ಬಿಗ್‌ಬಾಸ್ (Bigg Boss) ಟಾಸ್ಕ್‌ವೊಂದರಲ್ಲಿ ಹೊಡೆದಾಡಿಕೊಂಡಿದ್ದ 30 ಕೆಜಿ.. 86 ಕೆಜಿ ಮಾಂಸದ ಸೌಂದರ್ಯ ಹಾಗೂ ಮಹಾಕವಿ ಮಂಜ ಕೂಲ್ ಫ್ರೆಂಡ್ಸ್ ಆಗಿದ್ದಾರೆ.
ಹೌದು. ಟಾಸ್ಕ್‌ನಲ್ಲಿ ವಸ್ತುಗಳನ್ನ ಕಾಪಾಡಿಕೊಳ್ಳುವ ಭರದಲ್ಲಿ ಸೌಂದರ್ಯ ಮಂಜ ಅವರ ಮೇಲೆ ಕೈ ಮಾಡಿದ್ದರು. ಆಗ ಇಬ್ಬರ ನಡುವೆ ಭೀಕರ ದಾಳಿಯೇ ನಡೆದಿತ್ತು. ಆದರೆ ಬಳಿಕ ಬಿಗ್‌ಬಾಸ್ ಮಾತನಾಡಿ, ಪ್ರತಿಯೊಂದನ್ನು ಗಮನಿಸಿದಾಗ ನಡೆದಿರುವ ಕ್ರಿಯೆ ಉದ್ದೇಶಪೂರ್ವಕವಾಗಿ ಹೊಡೆದಂತೆ ಕಾಣಿಸಿಲ್ಲ. ಜೊತೆಗೆ ಸೌಂದರ್ಯ ಕೂಡ ನಾನು ಆಟದ ಭರದಲ್ಲಿ ಹಾಗೆ ಮಾಡಿದೆ. ನನಗೆ ಹೊಡೆಯುವ ಉದ್ದೇಶವಿರಲಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಹೊಡೆದೇ ಬಿಟ್ರು ಸೌಂದರ್ಯ… ಮಂಜನ ಮಿತಿಮೀರಿದ ಆಕ್ರೋಶ – ಬಿಗ್‌ಬಾಸ್ ರೂಲ್ಸ್ ಬ್ರೇಕ್
ಮ್ಯಾನ್ ಹ್ಯಾಂಡ್ಲಿಂಗ್ ಆಗಿಲ್ಲ. ಇದು ಉದ್ದೇಶಪೂರ್ವಕವಾಗಿರಲಿಲ್ಲ ಎಂಬ ಕಾರಣಕ್ಕಾಗಿ ಬಿಗ್‌ಬಾಸ್ ಸೌಂದರ್ಯ ಅವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಆನಂತರ ಸೌಂದರ್ಯ ಕೂಡ ಮಂಜ ಅವರಿಗೆ ಸಾರಿ ಕೇಳಿದ್ದರು. ಟಾಸ್ಕ್ ಸಂದರ್ಭದಲ್ಲಿ 30 ಕೆ.ಜಿ ಇರೋ ಮಾಂಸ 86 ಕೆ.ಜಿ ಮಾಂಸನ ಹೊಡೆಯೋಕೆ ಬಂದಿದೆ ಎಂದು ಮಂಜ ಹೇಳಿದ್ದರು. ಇದೀಗ ಇಬ್ಬರ ಮಧ್ಯದ ಕಾಳಗದ ಬಿಸಿ ಕಡಿಮೆಯಾಗಿ, ಇದೀಗ ಕೂಲ್ ಫ್ರೆಂಡ್ಸ್ ಆಗಿದ್ದಾರೆ.
ಸೌಂದರ್ಯ-ಮಂಜುನಾಥ್ ನಡುವೆ ಎಲ್ಲೆ ಮೀರಿದ ಕೋಪ… ಮುಂದೇನು?
