆ
ಇನ್ನು ನಾಗೇಂದ್ರ ವಿರುದ್ಧ ಬಿಜೆಪಿ ಪಾದಯಾತ್ರೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ಅವರು ಪಾದಯಾತ್ರೆ ಮಾಡಿ ವಾಕ್ ಮಾಡಿಕೊಂಡು ಬರಲಿ. ಬಿಜೆಪಿ ಪಾದಯಾತ್ರೆ ಮಾಡಲಿ ಅವರಿಗೆ ಯಾವುದೇ ವಿಷಯ ಇಲ್ಲ. ಸದನದಲ್ಲಿ ರೈತರ ಸಮಸ್ಯೆ ಬಗ್ಗೆ ಚರ್ಚೆ ಮಾಡಲು ವಿಷಯ ಇಲ್ಲ. ಹೀಗಾಗಿ ಪಾದಯಾತ್ರೆ ಮಾಡುತ್ತಿದ್ದಾರೆ, ಮಾಡಲಿ. ವಾಕ್ ಮಾಡಿಕೊಂಡು ಬರಲಿ ಎಂದರು. ಇದನ್ನೂ ಓದಿ: ತಮಿಳುನಾಡಿಗೆ ನಿತ್ಯ 9 ಸಾವಿರ ಕ್ಯೂಸೆಕ್ ನೀರು ಹರಿಸಿ – CWRC ಶಿಫಾರಸು ಎತ್ತಿಹಿಡಿದ CWMA
ಅಶೋಕ್‌ಗೆ ವಾಕ್ ಮಾಡಬೇಕು ಅಂತ ಇದೆ ಅನ್ನಿಸುತ್ತೆ ಮಾಡಲಿ. ಪ್ರತಿಭಟನೆ ಮಾಡೋದು ಬೇಡ ಅನ್ನಲು ಆಗಲ್ಲ. ನಾಗೇಂದ್ರಗೆ ರಾಜ್ಯಪಾಲರು ಪ್ರಮಾಣವಚನ ಬೋಧನೆ ಮಾಡಿದ್ದಾರೆ. ರಾಜ್ಯಪಾಲರನ್ನ ಬಿಜೆಪಿ ಅವರು ಕೇಳಲಿ ಅಂತ ಬಿಜೆಪಿಗೆ ಪ್ರಶ್ನೆ ಮಾಡಿದರು. ಸಿಬಿಐಗೆ ಪ್ರಾಸಿಕ್ಯೂಷನ್‌ಗೆ ಕೊಡುವ ಬಗ್ಗೆ ರಾಜ್ಯಪಾಲರು ಸರ್ಕಾರವನ್ನ ಕೇಳಲಿ. ಕ್ಯಾಬಿನೆಟ್‌ಗೆ ವಿಷಯ ಬರಲಿ ಮಾತಾಡೋಣ. ರಾಜ್ಯಪಾಲರು ಯರ‍್ಯಾರ ಕೇಸ್ ಪೆಂಡಿಂಗ್ ಇಟ್ಟುಕೊಂಡಿದ್ದಾರೆ ಚರ್ಚೆ ಮಾಡೋಣ. ಅನೇಕ ಜನರದ್ದು ಕೇಸ್ ಬಾಕಿ ಇದೆ. ಅದನ್ನು ಸಿಬಿಐಗೆ ರಾಜ್ಯಪಾಲರು ಕಳಿಸಲಿ ಎಂದು ಒತ್ತಾಯಿಸಿದರು. ಇದನ್ನೂ ಓದಿ: ಕೆಪಿಎಸ್‌ಸಿ ಹಗರಣ | ಸಿಎಂ ಗೃಹಕಚೇರಿ ʻಕೃಷ್ಣಾʼ ಮುತ್ತಿಗೆಗೆ ವಿದ್ಯಾರ್ಥಿಗಳ ಯತ್ನ
