– ದೊಡ್ಮನೆಯಲ್ಲಿ ಮೊದಲ ನಾಮಿನೇಷನ್‌ಗೂ ಮುನ್ನವೇ ಕಿರಿಕ್
ಬಿಗ್‌ಬಾಸ್ ಸೀಸನ್ 13ರ ಮೊದಲ ವಾರದ ನಾಮಿನೇಷನ್ ಪ್ರಕ್ರಿಗೂ ಮುನ್ನವೇ ಮನೆಯೊಳಗೆ ಸ್ಪರ್ಧಿಗಳ ನಡುವಿನ ಕಿರಿಕ್ ಜೋರಾಗಿದೆ. ನಾಮಿನೇಷನ್‌ಗಾಗಿ ನಡೆದ ಟಾಸ್ಕ್‌ವೊಂದು ವೈಯಕ್ತಿಕ ಜಗಳಕ್ಕೆ ತಿರುಗಿದ್ದು, ಮಂಜು ಹಾಗೂ ಕಾವ್ಯ ಗೌಡ ನಡುವಿನ ಮಾತಿನ ಸಮರ ಇದೀಗ ಬಿಗ್‌ಬಾಸ್ ಮನೆಯ ಹಾಟ್ ಟಾಪಿಕ್ ಆಗಿದೆ.
ನಾಮಿನೇಷನ್ ಪ್ರಕ್ರಿಯೆಯ ಭಾಗವಾಗಿ ನಡೆದ ಟಾಸ್ಕ್ ವೇಳೆ ಸೌಂದರ್ಯ ಶೆಟ್ಟಿ ಅವರನ್ನ ಟೀಕಿಸುವ ಸಂದರ್ಭದಲ್ಲಿ ಮಂಜು ಬಳಸಿದ ‘ಕ್ಯಾರೆಕ್ಟರ್ ಲೆಸ್’ ಎಂಬ ಪದಕ್ಕೆ ಕಾವ್ಯ ಕೆರಳಿ ಕೆಂಡವಾಗಿದ್ದಾರೆ.
ಇದು nominationಗಾಗಿ war? ಅಥವಾ Character ಬಗ್ಗೆ ನಡೀತಿರೋ ಜಗಳನಾ?
ಬಿಗ್ ಬಾಸ್ | ಸೋಮ – ಶುಕ್ರ ರಾತ್ರಿ 9:30 | ಶನಿ – ಭಾನು ರಾತ್ರಿ 9:00#BBK13 #ColorsKannada #ಕಲರ್‌ಫುಲ್‌ಕತೆ #colorfulstory #KichchaSudeepa #CKPromo pic.twitter.com/wdE5ADXmwN
— Colors Kannada (@ColorsKannada) September 15, 2026
ಮಂಜು ಮಾತಿಗೆ ರೊಚ್ಚಿಗೆದ್ದ ಕಾವ್ಯ, “ಎಲ್ಲರೂ ಕ್ಯಾರೆಕ್ಟರ್ ಲೆಸ್, ನೀನೊಬ್ಬ ಮಾತ್ರ ಕ್ಯಾರೆಕ್ಟರ್ ಇರೋನಾ ಇಲ್ಲಿ?” ಎಂದು ಪ್ರಶ್ನಿಸಿದ್ದಾರೆ. ಇದರಿಂದ ಇಬ್ಬರ ನಡುವಿನ ಮಾತಿನ ಚಕಮಕಿ ಮತ್ತಷ್ಟು ತೀವ್ರಗೊಂಡಿದೆ. ಇದಕ್ಕೆ ಪ್ರತಿಕ್ರಿಯಿಸಿದ ಮಂಜು, “50 ಪೈಸೆ ಪ್ರಯೋಜನವಿಲ್ಲ” ಎಂಬರ್ಥದಲ್ಲಿ ಕಾವ್ಯರನ್ನು ಕೆಣಕಿದ್ದಾರೆ. ಇದಕ್ಕೆ ಕಾವ್ಯ ಕೂಡ ಖಾರವಾಗಿ ಪ್ರತಿಕ್ರಿಯಿಸಿದ್ದು, “ಚೆನ್ನಾಗಿ ಜಾಲಾಡಿಸಿಬಿಡ್ತೀನಿ” ಎಂದು ಎಚ್ಚರಿಕೆ ನೀಡಿದ್ದಾರೆ.

ಇಷ್ಟಕ್ಕೇ ನಿಲ್ಲದ ಮಾತಿನ ಸಮರ ಮತ್ತಷ್ಟು ವೈಯಕ್ತಿಕ ಹಂತಕ್ಕೆ ತಲುಪಿದೆ. ಮಂಜು, ತಮ್ಮ ಬಗ್ಗೆ ಮಾತನಾಡಲು ಬಂದರೆ “ನೀನು ಹೆಣ್ಣೇ ಅಲ್ಲ” ಎಂದು ಹೇಳುವುದಾಗಿ ತಿರುಗೇಟು ನೀಡಿದರೆ, ಇದಕ್ಕೆ ಕಾವ್ಯ ಕೂಡ “ನೀನು ಗಂಡ್ಸೇ ಅಲ್ಲ” ಎಂದು ಕೌಂಟರ್ ಕೊಟ್ಟಿದ್ದಾರೆ.

ಒಟ್ಟಿನಲ್ಲಿ ಬಿಗ್‌ಬಾಸ್ ಸೀಸನ್ 13ರ ಮೊದಲ ನಾಮಿನೇಷನ್ ಪ್ರಕ್ರಿಯೆಗೂ ಮುನ್ನವೇ ಮನೆಯ ವಾತಾವರಣ ಬಿಸಿಯಾಗಿರುವುದು ಪ್ರೋಮೋದಲ್ಲಿ ಸ್ಪಷ್ಟವಾಗಿದೆ. ಟಾಸ್ಕ್‌ಗಾಗಿ ಆರಂಭವಾದ ಮಾತಿನ ಚಕಮಕಿ ವೈಯಕ್ತಿಕ ವಿಚಾರದವರೆಗೆ ತಲುಪಿರುವುದು ವೀಕ್ಷಕರ ಕುತೂಹಲ ಹೆಚ್ಚಿಸಿದೆ. ಹಾಗಾದರೆ ಇದು ನಾಮಿನೇಷನ್‌ಗಾಗಿ ನಡೆದ ಟಾಸ್ಕ್ ವಾರವೇ? ಅಥವಾ ‘ಕ್ಯಾರೆಕ್ಟರ್’ ವಿಚಾರಕ್ಕೆ ತಿರುಗಿದ ವೈಯಕ್ತಿಕ ಜಗಳವೇ? ಎಂಬುದನ್ನು ಮುಂದಿನ ಸಂಚಿಕೆಯಲ್ಲಿ ಕಾದುನೋಡಬೇಕಿದೆ.