ಬಿಗ್ ಬಾಸ್ | ಸೋಮ – ಶುಕ್ರ ರಾತ್ರಿ 9:30 | ಶನಿ – ಭಾನು ರಾತ್ರಿ 9:00
ಫುಲ್‌ಸ್ಟಾಪ್ ಇಲ್ಲದೇ 24X7 ನಾನ್ ಸ್ಟಾಪ್ ಮನರಂಜನೆ #JioHotstarನಲ್ಲಿ – https://t.co/96hibtGUwq#BBK13 #ColorsKannada #ಕಲರ್‌ಫುಲ್‌ಕತೆ #colorfulstory #KichchaSudeepa #CKPromo pic.twitter.com/vvMtgQPD3g
— Colors Kannada (@ColorsKannada) September 14, 2026
ಆಗಿದ್ದೇನು?
ಟಾಸ್ಕ್‌ವೊಂದರಲ್ಲಿ ಸೌಂದರ್ಯ ಬಳಿ ಇದ್ದ ಬಕೆಟ್ ಹಾಗೂ ರಿಂಗ್‌ನ್ನ ಮೊದಲು ಧನುಷ್ ಕಸಿದುಕೊಳ್ಳಲು ಬರ್ತಾರೆ. ಬಳಿಕ ಮಂಜು ಎಂಟ್ರಿ ಕೊಡ್ತಾರೆ. ಆಗ ಶುರುವಾಗೋದೇ ಭಯಂಕರ ದಾಳಿ. ಮಂಜುನಿಂದ ವಾಪಸ್ ಪಡೆದುಕೊಳ್ಳಲು ಸೌಂದರ್ಯ ಕೈಯಲ್ಲಿ ಹೊಡೆಯುತ್ತಾರೆ. ಈ ಬಳಿಕ ಮಂಜು (Manju) ಬಹಳ ಆಕ್ರೋಶದಿಂದ ಸೌಂದರ್ಯ ಬಳಿ ಹೋಗಿ, ‘ನನಗೆ ಬರ್ತಿರೋ ಕೋಪಕ್ಕೆ ಎತ್ತಿ ಕುಕ್ಕಿಬಿಡ್ತೀನಿ’ ಎಂದು ಬೆದರಿಸುತ್ತಾರೆ. ಇದನ್ನೂ ಓದಿ: BBK13 | ಬಿಗ್‌ಬಾಸ್ ಸ್ಪರ್ಧಿ ಓಂ ಪ್ರಕಾಶ್ ರಾವ್ ಆಸ್ಪತ್ರೆಗೆ ದಾಖಲು
ಬಿಗ್‌ಬಾಸ್ ಆಟದ ರೂಲ್ಸ್ ಪ್ರಕಾರ ಇಲ್ಲಿ ಸ್ಪರ್ಧಿಗಳು ಇನ್ನೋರ್ವ ಸ್ಪರ್ಧಿಗೆ ಹೊಡೆಯುವಂತಿಲ್ಲ. ರೂಲ್ಸ್ ಬ್ರೇಕ್ ಆದರೆ ಕೂಡಲೇ ಅವರನ್ನು ಆಟದಿಂದ ಹೊರಕ್ಕೆ ಕಳಿಸಬಹುದು. ಇದೀಗ ಸೌಂದರ್ಯ ಟಾಸ್ಕ್ ಆಡುವ ಕೋಪದಲ್ಲಿ ರೂಲ್ಸ್ ಬ್ರೇಕ್ ಮಾಡಿದ್ದಾರೆ. ಈ ಹಿಂದಿನ ಸೀಸನ್‌ನಲ್ಲಿ ಹುಚ್ಚ ವೆಂಕಟ್, ರಂಜಿತ್ ಹಾಗೂ ಸಂಯುಕ್ತ ಹೆಗಡೆ ಪ್ರತಿಸ್ಪರ್ಧಿ ಮೇಲೆ ಮ್ಯಾನ್‌ಹ್ಯಾಂಡ್ಲಿಂಗ್ ಮಾಡಿರೋ ಕಾರಣಕ್ಕೆ ಬಿಗ್‌ಬಾಸ್ ಮನೆಯಿಂದ ಹೊರಗೆ ಹೋಗಿದ್ದರು. ಇದನ್ನೂ ಓದಿ: ಬಿಗ್ ಬಾಸ್ ಮನೆಯಿಂದ ಹೊರಬಂದ ಓಂ ಪ್ರಕಾಶ್ ರಾವ್

