ನವದೆಹಲಿ: ಇಂದಿರಾಗಾಂಧಿ ಏರ್‌ಪೋರ್ಟ್‌ನಲ್ಲಿ (Indira Gandhi Airport) ಇಮಿಗ್ರೇಷನ್ ಚೆಕ್ ಮಾಡದೇ ಮೂವರು ವಿದೇಶಿಯರಿಗೆ ಪ್ರಯಾಣಕ್ಕೆ ಅನುಮತಿ ನೀಡಿದ್ದಕ್ಕೆ ಡಿಜಿಸಿಎ (DGCA) ಏರ್ ಇಂಡಿಯಾ (Air India) ಸಿಇಒಗೆ ಶೋಕಾಸ್ ನೋಟಿಸ್ ಹೊರಡಿಸಲಾಗಿದೆ.
ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತಾ ಲೋಪವಾಗಿರುವುದಾಗಿ ವರದಿಯಾಗಿದೆ. ಮೂವರು ಇಟಾಲಿಯನ್ ಪ್ರಜೆಗಳು ಅಗತ್ಯ ಇರುವ ಇಮಿಗ್ರೇಷನ್ ಕ್ಲಿಯರೆನ್ಸ್ ಪಡೆಯದೇ ಜರ್ಮನಿಗೆ ಪ್ರಯಾಣಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: 25 ವರ್ಷಗಳ ಜನಪರ ಸೇವೆ; ಮೋದಿಯವರ ಸಾಧನೆಗಳನ್ನು ತಿಳಿಸಲು ಸೇವಾ ಸಂಕಲ್ಪ ಅಭಿಯಾನ
ಈ ಸಂಬಂಧ ನಾಗರಿಕ ವಿಮಾನಯಾನ ಸಚಿವಾಲಯವು ಏರ್ ಇಂಡಿಯಾಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಿದ್ದು, ಉತ್ತರಿಸಲು 7 ದಿನಗಳ ಕಾಲಾವಕಾಶವನ್ನು ನೀಡಿದೆ. ಇನ್ನೊಂದೆಡೆ ಸ್ಪೆಸ್ ಜೆಟ್ (Spice Jet) 2 ವಿಮಾನ 24 ಗಂಟೆಗೂ ಹೆಚ್ಚು ಕಾಲ ವಿಳಂಬವಾಗಿದ್ದರಿಂದ ಸ್ಪೇಸ್ ಜೆಟ್ ಆಡಳಿತ ಮಂಡಳಿ ವಿರುದ್ಧ ಪ್ರಯಾಣಿಕರು ರೊಚ್ಚಿಗೆದ್ದಿದ್ದಾರೆ. ದೆಹಲಿ ಹಾಗೂ ದುಬೈ ನಡುವೆ ಸಂಚರಿಸಬೇಕಿದ್ದ ವಿಮಾನ 24 ತಾಸಿಗೂ ಹೆಚ್ಚು ಗಂಟೆ ವಿಳಂಬ ಆಗಿತ್ತು.

